ತುಮಕೂರು: ತುಮಕೂರು-ಚಿತ್ರದುರ್ಗ, ತುಮಕೂರು-ರಾಯದುರ್ಗ ರೈಲ್ವೆ ಯೋಜನೆ 2027ಕ್ಕೆ ಮುಕ್ತಾಯಗೊಳ್ಳಲಿದ್ದು, ಇದಕ್ಕಾಗಿ ತ್ವರಿತ ಕಾಮಗಾರಿಗಳು, ಭೂಸ್ವಾಧೀನ ಪ್ರಕ್ರಿಯೆ ಎಲ್ಲವೂ ಚುರುಕುಗೊಂಡಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (V Somanna) ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ರೈಲ್ವೆಗೆ (Railway) ಜಾಗವನ್ನು ಹಸ್ತಾಂತರಿಸಲಾಗಿದೆ. ಇನ್ನು ಕೇವಲ ಶೇ.2 ರಷ್ಟು ಹಸ್ತಾಂತರಿಸುವ ಕೆಲಸ ಮಾತ್ರ ಬಾಕಿ ಇದೆ. ಈ ಕಾರ್ಯವನ್ನು ಬೇಗ ಮುಗಿಸಲಾಗುವುದು ಎಂದು ಹೇಳಿದರು.
ಚಿತ್ರದುರ್ಗ ವ್ಯಾಪ್ತಿಯಲ್ಲಿ 250 ಎಕರೆ ಭೂಸ್ವಾಧೀನ ಮತ್ತು ಹಸ್ತಾಂತರ ಬಾಕಿ ಇದೆ. ಇದನ್ನು ಪೂರ್ಣಗೊಳಿಸಿ ಕಾರ್ಯಯೋಜನೆಗೆ ವೇಗ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸುದ್ದಿಯನ್ನೂ ಓದಿ | BESCOM: ಬೆಸ್ಕಾಂ ಗ್ರಾಹಕರೇ ಗಮನಿಸಿ; ಅ.5, 6 ರಂದು ಆನ್ಲೈನ್ ಸೇವೆ ಅಲಭ್ಯ
ರೈಲ್ವೆ ಮಾರ್ಗದಲ್ಲಿ ಆಟೋಮ್ಯಾಟಿಕ್ ಸಿಗ್ನಲ್ ಲೈನ್ ಆಳವಡಿಕೆ ಕಾರ್ಯ ಮಾಡಲಾಗುವುದು. ತುಮಕೂರಿಗೆ ಮತ್ತಷ್ಟು ಕೊಡುಗೆ ನೀಡುವ ಉದ್ದೇಶ ಇದೆ. ಇದಕ್ಕಾಗಿ ಕೇಂದ್ರದ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಲಾಗುವುದು ಎಂದು ಸಚಿವ ಸೋಮಣ್ಣ ಹೇಳಿದರು.
ಅಮಾನಿಕೆರೆಗೆ ಗಲೀಜು ನೀರು ಹರಿದು ಬರುತ್ತಿದೆ. ವಾಸನೆಯೂ ಇದೆ. ಕೂಡಲೇ ಸಂಬಂಧಪಟ್ಟ ತಾಂತ್ರಿಕ ಅಧಿಕಾರಿಗಳನ್ನು ಕರೆಯಿಸಿ ಇದಕ್ಕೊಂದು ರೂಪ ಕೊಡಬೇಕು. ಸಾಕಷ್ಟು ನೀರು ಶುದ್ದೀಕರಣಕ್ಕೆ ಮುಂದಾಗಬೇಕು ಎಂದು ಸೂಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಇದು ಸರಿಯಾಗುವ ಭರವಸೆ ಇದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Navaratri Colour Tips: ನವರಾತ್ರಿ 2ನೇ ದಿನದ ಹಸಿರು ಎಥ್ನಿಕ್ವೇರ್ಸ್ನಲ್ಲಿ ಆಕರ್ಷಕವಾಗಿ ಕಾಣಿಸಲು ಇಲ್ಲಿದೆ 5 ಸಿಂಪಲ್ ಐಡಿಯಾ
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಉಪಸ್ಥಿತರಿದ್ದರು.