Monday, 6th January 2025

Pradeep Eshwar: ಶೀಘ್ರದಲ್ಲಿಯೇ ಅಡ್ಡಮತದಾನ ಮಾಡಿದವರ ವಿಚಾರದಲ್ಲಿ ಕ್ರಮ-ಶಾಸಕ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ನಿಂದ ಗೆದ್ದು ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವ ಮೂಲಕ ವಿಫ್ ಉಲ್ಲಂಘಿಸಿದ ನಮ್ಮ ಪಕ್ಷದ 5 ಮಂದಿ ನಗರಸಭಾ ಸದಸ್ಯರಿಗೆ ಕಾನೂನು ಪ್ರಕಾರ ಯಾವ ಕ್ರಮ ಜರುಗಿಸಬೇಕೋ ಅದು ಆಗಿಯೇ ತೀರುತ್ತದೆ. ಇದರಲ್ಲಿ ಅನುಮಾನವೇ ಬೇಡ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ನಮಸ್ತೆ ಚಿಕ್ಕಬಳ್ಳಾಪುರ ಮೂಲಕ ಮನೆ ಮತಾಗಿರುವ ಶಾಸಕ ಪ್ರದೀಪ್ ಈಶ್ವರ್ ಪ್ರತಿ ಮನೆ ಮನೆಗೂ ತೆರಳಿ ಸಾರ್ವಜನಿಕ ಕಷ್ಟ ಸುಖಗಳನ್ನು ಕೇಳಿ ನಿವಾರಿಸುವ ಕೆಲಸ ಮಾಡುತ್ತಿದ್ದು ಇಂದು ನಗರದ 24 ನೇ ವಾರ್ಡಿಗೆ ಅಭಿವೃದ್ಧಿಗೆ 14 ಕೋಟಿ ಮೀಸಲಿಟ್ಟಿದ್ದು ಅಧಿಕಾರಿಗಳ ಜೊತೆ ಬೇಟಿ ಕೊಟ್ಟು ಸಾರ್ವಜನಿಕ ಕಷ್ಟ ಹಾಲಿಸಿದ್ದಾರೆ ಈ ಕುರಿತು ಒಂದು ವರದಿ..

24ನೇ ವಾರ್ಡಿಗೆ 14ಕೋಟಿ ಅನುದಾನ
ಚಿಕ್ಕಬಳ್ಳಾಪುರ ನಗರದ ೨೪ನೇ ವಾರ್ಡಿಗೆ ಬೆಳ್ಳಂ ಬೆಳಗೆ ನಗರಸಭೆ ಅಧಿಕಾರಿಗಳೊಟ್ಟಿಗೆ ಭೇಟಿ ಕೊಟ್ಟು ಗಮನ ಸೆಳೆದರಲ್ಲದೆ,ಈ ಭಾಗದಲ್ಲಿ ಮನೆ ಮನೆಗೂ ತೆರಳಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ೨೪ನೇ ವಾರ್ಡಿನಲ್ಲಿ ನಿವಾಸಿಗಳು ತಾವು ಎದುರಿಸುತ್ತಿರುವ ರಸ್ತೆ,ಚರಂಡಿ,ಉದ್ಯಾನವನ,ಕಲ್ಯಾಣಿ ಸ್ವಚ್ಛತೆ, ವಿದ್ಯುತ್ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಖುದ್ಧಾಗಿ ಶಾಸಕರ ಗಮನಕ್ಕೆ ತಂದರು.ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳ ಗಮನಕ್ಕೆ ತಂದ ಶಾಸಕರು ತುರ್ತಾಗಿ ಪರಿಹರಿಸುವಂತೆ ನಿರ್ದೇಶನ ನೀಡಿದರು.ಈ ವೇಳೆ ಮಾದ್ಯಮ ಮಿತ್ರರು ನಗರಸಭೆ ಸದಸ್ಯರು, ಅಧ್ಯಕ್ಷರನ್ನು ಜತೆಗಿಟ್ಟುಕೊಂಡು ನಗರಸಂಚಾರ ಮಾಡಿದರೆ ಉತ್ತಮ ಅಲ್ಲವೆ? ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಯಿಸಿ ಅವರೂ ಬರಲಿ,ಜನರ ಕಷ್ಟ ಆಲಿಸಲು ಬರುವವರಿಗೆ ಸದಾ ಸ್ವಾಗತಕೋರುವೆ.೨೪ನೇ ವಾರ್ಡಿನ ಸದಸ್ಯರಿಗೆ ನಾನೇ ಕರೆದೆ.ಅವರು ಕಾಶ್ಮೀರಕ್ಕೆ ಅವರ ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದಾರೆ ಎಂಬ ಮಾಹಿತಿಯಿದೆ. ನಾನು ಬರಲೇಬೇಕು ಬಂದಿದ್ದೇನೆ ಈ ವಾರ್ಡಿನ ಅಭಿವೃದ್ಧಿ ವಿಚಾರವಾಗಿ ಈಗಾಗಲೇ ೧೪ ಕೋಟಿ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇದೊಂದು ಮಾದರಿ ವಾರ್ಡ್ ಆಗುವುದರಲ್ಲಿ ಅನುಮಾನವೇ ಬೇಡ ಎಂದರು.

ಜನರ ಕಷ್ಟ ಆಲಿಸಲು ಕಾರ್ಯಕ್ರಮ
ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಮೂಲಕ ಚಿಕ್ಕಬಳ್ಳಾಪುರ ನಗರದಲ್ಲಿ ಈಗಾಗಲೇ ೧೩ ವಾಡ್‌ರ್ಗಳಲ್ಲಿ ಮನೆಮನೆ ಭೇಟಿ ಮುಗಿಸಿದ್ದೇನೆ. ಇನ್ನುಳಿದ ಕಾಲಾವಧಿಯಲ್ಲಿ ಉಳಿದನಗರಸಭೆ ವಾರ್ಡ್ಗಳ ಸಮಸ್ಯೆ ಆಲಿಸುವ ಕೆಲಸ ಮಾಡುತ್ತೇನೆ. ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮದ ಮೂಲಕ ಪ್ರತಿ ಹಳ್ಳಿಗೂ ಅಧಿಕಾರಿಗಳ ಜೊತೆ ಬೇಟಿ ಕೊಟ್ಟು ಗ್ರಾಮಸ್ಥರು ಕಷ್ಟ ಸುಖ ಕೇಳೆ ಅಲ್ಲೆ ಬಗೆಹರಿಸುವ ಕೆಲಸ ಮಾಡುತ್ತಿದ್ದು ಅದೂ ಕೂಡ ತಾಲೂಕು ವ್ಯಾಪ್ತಿ ಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.ಈ ಮೂಲಕ ಪ್ರತಿಗ್ರಾಮಕ್ಕೂ  ತೆರಳಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ಕೆಲಸ ಮಾಡುತ್ತೇನೆ. ಇದನ್ನೆಲ್ಲಾ ಕಾಳಜಿಯಿಂದ ಮಾಡುತ್ತಿದ್ದೇನೆ ವಿನಃ ಕಾಟಾಚಾರಕ್ಕೋ ಪ್ರಚಾರಕ್ಕೋ ಮಾಡುತ್ತಿಲ್ಲ ಎಂದರು.

ವಾರ್ಡ್ ೧ರ ನಿವಾಸಿಗಳಿಗೆ ತೊಂದರೆ ಕೊಡಲ್ಲ
ರೇಷ್ಮೆ ಗೂಡು ಮಾರುಕಟ್ಟೆ ಸಮೀಪ ಇರುವ ರಾಜಕಾಲುವೆ ಮೇಲೆ ಮನೆಗಳನ್ನು ಕಟ್ಟಿ ವಾಸವಿರುವ ೧೮೦ ಮನೆಗಳ ನಿವಾಸಿಗಳ ತೆರವು ಕಾರ್ಯಾಚರಣೆಗೂ ಮೊದಲು ಅವರಿಗೆ ವಸತಿ ಸೌಲಭ್ಯ ಕಲ್ಪಿಸಲು ಸರಕಾರದೊಟ್ಟಿಗೆ ಚರ್ಚೆ ಮಾಡುತ್ತಿದ್ದೇನೆ. ಶಾಸಕನಾದ ಮೊದಲ ಭೇಟಿಯಲ್ಲಿ ತೆರವು ಮಾಡುವ ಭರವಸೆ ನೀಡಿದ್ದು ಸತ್ಯ.ಇದು ಪಾಳಿಸಿ ಮ್ಯಾಟರ್ ಆಗಿರುವ ಕಾರಣ ಆದಷ್ಟು ಬೇಗ ಪರ್ಯಾಯ ವ್ಯವಸ್ಥೆ ಮಾಡಿ ತೆರವು ಕಾರ್ಯಾಚರಣೆ ಮಾಡಲಾಗು ವುದು ಎಂದು ಮಾಧ್ಯಮವರ ಪ್ರಶ್ನೆಗೆ ಉತ್ತರಿಸಿದರು.

ಅಭಿವೃದ್ಧಿಯೇ ನನ್ನ ಧ್ಯೇಯ
ಮುಸ್ಟೂರು ರಸ್ತೆಗೆ ೩.೫ಕೋಟಿ ಅನುದಾನ,ಕಂದವಾರಕ್ಕೆ ೮ ಕೋಟಿ, ದಿನ್ನೆಹೊಸಹಳ್ಳಿ ರಸ್ತೆಗೆ ಅನುದಾನ ಒದಗಿಸಿ ದ್ದೇನೆ. ವಾರ್ಡ್ ೨೪ಕ್ಕೆ ೧೪ಕೋಟಿ ಅನುದಾನ ನೀಡಲಾಗಿದೆ.ಶಾಸಕರ ಅನುದಾಣದಲ್ಲಿ ಒಂದೊಂದು ವರ್ಷದಲ್ಲಿ ಒಂದೊAದು ವಾರ್ಡ್ ಅಭಿವೃದ್ದಿ ಮಾಡುತ್ತಾ ಬರುವ ಯೋಜನೆಯಿದೆ ಎಂದರು. ಇವೆಲ್ಲಾ ಅಭಿವೃದ್ಧಿ ಅಲ್ಲವೆ? ಕೆಲವರಿಗೆ ಅಭಿವೃದ್ಧಿ ಆಗಿಲ್ಲ ಎಂದು ಹೇಳುವುದೇ ಉದ್ಯೋಗವಾಗಿದೆ ಎಂದು ಕಿಡಿಕಾರಿದರು.

ರಾಜೀನಾಮೆ ಅಗತ್ಯವಿಲ್ಲ !!
ಸಿದ್ಧರಾಮಯ್ಯ ಒಬ್ಬರ ಮೇಲೆ ಮಾತ್ರ ಎಫ್‌ಐಆರ್ ಆಗಿಲ್ಲ. ಕುಮಾರಸ್ವಾಮಿ ಮೇಲೆ ಆಗಿಲ್ವಾ,ಯಡಿಯೂರಪ್ಪ ಮೇಲೆ ಆಗಿಲ್ವಾ,ವಿಜಯೇಂದ್ರ ಮೇಲೆ ಇಲ್ವಾ,ಅವರೆಲ್ಲಾ ರಾಜೀನಾಮೆ ಕೊಟ್ಟು ಮೇಲ್ಪಂಕ್ತಿ ಹಾಕಲಿ, ಅಹಿಂದ ನಾಯಕರನ್ನು ತುಳಿಯುವ ಕೆಲಸ ಬಿಜೆಪಿ ಜೆಡಿಎಸ್‌ನಿಂದ ವ್ಯವಸ್ಥಿತವಾಗಿ ಆಗುತ್ತಿದೆ.ಇದನ್ನು ಹೇಗೆ ಎದುರಿಸಬೇಕು ಎಂದು ಪಕ್ಷದ ಹೈಕಮಾಂಡ್,ಮುಖ್ಯಮAತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದರು.

ಮುಂದಿನವಾರ ಮಂಚೇನಹಳ್ಳಿ ಭೇಟಿ
ನಮ್ಮ ಶಾಸಕ ನಮ್ಮ ಹಳ್ಳಿಗೆ ಎಂಬ ಕಾರ್ಯಕ್ರಮದ ಮೂಲಕ ಕ್ಷೇತ್ರದರ್ಶನ ಮಾಡಲು ಮುಂದಾಗಿದ್ದು ಈಗಾಗಲೇ ೧೧ ಹಳ್ಳಿಗಳನ್ನು ಮುಗಿಸಿದ್ದೇನೆ.ಮುಂದಿನ ವಾರ ಮಂಚೇನಹಳ್ಳಿಯಲ್ಲಿ ಚಿಕ್ಕಬಳ್ಳಾಪುರ ಗೌರಿಬಿದನೂರು ಎರಡೂ ತಾಲೂಕು ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಜನರ ಕಷ್ಟಾಲಿಸಿ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ನಮ್ಮ ಮೇಲೆ ಮುಖ್ಯಮಂತ್ರಿಗಳಿಗೆ ವಿಶೇಷ ಕಾಳಜಿ ಇದ್ದ ಕಾರಣಕ್ಕೆ ನಗರೋತ್ಥಾನದಲ್ಲಿ ವಾಪಸ್ಸು ಹೋಗಿದ್ದ ೪೦ಕೋಟಿ ವಾಪಸ್ಸು ತರಲಾಗಿದೆ.ಮುನ್ಸಿಪಲ್ ಡಿಗ್ರಿ ಕಾಲೇಜಿಗೆ ೬ಕೋಟಿ.ಮಹಿಳಾ ಕಾಲೇಜಿಗೆ ೪ಕೋಟಿ, ಡಯಾಗ್ನೋಸ್ಟಿಕ್ ಸೆಂಟರ್‌ಗೆ ೧೬ಕೋಟಿ ಎಂಆರ್‌ಐ ಸ್ಕಾನ್ ಉಪಕರಣ ಲ್ಯಾಬ್‌ಗೆ ೮ಕೋಟಿ ಇಪ್ಪತ್ತು ಲಕ್ಷ ತಂದಿದ್ದೇವೆ.ಅಕ್ಟೋಬರ್ ೨ಕ್ಕೆ ಶಂಕುಸ್ಥಾಪನೆ ಆಗಲಿದ್ದು ೨೦೨೫ರ ವೇಳೆಗೆ ಜನಬಳಕೆಗೆ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಆ ಮೆಡಿಕಲ್ ಕಾಲೇಜು ಕಾಮಗಾರಿ ಪೂರ್ಣಗೊಳಿಸಲು ೩೦೦ಕೋಟಿ ರೂಪಾಯಿ ಮೊನ್ನೆಯ ಕ್ಯಾಬಿನೇಟ್‌ನಲ್ಲಿ ಬಿಡುಗಡೆ ಮಾಡಿಸಿದ್ದೇನೆ.ಇದೆಲ್ಲಾ ಅಭಿವೃದ್ಧಿ ಅಲ್ಲವೆ?ಹೊಸ ಆಸ್ಪತ್ರೆ ಪ್ರಾರಂಬಿಸಲು ೮೦ಕೋಟಿ ಪ್ರಪೋಸಲ್ ಇದೆ. ಇವೆಲ್ಲಾ ದಾಖಲೆಗಳಲ್ಲಿ ದೊರೆಯುವ ಮಾಹಿತಿ, ಬಿಜೆಪಿ, ಜೆಡಿಎಸ್ ನವರು ಹೇಳಿದಂತೆ ಬಾಯಿ ಮಾತಿನ ವಿಚಾರವಲ್ಲ ಎಂದು ಕುಟುಕಿದರು.

ಸ್ವಾಗತ ಕಮಾನು ನಿರ್ಮಿಸಲಾಗುವುದು
ಚಿಕ್ಕಬಳ್ಳಾಪುರ ನಗರಕ್ಕೆ ಬರುವ ನಾಲ್ಕುದಿಕ್ಕುಗಳಲ್ಲಿ ಸ್ವಾಗಕ ಕಮಾನು ಮಾಡಲು ಯೋಜನೆ ರೂಪಿಸಲಾಗಿದೆ. ಇದಕ್ಕೊಂದು ಸುಂದರ ಹೆಸರು ಇಡಲು ಕೂಡ ಚಿಂತಿಸಲಾಗಿದೆ. ಆದಷ್ಟು ಬೇಗ ಇದಕ್ಕೆ ಚಾಲನೆ ನೀಡಲಾಗುವುದು. ಹೆದ್ದಾರಿ ಅಗಲೀಕರಣ ಆದ ನಂತರ ಮಹಿಳಾ ಕಾಲೇಜಿನ ಬಳಿ ಬಸ್‌ನಿಲ್ದಾನ ಮಾಡಿ ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಡಲಾಗುವುದು.ನನಗೂ ರಾಜಕಾರಣ ಗೊತ್ತಿದೆ. ಅವರಂತೆ ಮನೆಯ ಬಳಿ ನಾಯಕರನ್ನು ಕರೆಸಿಕೊಂಡು, ದೊಡ್ಡ ದೊಡ್ಡ ಬೋರ್ಡುಗಳನ್ನು ಹಾಕಿಸಿಕೊಂಡು ಕೆಲಸ ಮಾಡಲ್ಲ. ಜನರಬಳಿಗೇ ನಾನು ಹೋಗಿ ಅವರ ಕಷ್ಟಗಳನ್ನು ಪರಿಹರಿಸುತ್ತೇನೆ ಎಂದರು.

ರೈಲ್ವೇ ಮೇಲ್ಸೇತುವೆಗೆ ಚಾಲನೆ

ಚದಲಪುರದಿಂದ ಚಿಕ್ಕಬಳ್ಳಾಪುರ ನಗರಕ್ಕೆ ಬರುವಾಗ ಎದುರಾಗುವ ರೈಲ್ವೇ ಗೇಟ್ ಕಿರಿಕಿರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮೇಲ್ಸೆತುವೆ ೯೦ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ನನ್ನ ಅನುದಾನದಲ್ಲಿ ೧ ಕೋಟಿ ಹಣವನ್ನು ಮೀಸಲಿಟ್ಟಿದ್ದೇನೆ. ಬಿಜೆಪಿ ಜೆಡಿಎಸ್ ಮುಖಂಡರಿಗೆ ಈಸತ್ಯ ಮನದಟ್ಟಾಗಬೇಕಾದರೆ ಬಜೆಟ್ ಕಾಪಿ ನೋಡಲಿ ಎಂದು ತಿರುಗೇಟು ನೀಡಿದ ಶಾಸಕರು,ಎಂ.ಜಿ ರಸ್ತೆ ಅಗಲೀಕರಣ ಇಷ್ಟುವರ್ಷ ಆದರೂ ಯಾಕೆ ಮಾಡಿರಲಿಲ್ಲ.ಇದು ನನ್ನದು ಎನ್ನುವವರು ಅವರು ಅಧಿಕಾರದಲ್ಲಿದ್ದಾಗ ಯಾಕೆ ಮಾಡಲು ಮುಂದಗಲಿಲ್ಲ?ಯಾಕೆAದರೆ ಜನರ ವಿರೋಧ ಕಟ್ಟಿಕೊಳ್ಳುವುದು ಬೇಡ ಎನ್ನುವುದೇ ಆಗಿತ್ತು ಎಂದರು.