Tuesday, 12th November 2024

ಜಗದೀಶ್ ವಿರುದ್ಧ ತಿರುಗಿ ಬಿದ್ದ ಇಡೀ ಬಿಗ್ ಬಾಸ್ ಮನೆ: ಏನ್ ಮಾಡ್ತಾರೆ ಈಗ ಲಾಯರ್?

Jagadish vs BBK House

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada) ಲಾಯರ್ ಜಗದೀಶ್ ಅವರ ಜಗಳ, ಮಾತು, ನಡೆ ಇತರೆ ಸ್ಪರ್ಧಿಗಳ ನಿದ್ದೆಗೆಡಿಸಿದೆ. ಮೊದಲ ದಿನ ಸೈಲೆಂಟ್ ಆಗಿದ್ದ ಜಗದೀಶ್ ಎರಡನೇ ದಿನದಿಂದ ಒಂದಲ್ಲ ಒಂದು ವಿಚಾರಕ್ಕೆ ಜಗಳ ತೆಗೆಯುತ್ತಿದ್ದಾರೆ. ಇದರಿಂದ ಕೇವಲ ನರಕ ವಾಸಿಗಳು ಮಾತ್ರವಲ್ಲದೆ ಸ್ವರ್ಗ ವಾಸಿಗಳು ಕೂಡ ತಲೆ ಕೆಡೆಸಿಕೊಂಡಿದ್ದಾರೆ. ಇದರ ನಡುವೆ ಬಿಗ್ ಬಾಸ್​ಗೂ ವಾರ್ನಿಂಗ್ ನೀಡಿರುವ ಜಗದೀಶ್ (Lawyer Jagadish) ಬಿಗ್ ಬಾಸ್ ಕಾರ್ಯಕ್ರಮವನ್ನು ಹಾಳು ಮಾಡಿಲ್ಲ ಅಂದ್ರೆ ನನ್ ಹೆಸರು ಬೇರೆ ಇಡಿ ಎಂದು ಹೇಳಿದ್ದಾರೆ.

ಜಗದೀಶ್ ಅವರ ಮಾತು ಮನೆಯ ಸ್ಪರ್ಧಿಗಳಿಗೆ ನೋವು ತರಿಸಿದೆ. ಇದರಿಂದ ಇಡೀ ಬಿಗ್ ಬಾಸ್ ಮನೆಯ ಸದಸ್ಯರು ಲಾಯರ್ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಯಾರು ಕೂಡ ಅವರೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ. ಅತ್ತ ನರಕ ವಾಸಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಲಾಯರ್ ಈಗ ಅವರಿಂದಲೂ ದೂರವಾಗಿದ್ದಾರೆ.

‘ಇಡೀ ಮನೆ ಜಗದೀಶ್ ಮೇಲೆ ತಿರುಗಿ ಬಿದ್ದಿದೆ. ಅದು ಅವರಿಗೆ ತೆಗೆದುಕೊಳ್ಳಲು ಆಗುತ್ತಿಲ್ಲ. ಆಚೆ ಅವರಿಗೆ ಒಳ್ಳೆಯ ಗೌರವ-ಮರಿಯಾದೆ ಎಲ್ಲಾ ಇದೆ. ಈ ಮನೆಯಲ್ಲಿ ನನ್ನ ಏನೂ ಟ್ರೀಟ್ ಮಾಡುತ್ತಿಲ್ಲ’ ಎಂದು ಗೌತಮಿ ಹೇಳಿದ್ದಾರೆ. ಇದಕ್ಕೆ ಗೋಲ್ಡ್ ಸುರೇಶ್ ಅವರು ‘ನಾವು ಅವರಿಗೆ ಮರಿಯಾದೆ ಕೊಟ್ಟಿದ್ದೇವೆ ಆದ್ರೆ ಅವರೇ ತೆಗೆದುಕೊಂಡಿಲ್ಲ, ನಾವು ಯಾರು ಅವರ ಮರ್ಯಾದೆ ತೆಗೆದಿಲ್ಲ, ಅವರ ಬಗ್ಗೆ ನಾವು ಯಾರೂ ನೆಗೆಟಿವ್ ಮಾತಾಡಿಲ್ಲ’ ಎಂದಿದ್ದಾರೆ.

ನಾವೆಲ್ಲ ಅವರಿಗೆ ಈ ಕ್ಷಣದವರೆಗೂ ರೆಸ್ಪೆಕ್ಟ್ ಕೊಟ್ಟಿದ್ದೇವೆ, ಅದನ್ನು ಅವರೇ ಹಾಳು ಮಾಡಿಕೊಂಡಿದ್ದಾರೆ. ಗೇಮ್​ನ ಮಧ್ಯೆ ಒಂದೆರಡು ಮಾತುಗಳು ಬರುತ್ತದೆ. ಆದರೆ, ಮಾತೇ ಆಡ್ಬೇಕು ಅಂತ ಮಾತಾಡೋದು, ಪರ್ಸನಲ್ ಅಟ್ಯಾಕ್ ಮಾಡುವುದು ಸರಿಯಲ್ಲ. ನೀನು ಕಂಟೆಸ್ಟೆಂಟ್ ಆಗೋಕೆ ಯೋಗ್ಯತೆ ಇಲ್ಲ ಅಂದ್ರೆ.. ಇದೆಲ್ಲ ಅವರು ಬೇಕಂತಲೇ ಮಾತಾಡ್ತಾ ಇರೋದು ಎಂದು ಬಿಗ್ ಬಾಸ್ ಸ್ಪರ್ಧಿಗಳು ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮಕಥೆ:

ಜಗಳಗಳ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮಕಥೆ ಶುರುವಾದಂತಿದೆ. ತನ್ನ ಸೈಲೆಂಟ್ ನೇಚರ್​ನಿಂದಲೇ ಹುಡುಗಿಯರ ಮನಸ್ಸು ಕದ್ದಿರುವ ಧರ್ಮ ಕೀರ್ತಿರಾಜ್ ಮೇಲೆ ಅನುಷಾ ರೈ ಹಾಗೂ ಐಶ್ವರ್ಯಗೆ ಕ್ರಶ್ ಆದಂತಿದೆ. ನರಕದಲ್ಲಿ ಅನುಷಾ ಮತ್ತು ಸ್ವರ್ಗದಲ್ಲಿ ಐಶ್ವರ್ಯಾ ಅವರು ಧರ್ಮ ಬಗ್ಗೆ ಇಂಪ್ರೆಸ್‌ ಆಗಿದ್ದಾರೆ. ಐಶ್ವರ್ಯಾ ಅವರು ಸ್ಪರ್ಧಿಗಳ ಮುಂದೆ ಧರ್ಮ ಅವರನ್ನು ಹಾಡಿ ಹೊಗಳಿದ್ದಾರೆ. ಇದನ್ನು ಕಂಡು ಮನೆ ಮಂದಿ ಎಲ್ಲರು ಧರ್ಮ ಅವರ ಕಾಲೆಳೆದಿದ್ದಾರೆ.

ಧರ್ಮಾ Loves ಐಶ್ವರ್ಯ: ಜಗಳಗಳ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಅರಳಿತು ಪ್ರೀತಿಯ ಹೂವು