Friday, 22nd November 2024

Viral Video: ಮಾಡಿದ್ದು ಪಿಎಚ್‌ಡಿ, ಉದ್ಯೋಗ ಸ್ಟ್ರೀಟ್‌ ಫುಡ್ ಅಂಗಡಿ; ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ

Viral Video

ಚೆನ್ನೈ: ಅಮೆರಿಕದ ವ್ಲಾಗರ್ (American vlogger) ಒಬ್ಬರು ಹಂಚಿಕೊಂಡಿದ್ದಾರೆ ಎನ್ನಲಾದ ಚೆನ್ನೈ (Chennai) ಬೀದಿ ಬದಿ ಆಹಾರ ತಯಾರಿಸುವ (street food vendor) ಪಿಎಚ್‌ಡಿ ವಿದ್ಯಾರ್ಥಿಯ (PhD student) ವಿಡಿಯೋವೊಂದನ್ನು ಉದ್ಯಮಿ ಆನಂದ್ ಮಹೀಂದ್ರ (Anand mahindra) ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅದೀಗ ವೈರಲ್ (Viral Video) ಆಗಿದೆ.

ಅಮರಿಕದ ವ್ಲಾಗರ್ ಕ್ರಿಸ್ಟೋಫರ್ ಲೂಯಿಸ್ ಎಂಬವರು ತಮಿಳುನಾಡಿನಲ್ಲಿ ಸುತ್ತಾಡುತ್ತಿದ್ದಾಗ ಚೆನ್ನೈನ ಬೀದಿ ಬದಿ ಆಹಾರ ಮಾರಾಟಗಾರ ತರುಲ್ ರಾಯನ್ ಕಂಡಿದ್ದಾರೆ. ಅವರ ಕಥೆಯನ್ನು ಕ್ರಿಸ್ಟೋಫರ್ ಲೂಯಿಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ. ನಾನ್‌ ವೆಜ್‌ ಸ್ಟ್ರೀಟ್ ಫುಡ್ ಅಂಗಡಿ ಇಟ್ಟುಕೊಂಡಿರುವ ತರುಲ್‌ ಕ್ರಿಸ್ಟೋಫರ್ ಲೂಯಿಸ್ ಜತೆ ಮಾತನಾಡುತ್ತಾ ತಮ್ಮ ಕತೆಯನ್ನು ಹೇಳಿಕೊಂಡಿದ್ದಾರೆ. ಈ ವೇಳೆ ಅವರು ಪಿಎಚ್ಡಿ ಮಾಡಿದವರು ಎಂಬದು ಗೊತ್ತಾಗಿದೆ.

ಕೆಲಸದ ಜೊತೆಗೆ ತಮ್ಮ ಶಿಕ್ಷಣ ಮುಂದುವರಿಸುವ ರಾಯನ್‌ನಂತಹ ಯುವಕರು ಎಲ್ಲರಿಗೂ ಸ್ಪೂರ್ತಿ ಎಂದು ಕ್ರಿಸ್ಟೋಫರ್ ಲೂಯಿಸ್ ಕೊನೆಯಲ್ಲಿ ಹೇಳಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಗೂಗಲ್ ಮ್ಯಾಪ್‌ ಆಧರಿಸಿ ಅವರು ರಾಯನ್ ಅವರ ಶಾಪ್‌ಗೆ ಭೇಟಿ ನೀಡಿದ್ದಾಗಿ ಕ್ರಿಸ್ಟೋಫರ್ ತಿಳಿಸಿದ್ದಾರೆ. ರಾಯನ್ ಬಯೋಟೆಕ್ನಾಲಜಿಯಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿರುವುದನ್ನು ಕೇಳಿ ಅವರು ಆಶ್ಚರ್ಯಪಟ್ಟಿದ್ದಾರೆ.
ತಾನು ಎಸ್‌ಆರ್‌ಎಂ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಮಾಡುತ್ತಿರುವುದಾಗಿ ರಾಯನ್ ತಿಳಿಸಿದ್ದಾರೆ.

ಕ್ರಿಸ್ಟೋಫರ್‌ಗೆ ಗೂಗಲ್‌ನಲ್ಲಿ ತಮ್ಮ ಸಂಶೋಧನಾ ಲೇಖನಗಳನ್ನು ಹುಡುಕುವಂತೆ ರಾಯನ್ ಹೇಳಿದ್ದಾರೆ. ಬಳಿಕ ಲೂಯಿಸ್ ಹುಡುಕಾಡಿದಾಗ ರಾಯನ್ ಅವರು ಬರೆದ ಅನೇಕ ಸಂಶೋಧನಾ ಲೇಖನಗಳನ್ನು ಅವರಿಗೆ ಅದರಲ್ಲಿ ಸಿಕ್ಕಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ ಅನೇಕರು ಕಾಮೆಂಟ್ ಕೂಡ ಮಾಡಿದ್ದಾರೆ. ಒಬ್ಬರು, ಸ್ಥಳೀಯ ವ್ಯವಹಾರಗಳನ್ನು ಬೆಂಬಲಿಸಿ. ಅಲ್ಲಿ ಅನೇಕ ಉತ್ತಮ ರತ್ನಗಳಿವೆ ಎಂದು ಹೇಳಿದ್ದಾರೆ.

ಇನ್ನೊಬ್ಬರು ಕಾಮೆಂಟ್ ನಲ್ಲಿ ಅದು ತಮಿಳುನಾಡು. ಇಲ್ಲಿ ಸಾಕಷ್ಟು ಸ್ಫೂರ್ತಿದಾಯಕ ಕಥೆಗಳನ್ನು ಕಾಣಬಹುದು ಎಂದಿದ್ದಾರೆ.

Viral Video: ಮೊಬೈಲ್ ಕಸಿದುಕೊಂಡ ತಾಯಿಯ ತಲೆಗೆ ಬ್ಯಾಟ್‌ನಿಂದ ಬಾರಿಸಿದ ಬಾಲಕ!

ಮತ್ತೊಬ್ಬರು ಭಾರತದ ಭವಿಷ್ಯವು ಸೂಕ್ಷ್ಮ ಮಟ್ಟದ ಉದ್ಯಮಶೀಲತೆಯಲ್ಲಿದೆ. ಇದು ಭಾರತದಲ್ಲಿ ಉದ್ಯೋಗ ಸವಾಲುಗಳನ್ನು ಪರಿಹರಿಸುತ್ತದೆ ಎಂದು ಹೇಳಿದ್ದಾರೆ.