ಶಿಮ್ಲಾ: ಸುಮಾರು 56ವರ್ಷಗಳ ಹಿಂದೆ ಹಿಮಾಚಲ ಪ್ರದೇಶ(Himachal Pradesh)ದಲ್ಲಿ ಸಂಭವಿಸಿದ್ದ ವಿಮಾನ ಪತನ(1968 IAF plane crash)ದಲ್ಲಿ ಮೃತಪಟ್ಟ ನಾಲ್ವರು ಯೋಧರ ಮೃತದೇಹಗಳ ಪತ್ತೆಯಾಗಿವೆ. ಪತ್ತೆಯಾದ ನಾಲ್ವರ ಮೃತದೇಹಗಳ ಪೈಕಿ ಮೂವರನ್ನು ಗುರುತಿಸಲಾಗಿದೆ.
ಫೆಬ್ರವರಿ 7, 1968 ರಂದು, 102 ಜನರಿದ್ದ ಭಾರತೀಯ ವಾಯುಪಡೆಯ (ಐಎಎಫ್) AN-12 ವಿಮಾನವು ಚಂಡೀಗಢದಿಂದ ಟೇಕಾಫ್ ಆದ ಕೆಲವೇ ಗಂಟೆಗಳಲ್ಲಿ ಕಣ್ಮರೆಯಾಗಿತ್ತು. ರೋಹ್ಟಾಂಗ್ ಪಾಸ್ ಬಳಿ ತೀವ್ರ ಪ್ರತಿಕೂಲ ಹವಾಮಾನವನ್ನು ಎದುರಿಸಿದ ನಂತರ ವಿಮಾನವು ಪತನಗೊಂಡಿತು. ವಿಮಾನದ ಅವಶೇಷ ಮತ್ತು ಅದರಲ್ಲಿದ್ದ ಪ್ರಯಾಣಿಕರ ಮೃತದೇಹಗಳು ಹಿಮಭರಿತ ಭೂಪ್ರದೇಶದಲ್ಲಿ ಹುಡುಗಿ ಹೋಗಿದ್ದವು. ದಶಕಗಳಿಂದ ಅದನ್ನು ಹುಡುಕುವ ವಿಫಲ ಯತ್ನ ನಡೆಯುತ್ತಲೇ ಇತ್ತು.
Indian Army says, "In an extraordinary development, the ongoing search and rescue mission to recover the remains of personnel from the ill-fated Indian Air Force (IAF) AN-12 aircraft, which crashed on Rohtang Pass in 1968, has achieved significant breakthroughs. The joint team…
— ANI (@ANI) September 30, 2024
ನಂತರ 2003 ರಲ್ಲಿ, ಮನಾಲಿಯ ABV ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಮತ್ತು ಅಲೈಡ್ ಸ್ಪೋರ್ಟ್ಸ್‌ನ ದಂಡಯಾತ್ರೆಯ ಮೂಲಕ ವಿಮಾನದ ಅವಶೇಷಗಳನ್ನು ದಕ್ಷಿಣ ಢಾಕಾ ಹಿಮನದಿಯಲ್ಲಿ ಪತ್ತೆ ಹಚ್ಚಲಾಗಿತ್ತು. ಇದಾದ ಬಳಿಕ ಪರ್ವತಾರೋಹಿಗಳು ಒಂದು ಮೃತದೇಹದ ಅವಶೇಷಗಳನ್ನು ಸಹ ಕಂಡುಹಿಡಿದರು, ನಂತರ ವಿಮಾನದಲ್ಲಿದ್ದ ಸೇನಾ ಸಿಬ್ಬಂದಿ ಸಿಪಾಯಿ ಬೇಲಿ ರಾಮ್ ಎಂದು ಗುರುತಿಸಲಾಯಿತು.
2005, 2006, 2013, ಮತ್ತು 2019 ರಲ್ಲಿ ಭಾರತೀಯ ಸೇನೆ ನಾಪತ್ತೆಯಾಗಿರುವ ಪ್ರಯಾಣಿಕರಿಗಾಗಿ ಹಲವು ಬಾರಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತಾದರೂ 2019 ರ ಹೊತ್ತಿಗೆ ಕೇವಲ ಐದು ಮೃತದೇಹಗಳು ಪತ್ತೆ ಮಾಡುವಲ್ಲಿ ಯಶಸ್ವಿ ಆಗಿತ್ತು. ಆದಾಗ್ಯೂ, ಇದೀಗ ಚಂದ್ರಭಾಗದ ಮೌಂಟೇನ್ ಎಕ್ಸ್‌ಪೆಡಿಶನ್ ತಂಡ ನಾಲ್ಕು ಮೃತದೇಹಗಳನ್ನು ವಶಪಡಿಸಿಕೊಂಡಿದೆ, ಮೃತ ದೇಹಗಳ ಗುರುತು ಪತ್ತೆ ಹಚ್ಚಿ ಅದನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಸೇನೆ ಹೇಳಿದೆ.
ಮೂವರ ಗುರುತು ಪತ್ತೆ
ಇನ್ನು ಪತ್ತೆಯಾಗಿರುವ ಮೂವರು ಹುತಾತ್ಮ ಯೋಧರ ಗುರುತು ಪತ್ತೆಯಾಗಿದ್ದು, ಮತ್ತೊರ್ವನ ಗುರುತು ಪತ್ತೆಗೆ ಪ್ರಯತ್ನ ನಡೆಯುತ್ತಿವೆ. ಕೇರಳ ಮೂಲದ ಯೋಧ ಥಾಮಸ್ ಚೆರಿಯನ್, ಮಲ್ಕನ್ ಸಿಂಗ್ ಮತ್ತು ನಾರಾಯಣ್ ಸಿಂಗ್ ಎಂದು ಮೂವರನ್ನು ಗುರುತಿಸಲಾಗಿದೆ.
ಈ ಸುದ್ದಿಯನ್ನೂ ಓದಿ: ವಾಯಪಡೆಯ ಕಣ್ಗಾವಲು ವಿಮಾನ ಪತನ