ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11) ಶುರುವಾಗಿ ನಾಲ್ಕು ದಿನಗಳು ಕಳೆದಿದ್ದು, ಈ ನಾಲ್ಕೂ ದಿನ ಹೆಚ್ಚು ಜಗಳಗಳೇ ನಡೆದಿವೆ. ಲಾಯರ್ ಜಗದೀಶ್ (Lawyer Jagadish) ಇಡೀ ಮನೆಯವರನ್ನು ಎದುರು ಹಾಕಿಕೊಂಡಿದ್ದಾರೆ. ಒಂದಲ್ಲ ಒಂದು ವಿಚಾರಕ್ಕೆ ಪ್ರತಿಯೊಬ್ಬರ ಬಳಿ ಕುಂತಲ್ಲಿ-ನಿಂತಲ್ಲಿ ಜಗಳವಾಡುತ್ತಿದ್ದಾರೆ. ಗುರುವಾರ ಜಗದೀಶ್ ಕ್ಷಮೆ ಕೇಳಿದ್ದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಗುರುವಾರ ಕೂಡ ಜಗದೀಶ್ ಅವರ ಮಾತುಗಳು ಬಿಗ್ ಬಾಸ್ ಮನೆಯಲ್ಲಿ ಸಖತ್ ಸೌಂಡ್ ಮಾಡಿತು.
‘ನಾನು ಸಿಂಗಲ್, ನಾನು ಕಾಡಿನ ರಾಜ. ಗುಂಪಾಗಿ ಇರುವವರು ತೋಳಗಳು. ನಾನು ಸಿಂಹ ಯಾವತ್ತು ಸಿಂಗಲ್ ಆಗಿ ಇರ್ತೀನಿ. ನಾನು ಮಂತ ಅಂತ ತೋರಿಸ್ಕೊಳ್ಳೋ ಅಭ್ಯಾಸ ನನಗಿಲ್ಲ. ನನ್ನ ಶ್ರೀಮಂತಿಕೆ ಬಗ್ಗೆ ನಿಮಗೆ ಗೊತ್ತಿಲ್ಲ. ಹೆಲಿಕಾಫ್ಟರ್‌ನಿಂದ ಇಲ್ಲಿಗೆ ಊಟ ತರಿಸಿಕೊಳ್ಳುವಷ್ಟು ಕೆಪಾಸಿಟಿ ನನಗಿದೆ. ನಾನು ಬಿಗ್ ಬಾಸ್ ಶೋನೇ ಪರ್ಚೇಸ್ ಮಾಡಬಹುದು’ ಎಂದು ತಮ್ಮನ್ನು ತಾವೇ ಕೊಂಡಾಡಿದ್ದಾರೆ.
ಇಷ್ಟಕ್ಕೆ ನಿಲ್ಲದ ಜಗದೀಶ್ ಮಾತುಗಳು, ‘ನಾನು ಫೋನ್ ಮಾಡಿದ್ರೆ 200 ಕೋಟಿ ತಂದುಕೊಡ್ತಾರೆ. ನನ್ನ ಮನೆಯ ನಾಯಿಗೆ ನಾನು ತಿಂಗಳಿಗೆ 1 ಲಕ್ಷ ರೂಪಾಯಿ ಖರ್ಚು ಮಾಡ್ತೀನಿ. ನನ್ನಲ್ಲಿ ಇಂಪೋರ್ಟೆಡ್ ಕಾರು ಇದೆ. 17 ಜನರಲ್ಲಿ ನಾನೊಬ್ಬ 16 ಜನರನ್ನ ಡಿಫೆಂಡ್ ಮಾಡ್ತೀನಿ ಅಂದ್ರೆ ಕಲ್ಪನೆ ಮಾಡ್ಕೊಳ್ಳಿ. ನಾನೆಷ್ಟು ಸ್ಟ್ರಾಂಗ್ ಆಗಿದ್ದೀನಿ ಅಂತ. ನಾನು ಕಂಡವರ ಹೆಣ್ಮಕ್ಕಳನ್ನು, ಕಂಡವರ ಮಂಚವನ್ನು-ಕಂಡವರ ದುಡ್ಡನ್ನು, ಕಂಡವರ ಅಧಿಕಾರಾನ, ಕಂಡವರ ಆಸ್ತೀನ ಯಾವತ್ತೂ ಮುಟ್ಟಲ್ಲ, ಮುಟ್ಟಿದವರನ್ನ ಬಿಟ್ಟೂ ಇಲ್ಲ, ಪಿಕ್ಚರ್ ಅಭಿ ಬಾಕಿ ಹೈ’ ಎಂದು ಡೈಲಾಗ್ ಹೊಡೆದಿದ್ದಾರೆ.
ಕ್ಷಮೆ ಕೇಳಿದ ಜಗದೀಶ್:
ಇಷ್ಟೆಲ್ಲ ಮಾತನಾಡಿದ ಜಗದೀಶ್‌ಗೆ ರಾತ್ರಿ ಕಳೆದ ಬೆಳಗಾಗುವ ಹೊತ್ತಿಗೆ ತಪ್ಪಿನ ಅರಿವಾಗಿದೆ. ಹೇಳಿದ ಎಲ್ಲ ಮಾತಿಗೆ ವೀಕ್ಷಕರ ಬಳಿ ಮತ್ತು ಬಿಗ್ ಬಾಸ್ ಬಳಿ ಕ್ಷಮೆ ಕೇಳಿದ್ದಾರೆ. ನನ್ನ ತಂದೆ ತಾಯಿ ಜೊತೆ ಅಷ್ಟಾಗಿ ನಾನು ಟೈಮ್ ಸ್ಪೆಂಡ್ ಮಾಡಕ್ಕೆ ಆಗಿಲ್ಲ ಎಂದು ಹಿಂದಿನ ಘಟನೆ ನೆನೆದು ಕಣ್ಣೀರಿಟ್ಟಿದ್ದಾರೆ. ಆದರೆ, ಬಿಗ್ ಬಾಸ್ಗೆ ದೊಡ್ಡ ಮಟ್ಟದ ಅವಮಾನ ಮಾಡಿರುವ ಜಗದೀಶ್‌ಗೆ ಶನಿವಾರ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರ ಎಂಬುದು ನೋಡಬೇಕಿದೆ.
ಟಾಸ್ಕ್ ಮಧ್ಯೆ ಮೃಗಗಳಂತೆ ವರ್ತಿಸಿದ ಸ್ಪರ್ಧಿಗಳು: ಆಸ್ಪತ್ರೆಗೆ ದಾಖಲಾದ ಗೋಲ್ಡ್ ಸುರೇಶ್, ತ್ರಿವಿಕ್ರಂ?