Friday, 22nd November 2024

BBK 11: ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು ಲವ್ ಸ್ಟೋರಿ: ನರಕ ವಾಸಿಗೆ ಸ್ವರ್ಗದ ದೇವತೆ ಮೇಲೆ ಕಣ್ಣು

Bigg Boss Kannada Aishwarya

ಬಿಗ್ ಬಾಸ್ (Bigg Boss Kannada) ಮನೆ ಎಂದ ಮೇಲೆ ಅಲ್ಲಿ ಒಂದೆರಡು ಲವ್ ಸ್ಟೋರಿ ಇದ್ದೇ ಇರುತ್ತದೆ. ಸ್ಪರ್ಧಿಗಳು ಪರಸ್ಪರ ಸರಿಯಾಗಿ ಪರಿಚಯವಾದ ನಂತರ ಈ ಪ್ರೀತಿ ಹುಟ್ಟುಕೊಳ್ಳುವುದನ್ನು ನಾವು ಕಂಡಿದ್ದೇವೆ. ಆದರೆ, ಇದೀಗ ಕನ್ನಡ ಬಿಗ್ ಬಾಸ್ ಸೀಸನ್ 11 ನಲ್ಲಿ ಎರಡೇ ದಿನಕ್ಕೆ ಹೊಸ ಲವ್​ ಸ್ಟೋರಿ ಶುರುವಾಗಿದೆ. ಹಾಗಾದರೆ ಯಾರ ಮಧ್ಯೆ ಪ್ರೀತಿ ಚಿಗುರಿದೆ?, ಇಲ್ಲಿದೆ ನೋಡಿ ಮಾಹಿತಿ.

ಈ ಬಾರಿಯ ಬಿಗ್ ಬಾಸ್ ಶೋ ಸ್ವರ್ಗ ಮತ್ತು ನರಕ ಎಂಬ ಎರಡು ಕಾನ್ಸೆಪ್ಟ್​ನಲ್ಲಿ ಮೂಡಿಬರುತ್ತಿದೆ. ಇದರ ಪ್ರಕಾರ 10 ಜನ ಸ್ವರ್ಗದಲ್ಲಿ ಹಾಗೂ 7 ಜನರು ನರಕದಲ್ಲಿ ವಾಸಿಸುತ್ತಿದ್ದಾರೆ. ನರಕದಲ್ಲಿರುವ ರಂಜಿತ್ ಹಾಗೂ ಸ್ವರ್ಗದಲ್ಲಿರುವ ಐಶ್ವರ್ಯ ನಡುವೆ ಪ್ರೀತಿ ಶುರುವಾದಂತಿದೆ. ಎರಡನೇ ದಿನ ಬೆಳಗ್ಗೆ ಐಶ್ವರ್ಯ ಅವರು ನರಕ ವಾಸಿಗಳ ಎದುರು ಬಂದು ತಿಂಡಿ ತಿನ್ನುತ್ತಿದ್ದರು. ಇದನ್ನು ಕಂಡು ರಂಜಿತ್ ರಿಯಾಕ್ಷನ್ ಕೊಟ್ಟಿದ್ದಾರೆ. ಆಗ ಐಶ್ವರ್ಯ ಅವರು, ನೀವು ಪ್ಲೇಟ್ ನೋಡಿ ರಿಯಾಕ್ಷನ್ ಕೊಟ್ರಾ ಅಥವಾ ನನ್ನ ನೋಡಿ ರಿಯಾಕ್ಷನ್ ಕೊಟ್ರಾ? ಎಂದು ಕೇಳಿದ್ದಾರೆ. ಇದಕ್ಕೆ ರಂಜಿತ್ ಅವರು ಪ್ಲೇಟ್​ಗಿಂತ ನೀವೇ ಅದ್ಭುತವಾಗಿ ಕಾಣುತ್ತಿದ್ದೀರಿ ಎಂದು ಹೇಳಿದ್ದಾರೆ.

ಆಗ ಐಶ್ವರ್ಯ ಅವರು ರಂಜಿತ್ ಬಳಿ ‘ನಿಮಗೆ ನಾನು ಬೇಕಾ ಅಥವಾ ತಿಂಡಿ ಬೇಕಾ’ ಎಂದು ಕೇಳಿದ್ದಾರೆ. ಆಗ ರಂಜಿತ್ ತಕ್ಷಣ ನನಗೆ ನೀನೇ ಬೇಕು, ತಟ್ಟೆ ಅಲ್ಲಿ ಇಟ್ಟುಬಿಡಿ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಸ್ಪರ್ಧಿಗಳು ಓಹ್ ಎಂದು ಕೂಗಾಡಿದ್ದಾರೆ. ಆಗ ರಂಜಿತ್ ನಾಚಿ ನೀರಾಗಿದ್ದು ಅತ್ತ ಐಶ್ವರ್ಯ ಕೂಡ ನಗು ತಡೆಯಲಾಗದೆ ಬಾಯಿಗೆ ಕೈ ಮುಚ್ಚಿಕೊಂಡರು.

ಚೈತ್ರಾ ಆರ್ಭಟಕ್ಕೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್ ಮಾಡಿದ ಗೋಲ್ಡ್ ಸುರೇಶ್

ರಾತ್ರಿ ಮಲಗುವ ಮುಂಚೆ ಕೂಡ ಐಶ್ವರ್ಯ ಅವರು ನರಕವಾಸಿಗಳು ಇರುವ ಕಡೆ ಬಂದಿದ್ದಾರೆ. ಆಗ ರಂಜಿತ್ ಅವರು ಬೆಳ್ಳಿ ರತದಲಿ ಸೂರ್ಯ ತಂದ ಕಿರಣ ಹಾಡು ಹಾಡುತ್ತಿದ್ದರು. ಆಗ ಮನೆ ಮಂದಿ ಇವರನ್ನು ಮತ್ತಷ್ಟು ರೇಗಿಸಿದ್ದಾರೆ. ಅತ್ತ ಐಶ್ವರ್ಯ ಬಳಿ ಬಂದ ಮಂಜು ‘ಧಮ್ ಇದ್ರೆ ಇವಳನ್ನು ಮುಟ್ಟಿ’ ಎಂದು ತಮಾಷೆಯಾಗಿ ನರಕ ವಾಸಿಗಳ ಬಳಿ ಹೇಳಿದ್ದಾರೆ. ಇದನ್ನು ಕೇಳಿಸಿದ ರಂಜಿತ್ ‘ನಾನು ಮನಸ್ಸು ಮಾಡಿದ್ರೆ ಬೆಳಗ್ಗೆ ಹೊತ್ತಿಗೆ ಎತ್ತಾಕೊಂಡು ಹೋಗ್ತೀನಿ’ ಎಂದು ಹೇಳಿದ್ದಾರೆ. ಇದನ್ನೆಲ್ಲ ಕಂಡ ಬಿಗ್ ಬ್ಯಾಸ್ ಫ್ಯಾನ್ಸ್ ಮನೆಯಲ್ಲಿ ಹೊಸ ಲವ್ ಸ್ಟೋರಿ ಶುರುವಾಗಿದೆ ಎಂದು ಹೇಳುತ್ತಿದ್ದಾರೆ.

ಇನ್ನು ಎರಡನೇ ದಿನ ನಡೆದ ನಾಮಿನೇಷನ್ ಪ್ರಕ್ರಿಯೆಲ್ಲಿ ಸ್ವರ್ಗದಿಂದ ಜಗದೀಶ್, ಯಮುನ, ಉಗ್ರಂ ಮಂಜು, ಗೌತಮಿ, ಹಂಸ ಹಾಗೂ ಭವ್ಯ ನಾಮಿನೇಟ್ ಆಗಿದ್ದಾರೆ. ಅತ್ತ ಟಾಸ್ಕ್​ನಲ್ಲಿ ಸೋತ ನರಕ ವಾಸಿಗಳಾದ ಶಿಶಿರ್, ಮೊಕ್ಷಿತಾ ಮತ್ತು ಮಾನಸ ನೇರವಾಗಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಮೊದಲ ದಿನ ಚೈತ್ರಾ ಕುಂದಾಪುರ ನಾಮಿನೇಟ್ ಆಗಿದ್ದರು.