Monday, 25th November 2024

Beggar Girl Became Doctor: ಭಿಕ್ಷೆ ಬೇಡುತ್ತಿದ್ದ ಬಾಲಕಿಯ ಬದುಕಲ್ಲಿ ದೇವರಾಗಿ ಬಂದ ಬೌದ್ಧ ಬಿಕ್ಕು

Beggar Girl Became Doctor

ಹಿಮಾಚಲ ಪ್ರದೇಶದಲ್ಲಿ (himachal pradesh) ತನ್ನ ಹೆತ್ತವರೊಂದಿಗೆ ಭಿಕ್ಷೆ ಬೇಡುತ್ತಿದ್ದ ಬಾಲಕಿಯ (Beggar Girl Became Doctor) ಬದುಕಲ್ಲಿ ದೇವರಂತೆ ಬಂದ ಬೌದ್ಧ ಸನ್ಯಾಸಿಯಿಂದಾಗಿ (Tibetan refugee monk) ಆಕೆ ಇಂದು ವೈದ್ಯೆಯಾಗಿದ್ದಾಳೆ. ಬಾಲಕಿ 4 ವರ್ಷದವಳಿದ್ದಾಗ ಬೌದ್ಧ ಸನ್ಯಾಸಿ (buddhist monk) ಕರೆದುಕೊಂಡು ಹೋಗಿ ಶಾಲೆಗೆ ಸೇರಿಸಿದ್ದರು. ಇದೀಗ ಆಕೆ ಓದಿ ಎಂಬಿಬಿಎಸ್ (MBBS) ಪದವಿ ಮುಗಿಸಿ ವೈದ್ಯೆಯಾಗಿದ್ದಾಳೆ.

ಪಿಂಕಿ ಹರ್ಯಾನ್ ತನ್ನ ಹೆತ್ತವರೊಂದಿಗೆ ಹಿಮಾಚಲ ಪ್ರದೇಶದ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದಳು. ಮೆಕ್ಲಿಯೋಡ್‌ಗಂಜ್‌ನ ಕಸದ ತೊಟ್ಟಿಗಳಲ್ಲಿ ಆಹಾರವನ್ನು ಹುಡುಕುತ್ತಿದ್ದಳು. ಯಾವಾಗ ಬೌದ್ಧ ಸನ್ಯಾಸಿಯ ಕರುಣೆ ಆಕೆಯ ಮೇಲೆ ಬಿತ್ತೋ ಆಕೆಯ ಜೀವನ ಸಂಪೂರ್ಣ ಬದಲಾಯಿತು. ಸರಿಸುಮಾರು ಇಪ್ಪತ್ತು ವರ್ಷಗಳ ಬಳಿಕ ವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸಿದಳು.

Beggar Girl Became Doctor

2004ರಲ್ಲಿ ಟಿಬೆಟಿಯನ್ ನಿರಾಶ್ರಿತರ ಸನ್ಯಾಸಿ ಮತ್ತು ಧರ್ಮಶಾಲಾ ಮೂಲದ ಚಾರಿಟಬಲ್ ಟ್ರಸ್ಟ್‌ನ ನಿರ್ದೇಶಕ ಲೋಬ್ಸಾಂಗ್ ಜಮ್ಯಾಂಗ್ ಅವರು ಹರ್ಯಾನ್ ಭಿಕ್ಷೆ ಬೇಡುತ್ತಿರುವುದನ್ನು ಗಮನಿಸಿದ್ದರು. ಕೆಲವು ದಿನಗಳ ನಂತರ ಅವರು ಚರಣ್ ಖುದ್‌ನಲ್ಲಿರುವ ಸ್ಲಂ ಪ್ರದೇಶಕ್ಕೆ ಭೇಟಿ ನೀಡಿ ಬಾಲಕಿಯನ್ನು ಪತ್ತೆ ಹಚ್ಚಿದ್ದರು.

ಆಕೆಯ ಶಿಕ್ಷಣ ಮುಂದುವರಿಸಲು ಆಕೆಯ ಪೋಷಕರ ಮನವೊಲಿಸಿದ್ದರು. ಅಂತಿಮವಾಗಿ ಆಕೆಯ ತಂದೆ ಕಾಶ್ಮೀರಿ ಲಾಲ್ ಮಗಳ ಶಿಕ್ಷಣ ಮುಂದುವರಿಸಲು ಒಪ್ಪಿಗೆ ನೀಡಿದರು.

ಹರ್ಯಾನ್ ಧರ್ಮಶಾಲಾದ ದಯಾನಂದ ಪಬ್ಲಿಕ್ ಸ್ಕೂಲ್‌ಗೆ ಪ್ರವೇಶ ಪಡೆದಳು. 2004ರಲ್ಲಿ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿದ ನಿರ್ಗತಿಕ ಮಕ್ಕಳ ಹಾಸ್ಟೆಲ್‌ನ ಮೊದಲ ಬ್ಯಾಚ್ ವಿದ್ಯಾರ್ಥಿಗಳಲ್ಲಿ ಒಬ್ಬರಾದರು ಎಂದು 19 ವರ್ಷಗಳಿಂದ ಜಮ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿರುವ ಎನ್‌ಜಿಒ ಉಮಾಂಗ್ ಫೌಂಡೇಶನ್‌ನ ಅಧ್ಯಕ್ಷ ಅಜಯ್ ಶ್ರೀವಾಸ್ತವ ತಿಳಿಸಿದ್ದಾರೆ.

ಆರಂಭದಲ್ಲಿ ಹರ್ಯಾನ್ ತನ್ನ ಮನೆ ಮತ್ತು ಪೋಷಕರಿಂದ ದೂರವಾಗಿರುವುದು ಕಷ್ಟವಾಯಿತು. ಆದರೆ ಅಧ್ಯಯನದತ್ತ ಹೆಚ್ಚಿನ ಗಮನ ಹರಿಸಿದಳು. ಶಿಕ್ಷಣದಿಂದ ಬಡತನ ದೂರ ಮಾಡಬಹುದು ಎಂದು ತಿಳಿದುಕೊಂಡಳು ಎಂದು ಅವರು ಹೇಳಿದ್ದಾರೆ.

ಹಿರಿಯ ಮಾಧ್ಯಮಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಬರೆದು ಅದರಲ್ಲಿ ಉತ್ತೀರ್ಣರಾದ ಹರ್ಯಾನ್, ಯುನೈಟೆಡ್ ಕಿಂಗ್‌ಡಮ್‌ನ ಟಾಂಗ್-ಲೆನ್ ಚಾರಿಟೇಬಲ್ ಟ್ರಸ್ಟ್‌ನ ಸಹಾಯದಿಂದ 2018 ರಲ್ಲಿ ಚೀನಾದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದಿದ್ದಳು. ಎಂಬಿಬಿಎಸ್ ಮುಗಿಸಿ ಇತ್ತೀಚೆಗೆ ಧರ್ಮಶಾಲಾಕ್ಕೆ ಮರಳಿದ್ದಾರೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ.

20 ವರ್ಷಗಳ ಅನಂತರ ಹರ್ಯಾನ್ ಅರ್ಹ ವೈದ್ಯರಾಗಿದ್ದು ನಿರ್ಗತಿಕರಿಗೆ ಸೇವೆ ಸಲ್ಲಿಸಲು ಮತ್ತು ಅವರಿಗೆ ಉತ್ತಮ ಜೀವನವನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು .ಶ್ರೀವಾಸ್ತವ ತಿಳಿಸಿದ್ದಾರೆ.

Beggar Girl Became Doctor

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಹರ್ಯಾನ್, ಬಾಲ್ಯದಿಂದಲೂ ಬಡತನವು ಅತ್ಯಂತ ದೊಡ್ಡ ಹೋರಾಟವಾಗಿತ್ತು. ನನ್ನ ಕುಟುಂಬವು ಸಂಕಷ್ಟದಲ್ಲಿರುವುದನ್ನು ನೋಡುವುದು ನೋವಿನ ಸಂಗತಿಯಾಗಿದೆ. ನಾನು ಶಾಲೆಗೆ ಸೇರುತ್ತಿದ್ದಂತೆ ಜೀವನದಲ್ಲಿ ಯಶಸ್ವಿಯಾಗುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದೆ ಎಂದು ತಿಳಿಸಿದ್ದಾರೆ.

ನನ್ನ ಹಿನ್ನೆಲೆಯು ನನ್ನ ದೊಡ್ಡ ಪ್ರೇರಣೆಯಾಗಿತ್ತು ಎಂದು ಬಾಲ್ಯದ ನೆನಪನ್ನು ಹಂಚಿಕೊಂಡ ಹರ್ಯಾನ್, ನಾನು ಯಾವಾಗಲೂ ನನ್ನ ಸಮುದಾಯಕ್ಕೆ ಸಹಾಯ ಮಾಡಲು ಬಯಸುತ್ತೇನೆ. ಭಾರತದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುವ ಅರ್ಹತೆ ಪಡೆಯಲು ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆಗೆ (FMGE) ತಯಾರಿ ನಡೆಸುತ್ತಿರುವ ಅವರು ತಿಳಿಸಿದರು.

ನನ್ನ ಬಳಿಕ ಅವರ ಸಹೋದರ ಮತ್ತು ಸಹೋದರಿ ಕೂಡ ಶಾಲೆಗೆ ದಾಖಲಾಗಿದ್ದಾರೆ. ಜಮ್ಯಾಂಗ್ ಅವರು ನಿರ್ಗತಿಕ ಮತ್ತು ಬಡ ಮಕ್ಕಳಿಗೆ ಸಹಾಯ ಮಾಡುವ ದೃಷ್ಟಿಕೋನವನ್ನು ಹೊಂದಿದ್ದರು. ನಾನು ಶಾಲೆಯಲ್ಲಿದ್ದಾಗ ಅವರು ನನಗೆ ದೊಡ್ಡ ಬೆಂಬಲ ವ್ಯವಸ್ಥೆಯಾಗಿದ್ದರು. ನನ್ನ ಮೇಲಿನ ಅವರ ನಂಬಿಕೆಯು ನಾನು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ದೊಡ್ಡ ಸ್ಫೂರ್ತಿಯಾಗಿದೆ ಎಂದರು.

ನನ್ನಂತೆಯೇ ಇನ್ನೂ ಕೆಲವರು ಟ್ರಸ್ಟ್‌ನ ಬೆಂಬಲದಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ ಎಂದು ಹರ್ಯಾನ್ ತಿಳಿಸಿದರು.

ಜಮ್ಯಾಂಗ್ ಅವರು ಮಾತನಾಡಿ, ನಿರ್ಗತಿಕ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಮೂಲಕ ಅವರು ಗೌರವಯುತ ಜೀವನ ನಡೆಸಬಹುದು ಎಂಬ ಆಶಯದೊಂದಿಗೆ ಟ್ರಸ್ಟ್ ಅನ್ನು ಸ್ಥಾಪಿಸಿರುವುದಾಗಿ ತಿಳಿಸಿದರು.

Islam in slovakia: ಸ್ಲೋವಾಕಿಯಾ ದೇಶದಲ್ಲಿ ಮುಸ್ಲಿಮರಿದ್ದರೂ ಮಸೀದಿ ನಿರ್ಮಿಸಲು ಅವಕಾಶ ಇಲ್ಲವೇ ಇಲ್ಲ!

ಇಲ್ಲಿಗೆ ಬಂದ ಮಕ್ಕಳು ಇಷ್ಟೊಂದು ಪ್ರತಿಭೆಯಿಂದ ಕೂಡಿದ್ದಾರೆ ಎಂಬುದು ನನಗೆ ತಿಳಿದಿರಲಿಲ್ಲ. ಅವರು ಮಾದರಿಯಾಗಿದ್ದಾರೆ ಮತ್ತು ಇತರರಿಗೆ ಸ್ಫೂರ್ತಿ ನೀಡುತ್ತಿದ್ದಾರೆ ಎಂದರು. ಮಕ್ಕಳನ್ನು “ಹಣ ಗಳಿಸುವ ಯಂತ್ರಗಳು” ಎಂದು ಪರಿಗಣಿಸಬಾರದು ಎನ್ನುವುದು ಜಮ್ಯಾಂಗ್ ನಂಬಿಕೆ. ಬದಲಾಗಿ ಒಳ್ಳೆಯ ಮನುಷ್ಯರಾಗಲು ಪ್ರೋತ್ಸಾಹಿಸಬೇಕು ಎನ್ನುತ್ತಾರೆ ಅವರು.