Sunday, 24th November 2024

Sai Baba statues Row: ಏಕಾಏಕಿ ಹಿಂದೂ ದೇಗುಲಗಳಿಂದ ಸಾಯಿಬಾಬಾನ ಮೂರ್ತಿಗಳು ತೆರವು

Sai baba statue

ವಾರಣಾಸಿ: ಹಲವು ಹಿಂದೂ ದೇಗುಲಗಳಲ್ಲಿದ್ದ ಸಾಯಿಬಾಬಾನ ಮೂರ್ತಿ(Sai Baba statues Row)ಗಳನ್ನು ಏಕಾಏಕಿ ತೆರವುಗೊಳಿಸಿರುವ ಘಟನೆ ವಾರಣಾಸಿಯಲ್ಲಿ ವರದಿಯಾಗಿದೆ. ಸನಾತನ ರಕ್ಷಕ ದಳ ಎಂಬ ಸಂಘಟನೆ ಸಾಯಿಬಾಬಾ ಮೂರ್ತಿ ತೆರವು ಅಭಯಾನ ನಡೆಸಿದೆ. ಇದರ ಅಂಗವಾಗಿ ವಾರಣಾಸಿಯ ಅನೇಕ ದೇವಾಲಯಗಳಿಂದ ಸಾಯಿಬಾಬಾ ಅವರ ಪ್ರತಿಮೆಗಳನ್ನು ತೆಗೆದುಹಾಕಲಾಯಿತು.

ಇಲ್ಲಿನ ಬಡಾ ಗಣೇಶ ದೇವಸ್ಥಾನದಿಂದ ಸಾಯಿಬಾಬಾ ಪ್ರತಿಮೆಯನ್ನು ತೆಗೆದು ದೇವಸ್ಥಾನದ ಆವರಣದ ಹೊರಗೆ ಇರಿಸಿತು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ದೇಗುಲದ ಪ್ರಧಾನ ಅರ್ಚಕ ರಾಮು ಗುರು, ‘ಸರಿಯಾದ ಜ್ಞಾನವಿಲ್ಲದೇ ಸಾಯಿಬಾಬಾ ಅವರಿಗೆ ಪೂಜಿಸಲಾಗುತ್ತಿತ್ತು. ಶಾಸ್ತ್ರಗಳ ಪ್ರಕಾರ ಇದನ್ನು ಮಾಡುವಂತಿಲ್ಲ. ಅದೇ ರೀತಿ ಅನ್ನಪೂರ್ಣ ದೇಗುಲದ ಪ್ರಧಾನ ಅರ್ಚಕ ಶಂಕರ್ ಪುರಿ ಮಾತನಾಡಿ, ‘ಗ್ರಂಥಗಳಲ್ಲಿ ಸಾಯಿಬಾಬಾ ಪೂಜೆಯ ಉಲ್ಲೇಖವಿಲ್ಲ’ ಎಂದರು.

ಅಏತನ್ಮಧ್ಯೆ, ಅಯೋಧ್ಯೆಯ ಹನುಮಾನ್‌ಗರ್ಹಿ ದೇವಸ್ಥಾನದ ಮಹಂತ್ ರಾಜು ಮಾತನಾಡಿ, “ಸಾಯಿ ಅವರು ಧರ್ಮ ಗುರು’ (ಧಾರ್ಮಿಕ ಬೋಧಕರು), ‘ಮಹಾಪುರುಷ’ (ಮಹಾಪುರುಷ), ‘ಸಮಾನ’ ಅಥವಾ ‘ಔಲಿಯಾ’ ಆಗಿರಬಹುದು, ಆದರೆ ಅವರು ಆಗಲು ಸಾಧ್ಯವಿಲ್ಲ. ವಾರಣಾಸಿಯಲ್ಲಿನ (ಸಾಯಿಬಾಬಾರವರ) ವಿಗ್ರಹವನ್ನು ತೆಗೆದುಹಾಕಿರುವ ವ್ಯಕ್ತಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಧನ್ಯವಾದ ಸಲ್ಲಿಸಿದ್ದಾರೆ.

ಸನಾತನ ರಕ್ಷಕ ದಳದ ರಾಜ್ಯಾಧ್ಯಕ್ಷ ಅಜಯ್ ಶರ್ಮಾ ಮಾತನಾಡಿ, ‘ಕಾಶಿಯಲ್ಲಿ (ವಾರಣಾಸಿ) ಪರಮಾತ್ಮನ ಆರಾಧನೆ ಮಾತ್ರ ನಡೆಯಬೇಕು. ಭಕ್ತರ ಭಾವನೆಗಳನ್ನು ಗೌರವಿಸಿ ಈಗಾಗಲೇ 10 ದೇವಸ್ಥಾನಗಳಿಂದ ಸಾಯಿಬಾಬಾ ಅವರ ಮೂರ್ತಿಗಳನ್ನು ತೆಗೆಯಲಾಗಿದೆ. ಮುಂದಿನ ದಿನಗಳಲ್ಲಿ ಅಗಸ್ತ್ಯಕುಂಡ ಮತ್ತು ಭೂತೇಶ್ವರ ದೇವಸ್ಥಾನದಿಂದಲೂ ಮೂರ್ತಿಗಳನ್ನು ತೆಗೆಯಲಾಗುವುದು ಎಂದರು.

ನಗರದ ಸಿಗ್ರಾ ಪ್ರದೇಶದ ಸಂತ ರಘುವರ ದಾಸ್ ನಗರದಲ್ಲಿ ನೆಲೆಸಿರುವ ಸಾಯಿ ಮಂದಿರದ ಅರ್ಚಕ ಸಮರ ಘೋಷ್ ಮಾತನಾಡಿ, ‘ಇಂದು ಸನಾತನಿಗಳು ಎಂದು ಹೇಳಿಕೊಳ್ಳುವವರು ದೇಗುಲಗಳಲ್ಲಿ ಸಾಯಿಬಾಬಾ ಪ್ರತಿಷ್ಠಾಪನೆ ಮಾಡಿದವರೇ ಆಗಿದ್ದಾರೆ. ಎಲ್ಲ ದೇವರುಗಳು ಒಂದೇ. ಇಂತಹ ಕೃತ್ಯಗಳು ಜನರ ನಂಬಿಕೆಯನ್ನು ಘಾಸಿಗೊಳಿಸುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Maharashtra government: ಮಹಾರಾಷ್ಟ್ರದಲ್ಲಿ ʻಗೋವು ರಾಜ್ಯಮಾತೆʼ; ಚುನಾವಣೆಗೂ ಮುನ್ನ ಸರ್ಕಾರದಿಂದ ಮಹತ್ವದ ಘೋಷಣೆ