Saturday, 16th November 2024

Toilet Tax: ಒಂದಕ್ಕಿಂತ ಹೆಚ್ಚು ಟಾಯ್ಲೆಟ್‌ ಇದ್ರೆ ಬೀಳುತ್ತೆ ಟ್ಯಾಕ್ಸ್‌! ಇದೇನಿದು ಹೊಸ ರೂಲ್‌?

toilet tax

ಶಿಮ್ಲಾ: ಹಿಮಾಚಲ ಪ್ರದೇಶ(Himachal Pradesh)ದಲ್ಲಿ ಟಾಯ್ಲೆಟ್‌ ಟ್ಯಾಕ್ಸ್‌(Toilet Tax) ವಿಚಾರವೊಂದು ಭಾರೀ ಸದ್ದು ಮಾಡುತ್ತಿದೆ. ನಗರ ಪ್ರದೇಶಗಳಲ್ಲಿ ಒಂದಕ್ಕಿಂತ ಹೆಚ್ಚು ಶೌಚಾಲಯ ಹೊಂದಿದ್ದರೆ ಸರ್ಕಾರ ಹೆಚ್ಚುವರಿ ತೆರಿಗೆ ವಿಧಿಸುತ್ತಿದೆ ಎಂದು ವರದಿಯೊಂದು ಪ್ರಕಟಗೊಂಡಿದ್ದು, ಇದು ಪ್ರತಿಪಕ್ಷಗಳ ಬಾಯಿಗೆ ಆಹಾರವಾಗಿದೆ. ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಕಿಡಿಕಾರಿವೆ. ಆದರೆ ರಾಜ್ಯದಲ್ಲಿ ಅಂತಹ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ಏನಿದು ಟಾಯ್ಲೆಟ್‌ ಟ್ಯಾಕ್ಸ್‌?

ಹಿಮಾಚಲ ಪ್ರದೇಶ ಸರ್ಕಾರ ಟಾಯ್ಲೆಟ್‌ ಟ್ಯಾಕ್ಸ್‌ ವಿಧಿಸಿದೆ ಎಂದು ವರದಿಯೊಂದು ಪ್ರಕಟವಾಗಿತ್ತು. ನಗರದ ಪ್ರದೇಶಗಳಲ್ಲಿ ನಿವಾಸಗಳಲ್ಲಿ ಹೆಚ್ಚು ಹೆಚ್ಚು ಶೌಚಾಲಯಗಳನ್ನು ಹೊಂದಿರುತ್ತವೆ. ಹೀಗಾಗಿ ಪ್ರತಿ ಟಾಯ್ಲೆಟ್‌ಗೆ 25 ರೂ. ತೆರಿಗೆ ವಿಧಿಸಲಾಗುತ್ತಿದೆ ಎಂಬ ಸುದ್ದಿ ರಾಜ್ಯಾದ್ಯಂತ ಹಬ್ಬಿತ್ತು. ಇದು ಅನೇಕರು ಆಕ್ರೋಶಕ್ಕೆ ಕಾರಣವಾಗಿತ್ತು.

ಸಿಎಂ ಸುಖು ಸ್ಪಷ್ಟನೆ

ಇನ್ನು ಈ ವಿಚಾರಕ್ಕೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಸ್ಪಷ್ಟನೆ ನೀಡಿದ್ದು, ಟಾಯ್ಲೆಟ್‌ ತೆರಿಗೆಯಂತಹ ಯಾವುದೇ ನೀತಿಯನ್ನು ಜಾರಿಗೆ ತಂದಿಲ್ಲ. ಇದು ನಿರಾಧಾರ ಆರೋಪ ಎಂದು ಹೇಳಿದ್ದಾರೆ. ಅಲ್ಲದೇ ಪ್ರತಿ ಮನೆಗೆ 100ರೂ. ನೀರಿನ ತೆರಿಗೆಯಲ್ಲಿ 25ರೂ. ಟಾಯ್ಲೆಟ್‌ ಟಾಕ್ಸ್‌ ಕೂಡ ಸೇರಿದೆ. ಆ ವಿಚಾರವನ್ನು ಬಿಜೆಪಿಗರು ತಪ್ಪಾಗಿ ಅರ್ಥೈಸಿ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಕಾಂಗ್ರೆಸ್‌ ಕೆಂಡಾಮಂಡಲ

ವಿಧಾನಸಭಾ ಚುನಾವಣೆಯ ಮೊದಲು, ಬಿಜೆಪಿ ಹಿಮಾಚಲ ಪ್ರದೇಶದಲ್ಲಿ ರ್ಯಾಲಿಯನ್ನು ನಡೆಸಿತ್ತು. ಅಲ್ಲಿ ಅವರು ಉಚಿತ ನೀರಿನ ಮೀಟರ್‌ಗಳನ್ನು ಭರವಸೆ ನೀಡಿದರು, ನೀರಿನ ಬಳಕೆಗೆ ಯಾವುದೇ ಶುಲ್ಕವಿಲ್ಲ ಎಂದು ಹೇಳಿದರು. ನೀರಿಗಾಗಿ ಪ್ರತಿ ಕುಟುಂಬಕ್ಕೆ ₹ 100 ಸಬ್ಸಿಡಿ ನೀಡಲು ನಾವು ಪ್ರಸ್ತಾಪಿಸಿದ್ದೇವೆ, ಇದರಲ್ಲಿ ಪಂಚತಾರಾ ಹೋಟೆಲ್‌ಗಳೂ ಸೇರಿವೆ. ಸಾಧ್ಯವಿರುವವರು ಮಾತ್ರ ಪಾವತಿಸುತ್ತಿದ್ದಾರೆ. ಶೌಚಾಲಯ ತೆರಿಗೆ ಎಂಬುದೇ ಇಲ್ಲ” ಎಂದು ಹಿರಿಯ ಕಾಂಗ್ರೆಸ್ ನಾಯಕ ಸುದ್ದಿಗಾರರಿಗೆ ತಿಳಿಸಿದರು.

ನಿರ್ಮಲಾ ಸೀತಾರಾಮನ್‌ ಪ್ರತಿಕ್ರಿಯೆ

ಇನ್ನು ಈ ವಿಚಾರದ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರತಿಕ್ರಿಯಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಇದು ನಂಬಲಾಸಾಧ್ಯವಾದ ಸತ್ಯ. ಪ್ರಧಾನಿ ನರೇಂದ್ರ ಮೋದಿ ಸ್ವಚ್ಛತೆಯನ್ನು ಅಭಿಯಾನದ ರೀತಿ ಮಾಡುತ್ತಿದ್ದರೆ, ಇಲ್ಲಿ ಕಾಂಗ್ರೆಸಿಗರು ಶೌಚಾಲಯಕ್ಕೆ ಟ್ಯಾಕ್ಸ್‌ ಹಾಕುತ್ತಿದ್ದಾರೆ. ಅವರ ಆಡಳಿತಾವಧಿಯಲ್ಲಿ ಕನಿಷ್ಟ ಸ್ವಚ್ಛತೆಯನ್ನು ನೀಡುವಲ್ಲೂ ವಿಫಲವಾಗಿತ್ತು. ಇದೀಗ ಕಾಂಗ್ರೆಸ್‌ನ ಈ ನಡೆ ಇಡೀ ದೇಶಕ್ಕೆ ನಾಚಿಗೇಡಿನ ಸಂಗತಿ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Maharashtra government: ಮಹಾರಾಷ್ಟ್ರದಲ್ಲಿ ʻಗೋವು ರಾಜ್ಯಮಾತೆʼ; ಚುನಾವಣೆಗೂ ಮುನ್ನ ಸರ್ಕಾರದಿಂದ ಮಹತ್ವದ ಘೋಷಣೆ