ದೂರ ಪ್ರಯಾಣ (Long distance travel) ಹೋಗುವಾಗ ಹೆಚ್ಚಾಗಿ ಮೊಬೈಲ್ ಬ್ಯಾಟರಿ (Battery Save) ಕೈಕೊಡುವುದು ಇದೆ. ಇದರಿಂದ ನಮ್ಮ ಯೋಜನೆಗಳೆಲ್ಲ ಏರುಪೇರಾಗುವ ಸಾಧ್ಯತೆಗಳೂ ಇರುತ್ತವೆ. ಹೀಗಾಗಿ ಪ್ರಯಾಣ ಹೊರಡುವಾಗ ಸ್ಮಾರ್ಟ್ ಫೋನ್ (smartphone) ಬ್ಯಾಟರಿ ಅವಧಿಯನ್ನು (Battery life) ಹೆಚ್ಚಿಸುವತ್ತ ಗಮನ ಕೊಡುವುದು ಬಹು ಮುಖ್ಯವಾಗಿರುತ್ತದೆ.
ದೂರದ ಊರಿಗೆ ಪ್ರಯಾಣಿಸುವಾಗ, ತುರ್ತು ಸಂದರ್ಭದಲ್ಲಿ ಜನರನ್ನು ಸಂಪರ್ಕಿಸಲು ಫೋನ್ ನಲ್ಲಿ ಸಾಕಷ್ಟು ಬ್ಯಾಟರಿ ಇರುವುದು ಬಹುಮುಖ್ಯ. ಅದಕ್ಕಾಗಿ ಈ ಕೆಲವು ಸಲಹೆಗಳನ್ನು ಪಾಲಿಸಿದರೆ ತುರ್ತು ಸಂದರ್ಭದಲ್ಲಿ ಸಂದೇಶ ಕಳುಹಿಸಲು ಮೊಬೈಲ್ ನಲ್ಲಿ ಬ್ಯಾಟರಿ ಸೇವ್ ಮಾಡಿಕೊಳ್ಳಬಹುದು.
ಪರದೆಯ ಹೊಳಪು ಕಡಿಮೆ ಮಾಡಿ
ಪರದೆಯ ಹೊಳಪನ್ನು ಕಡಿಮೆ ಮಾಡಿ ಅಥವಾ ಹೊಂದಾಣಿಕೆಯ ಹೊಳಪನ್ನು ಸಕ್ರಿಯಗೊಳಿಸಿ. ಇದರಿಂದ ಸಾಕಷ್ಟು ಬ್ಯಾಟರಿ ಸೇವ್ ಮಾಡಿಕೊಳ್ಳಬಹುದು.
ಬ್ಯಾಟರಿ ಸೇವ್ ಮೋಡ್
ಹೆಚ್ಚಿನ ಸ್ಮಾರ್ಟ್ಫೋನ್ಗಳು ಬ್ಯಾಟರಿ ಸೇವ್ ಮೋಡ್ ಇರುತ್ತದೆ. ಇದನ್ನು ಆಕ್ಟಿವ್ ಮಾಡಿದರೆ ಮೊಬೈಲ್ ಬ್ಯಾಟರಿಯನ್ನು ಸೇವ್ ಮಾಡಿಕೊಳ್ಳಬಹುದು.
ಅನಗತ್ಯ ಅಪ್ಲಿಕೇಶನ್ಗಳನ್ನು ಮುಚ್ಚಿ
ಬಳಕೆದಾರರು ಸಂಪೂರ್ಣವಾಗಿ ಅಪ್ಲಿಕೇಶನ್ಗಳನ್ನು ಮುಚ್ಚುವುದಿಲ್ಲ. ಇದರಿಂದ ಆಗಾಗ ನೋಟಿಫಿಕೇಶನ್ಗಳು ಬರುತ್ತಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ ಈಗಾಗಲೇ ತೆರೆದಿರುವ ಅಪ್ಲಿಕೇಶನ್ಗಳು ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಬ್ಯಾಟರಿಯನ್ನು ಬಳಸುತ್ತವೆ. ಹೀಗಾಗಿ ದೂರ ಪ್ರಯಾಣಿಸುವಾಗ ಅಗತ್ಯವಿಲ್ಲದ ಅಪ್ಲಿಕೇಶನ್ಗಳನ್ನು ನಿಲ್ಲಿಸಿದರೆ ಮೊಬೈಲ್ ಬ್ಯಾಟರಿ ಸೇವ್ ಮಾಡಬಹುದು.
ಸ್ಥಳ ತೋರಿಸುವುದನ್ನು ನಿಷ್ಕ್ರಿಯಗೊಳಿಸಿ
ಅಗತ್ಯವಿಲ್ಲದಿದ್ದಾಗ ಜಿಪಿಎಸ್, ಸ್ಥಳ ಟ್ರ್ಯಾಕಿಂಗ್ ಆಪ್ಗಳನ್ನು ಸ್ವಿಚ್ ಆಫ್ ಮಾಡಿ. ಇದು ಸಾಕಷ್ಟು ಬ್ಯಾಟರಿಯನ್ನು ಉಳಿಸಲು ಸಹಾಯ ಮಾಡುತ್ತದೆ. ಕ್ವಿಕ್ ಟೈಲ್ ಮೆನುವಿನಿಂದ ಜಿಪಿಎಸ್ ಅನ್ನು ಸಹ ನಿಷ್ಕ್ರಿಯಗೊಳಿಸಬಹುದು.
ಇಮೇಲ್ ನೋಟಿಫಿಕೇಷನ್ ಆಫ್ ಮಾಡಿ
ಇಮೇಲ್ ನೋಟಿಫಿಕೇಷನ್ ಬರುವುದನ್ನು ಆಫ್ ಮಾಡಿ. ಇದರಿಂದ ಅಗತ್ಯವಿಲ್ಲದ ಕೆಲವು ಅಧಿಸೂಚನೆಗಳನ್ನು ನಿಷ್ಕ್ರಿಯಗೊಳಿಸಬಹುದು.
ಬ್ಯಾಕ್ಗ್ರೌಂಡ್ ಅಪ್ಲಿಕೇಶನ್ ನಿಷ್ಕ್ರಿಯಗೊಳಿಸಿ
ಅಪ್ಲಿಕೇಶನ್ಗಳನ್ನು ಮುಚ್ಚಿದ್ದರೂ ನವೀಕರಣ, ಡೌನ್ಲೋಡ್ ಮಾಡಲು ಅಧಿಸೂಚನೆಗಳು ಬರುತ್ತಿರುತ್ತವೆ. ಇದು ಸಾಕಷ್ಟು ಡೇಟಾ ಮತ್ತು ಬ್ಯಾಟರಿಯನ್ನು ಬಳಸುತ್ತದೆ. ಫೋನ್ನಲ್ಲಿ ಬ್ಯಾಕ್ಗ್ರೌಂಡ್ ಅಪ್ಲಿಕೇಶನ್ ರಿಫ್ರೆಶ್ ಅನ್ನು ನಿಷ್ಕ್ರಿಯಗೊಳಿಸುವ ಮೂಲಕ ಬ್ಯಾಟರಿ ಜೀವಿತಾವಧಿಯನ್ನು ಹೆಚ್ಚಿಸಬಹುದು.
ಏರ್ಪ್ಲೇನ್ ಮೋಡ್ ಬಳಸಿ
ಕರೆ, ಸಂದೇಶ ಅಥವಾ ಇಂಟರ್ನೆಟ್ ಪ್ರವೇಶದ ಅಗತ್ಯವಿಲ್ಲದಿದ್ದಾಗ ಏರ್ಪ್ಲೇನ್ ಮೋಡ್ ಅನ್ನು ಆನ್ ಮಾಡಿ ಅಥವಾ ಎಲ್ಲಾ ವೈರ್ಲೆಸ್ ಸಂಪರ್ಕಗಳನ್ನು ನಿಷ್ಕ್ರಿಯಗೊಳಿಸಲು ಫ್ಲೈಟ್ ಮೋಡ್ ಸಕ್ರಿಯಗೊಳಿಸಿ. ಇದು ಬ್ಯಾಟರಿಯನ್ನು ಉಳಿಸಲು ಸಹಾಯ ಮಾಡುತ್ತದೆ.
ಸ್ಟ್ರೀಮಿಂಗ್ ಮತ್ತು ಗೇಮಿಂಗ್ಗೆ ಮಿತಿ ಇರಲಿ
ಗೇಮಿಂಗ್ ಅಥವಾ ಸ್ಟ್ರೀಮಿಂಗ್ ಹೆಚ್ಚಿನ ಬ್ಯಾಟರಿ ಮತ್ತು ಡೇಟಾ ಬಳಸುತ್ತದೆ. ಹೀಗಾಗಿ ಬ್ಯಾಟರಿ ಕಡಿಮೆ ಇರುವಾಗ ಅವುಗಳ ಬಳಕೆಯನ್ನು ಮಿತಿಗೊಳಿಸಿ.
ನಕ್ಷೆಗಳಿಗೆ ಆಫ್ಲೈನ್ ಬಳಸಿ
ಪ್ರಯಾಣದ ಸಮಯದಲ್ಲಿ ನ್ಯಾವಿಗೇಷನ್ ಅಗತ್ಯವಿದ್ದರೆ ನಿರಂತರ ಜಿಪಿಎಸ್ ಬಳಕೆಯನ್ನು ತಪ್ಪಿಸಲು ಪ್ರವಾಸದ ಮೊದಲು ಆಫ್ಲೈನ್ ಬಳಕೆಗಾಗಿ ಸಂಬಂಧಿತ ನಕ್ಷೆಗಳನ್ನು ಡೌನ್ಲೋಡ್ ಮಾಡಿ. ಆದರೆ ಆಫ್ಲೈನ್ ನಕ್ಷೆಗಳೊಂದಿಗೆ ನೈಜ ಸಮಯದ ಟ್ರಾಫಿಕ್ ಅನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ. ಇದು ಬ್ಯಾಟರಿಯನ್ನು ಉಳಿಸುತ್ತದೆ.
ಬ್ಲೂಟೂತ್ ನಿಷ್ಕ್ರಿಯಗೊಳಿಸಿ
ಬ್ಲೂಟೂತ್ ಅನ್ನು ಸಕ್ರಿಯವಾಗಿ ಬಳಸದೇ ಇರುವಾಗ ಅದನ್ನು ಆಫ್ ಮಾಡಿ. ಇದು ಪ್ರಯಾಣ ಮಾಡುವಾಗ ಬ್ಯಾಟರಿಯನ್ನು ಉಳಿಸಲು ಸಹಾಯ ಮಾಡುತ್ತದೆ.
ವೈಬ್ರೇಶನ್ ನಿಷ್ಕ್ರಿಯಗೊಳಿಸಿ
ಸ್ಮಾರ್ಟ್ ಫೋನ್ಗಳಲ್ಲಿ ವೈಬ್ರೇಶನ್ ಹೆಚ್ಚು ಶಕ್ತಿಯನ್ನು ಬಳಸುತ್ತದೆ. ಆದ್ದರಿಂದ ಅವುಗಳನ್ನು ನಿಷ್ಕ್ರಿಯಗೊಳಿಸಿ.
ತಂಪಾದ ಪ್ರದೇಶದಲ್ಲಿ ಫೋನ್ ಇಡಿ
ಹೆಚ್ಚಿನ ತಾಪಮಾನವು ಬ್ಯಾಟರಿ ಅವಧಿಯ ಮೇಲೆ ಪರಿಣಾಮ ಬೀರುತ್ತದೆ. ಫೋನ್ ಮೇಲೆ ನೇರ ಸೂರ್ಯನ ಬೆಳಕು ಬೀಳದಂತೆ ನೋಡಿಕೊಳ್ಳಿ. ಕಾರಿನ ಬಿಸಿಯಾಗುವ ಪ್ರದೇಶಗಳಲ್ಲಿ ಮೊಬೈಲ್ ಇಡಬೇಡಿ.
ಅಪ್ಲಿಕೇಶನ್, ಒಎಸ್ ನವೀಕರಿಸಿ
ಹೊಸ ಆವೃತ್ತಿಗಳು ಸಾಮಾನ್ಯವಾಗಿ ಕಾರ್ಯಕ್ಷಮತೆ ಮತ್ತು ಬ್ಯಾಟರಿ ಆಪ್ಟಿಮೈಸೇಶನ್ಗಳನ್ನು ಹೊಂದಿರುವುದರಿಂದ ಅಪ್ಲಿಕೇಶನ್ಗಳು ಮತ್ತು ಆಪರೇಟಿಂಗ್ ಸಿಸ್ಟಮ್ ಅನ್ನು ಆಗಾಗ ನವೀಕರಿಸುವುದು ಒಳ್ಳೆಯದು. ಇದು ಪ್ರಯಾಣದ ಅವಧಿಯಲ್ಲಿ ಬ್ಯಾಟರಿ ಸೇವ್ ಮಾಡಲು ಸಹಾಯ ಮಾಡುತ್ತದೆ.
ಪವರ್ ಬ್ಯಾಂಕ್ ಜೊತೆ ಇರಲಿ
ಪ್ರಯಾಣದಲ್ಲಿರುವಾಗ ಫೋನ್ ಅನ್ನು ರೀಚಾರ್ಜ್ ಮಾಡಲು ಸಾಕಷ್ಟು ಸಾಮರ್ಥ್ಯದೊಂದಿಗೆ ಉತ್ತಮ ಗುಣಮಟ್ಟದ ಪವರ್ ಬ್ಯಾಂಕ್ ಅನ್ನು ಬಳಸಿ.
Message Safety: ಮೆಸೆಜ್ನಲ್ಲಿ ಎಂದಿಗೂ ಕಳುಹಿಸಬಾರದ 9 ವಿಷಯಗಳಿವು!
ಡಾರ್ಕ್ ಮೋಡ್
ಫೋನ್ OLED ಅಥವಾ AMOLED ಡಿಸ್ ಪ್ಲೇ ಹೊಂದಿದ್ದರೆ ಡಾರ್ಕ್ ಮೋಡ್ ಅನ್ನು ಬಳಸುವುದರಿಂದ ಬ್ಯಾಟರಿಯನ್ನು ಸಾಕಷ್ಟು ಉಳಿಸಬಹುದು. ಯಾಕೆಂದರೆ ಇದು ಬಣ್ಣದ ಪಿಕ್ಸೆಲ್ಗಳನ್ನು ಮಾತ್ರ ಬೆಳಗಿಸುತ್ತವೆ. ಇದರಿಂದ ಸಾಕಷ್ಟು ಬ್ಯಾಟರಿ ಸೇವ್ ಮಾಡಿಕೊಳ್ಳಬಹುದು.