Sunday, 6th October 2024

Iran Attacks Israel : ಇಸ್ರೇಲ್‌ ನೆರವಿಗೆ ನಿಲ್ಲಲು ಅಮೆರಿಕ ಸೇನೆಗೆ ಅಧ್ಯಕ್ಷ ಬೈಡನ್ ಆದೇಶ

Iran Attacks Israel

ನ್ಯೂಯಾರ್ಕ್‌: ಇರಾನ್ ದಾಳಿಯ ವಿರುದ್ಧ ಇಸ್ರೇಲ್‌ನ ನೆರವಿಗೆ ನಿಲ್ಲುವಂತೆ (Iran Attacks Israel) ಹಾಗೂ ಇಸ್ರೇಲ್ ಕಡೆಗೆ ಬರುತ್ತಿರುವ ಕ್ಷಿಪಣಿಗಳನ್ನು ಹೊಡೆದುರುಳಿಸುವಂತೆ ಯುಎಸ್ ಅಧ್ಯಕ್ಷ ಜೋ ಬೈಡನ್ ಯುಎಸ್ ಮಿಲಿಟರಿಗೆ ನಿರ್ದೇಶನ ನೀಡಿದ್ದಾರೆ. ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿ ಈ ಮಾಹಿತಿ ನೀಡಿದೆ. ಜೋ ಬೈಡನ್ ಮತ್ತು ಯುಎಸ್ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಶ್ವೇತಭವನದ ನಿಯಂತ್ರಣ ಕೊಠಡಿಯಿಂದ ಇರಾನ್‌ ಮೇಲಿನ ದಾಳಿಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಎನ್ಎಸ್ಸಿ ವಕ್ತಾರ ಸೀನ್ ಸಾವೆಟ್ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇರಾನ್ ದಾಳಿಯ ವಿರುದ್ಧ ಇಸ್ರೇಲ್‌ಗೆ ಸಹಾಯ ಮಾಡಲು ಮತ್ತು ಇಸ್ರೇಲ್ ಅನ್ನು ಗುರಿಯಾಗಿಸುವ ಕ್ಷಿಪಣಿಗಳನ್ನು ಹೊಡೆದುರುಳಿಸಲು ಅಧ್ಯಕ್ಷ ಬೈಡನ್ ಯುಎಸ್ ಮಿಲಿಟರಿಗೆ ನಿರ್ದೇಶನ ನೀಡಿದ್ದಾರೆ ಎಂದು ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ. ,

ಇದನ್ನೂ ಓದಿ: Iran Attacks Israel : ಮಧ್ಯಪ್ರಾಚ್ಯದಲ್ಲಿ ಯುದ್ಧ ಶುರು; ಇಸ್ರೇಲ್‌ ಮೇಲೆ 400 ಕ್ಷಿಪಣಿಗಳ ದಾಳಿ ನಡೆಸಿದ ಇರಾನ್‌

ಡಮಾಸ್ಕಸ್‌ನಲ್ಲಿರುವ ಇರಾನಿನ ದೂತಾವಾಸದ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಆ ದೇಶದ ಈ ವರ್ಷದ ಏಪ್ರಿಲ್‌ನಲ್ಲಿ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಲು ಮುಂದಾದಾಗ ಇಸ್ರೇಲ್ ಅನ್ನು ರಕ್ಷಿಸಲು ಸಹಾಯ ಮಾಡಲು ಯುನೈಟೆಡ್ ಸ್ಟೇಟ್ಸ್ ಮುಂದಾಗಿತ್ತು