Saturday, 23rd November 2024

Viral Video: ಮೂಗಿನ ಕೂದಲು ಕೀಳುವುದು ಆಗುವ ನಷ್ಟವೇನು? ವಿಡಿಯೊದಲ್ಲಿದೆ ಎಲ್ಲ ವಿವರ

Viral Video

ದೇಹದ ವಿವಿಧ ಭಾಗಗಳಲ್ಲಿ ಕೂದಲು (hair) ಇದ್ದು ನಮಗೆ ಇಷ್ಟವಿಲ್ಲದೇ ಇದ್ದರೂ ಅದು ಒಂದಲ್ಲ ಒಂದು ರೀತಿಯಲ್ಲಿ ನಮ್ಮ ದೇಹದ ರಕ್ಷಣೆಗಾಗಿ ಆಗಿರುತ್ತದೆ. ಸ್ವಚ್ಛತೆ, ಆರೈಕೆ ಎಂದುಕೊಂಡು ಕೆಲವರು ಈ ಕೂದಲುಗಳನ್ನು ತೆಗೆಯುತ್ತಾರೆ. ಆದರೆ ಇದರ ಪರಿಣಾಮ ಮುಂದೆ ಎದುರಿಸಬೇಕಾಗುತ್ತದೆ. ಈ ಕುರಿತ ವಿಡಿಯೋವೊಂದು (Viral Video) ಈಗ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿದೆ.

ಹೆಚ್ಚಾಗಿ ಮುಖದ ಕೂದಲನ್ನು ಟ್ರಿಮ್ ಮಾಡುವುದು ಕೆಲವರ ಸಾಮಾನ್ಯ ಅಭ್ಯಾಸ. ಅದರಲ್ಲೂ ಕೆಲವರು ತಮ್ಮ ಮೂಗಿನ ಒಳಗಿರುವ ಕೂದಲುಗಳನ್ನು ಕತ್ತರಿಸುತ್ತಾರೆ, ಗಿಡ್ಡ ಮಾಡುತ್ತಾರೆ. ಇದು ಅಪಾಯಕ್ಕೆ ಅಹ್ವಾನ ನೀಡುತ್ತದೆ.
ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಮೂಗಿನ ಕೂದಲು ಕತ್ತರಿಸುವುದರಿಂದ ಉಂಟಾಗುವ ಅಪಾಯವನ್ನು ವಿವರಿಸಿದೆ.

ಕಂಟೆಂಟ್ ಕ್ರಿಯೇಟರ್ ಝಾಕ್ ಡಿ ಫಿಲ್ಮ್ಸ್ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮೂಗಿನ ಕೂದಲು ಕೀಳುವುದರಿಂದ ಉಂಟಾಗುವ ಅಪಾಯವನ್ನು ಅನಿಮೇಷನ್ ಚಿತ್ರದ ಮೂಲಕ ತೋರಿಸಿದೆ.

ಮೂಗಿನ ಹೊಳ್ಳೆಯಲ್ಲಿ ಕೂದಲು ಬೆಳೆಯುತ್ತಿರುವುದು ಕೆಲವರಿಗೆ ಕಿರಿಕಿರಿ ಉಂಟು ಮಾಡಬಹುದು. ಇದರಿಂದ ಕೂದಲು ತೆಗೆಯಲು ಹೆಚ್ಚಿನವರು ಒಲವು ತೋರಿಸುತ್ತಾರೆ. ಮೂಗಿನ ಸ್ವಚ್ಛತೆಯ ಭಾಗವೆಂದು ಇದನ್ನು ಪರಿಗಣಿಸುತ್ತಾರೆ. ಆದರೆ ಇದು ಅಗತ್ಯವಿದೆಯೇ ಎನ್ನುವ ಪ್ರಶ್ನೆಯ ಮೂಲಕ ವಿಡಿಯೋ ಆರಂಭವಾಗುತ್ತದೆ.

ಮೂಗಿನ ಒಳಗೆ ಬೆಳೆಯುವ ಕೂದಲು ಮೂಗಿನ ಮಾರ್ಗದ ಮೂಲಕ ಹಾನಿಕಾರಕ ಬ್ಯಾಕ್ಟೀರಿಯಾ, ವೈರಸ್ ಪ್ರವೇಶಿಸದಂತೆ ತಡೆಯುತ್ತದೆ. ಇದು ಫಿಲ್ಟರ್ ನಂತೆ ಕಾರ್ಯ ನಿರ್ವಹಿಸುತ್ತದೆ. ಆದರೆ ಇದನ್ನು ತೆಗೆದು ಹಾಕಿದರೆ ಬ್ಯಾಕ್ಟೀರಿಯಾ, ವೈರಸ್ ಗಳು ನೇರವಾಗಿ ಉಸಿರಾಟದ ಮೂಲಕ ದೇಹದೊಳಗೆ ಪ್ರವೇಶಿಸುವಂತೆ ಮಾಡುತ್ತದೆ.

ಇದು ಅಪರೂಪದ ಸಂದರ್ಭದಲ್ಲಿ ಈ ಬ್ಯಾಕ್ಟೀರಿಯಾ, ವೈರಸ್ ಗಳು ಮೂಗಿನ ಮೂಲಕ ದೇಹದೊಳಗೆ ಪ್ರವೇಶಿಸಿ ಶ್ವಾಸಕೋಶ, ಮೆದುಳಿಗೆ ಗಂಭೀರ ತೊಡಕುಗಳನ್ನು ಉಂಟು ಮಾಡುತ್ತವೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿರುವುದು ಮಾತ್ರವಲ್ಲ ಸಾಕಷ್ಟು ಚರ್ಚೆಯನ್ನೂ ಹುಟ್ಟು ಹಾಕಿದೆ.

ಒಬ್ಬ ಬಳಕೆದಾರ ಪ್ರತಿಕ್ರಿಯಿಸಿ ಅದಕ್ಕಾಗಿಯೇ ನಾನು ನನ್ನ ಮೂಗಿನ ಕೂದಲನ್ನು ಎಂದಿಗೂ ತೆಗೆಯುವುದಿಲ್ಲ ಮತ್ತು ನನ್ನ ಮೂಗಿನ ಕೂದಲುಗಳು ಮೂಗಿನಿಂದ ಹೊರಬಂದರೆ ನಾನು ಅದನ್ನು ಕತ್ತರಿಗಳಿಂದ ಕತ್ತರಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಹೌದು, ಅವುಗಳನ್ನು ಕತ್ತರಿಸುವುದಕ್ಕಿಂತ ಚಿಕ್ಕದಾಗಿಸುವುದು ಉತ್ತಮವಾಗಿದೆ ಎಂದು ಹೇಳಿದ್ದಾರೆ.

ಮತ್ತೊಬ್ಬರು ಬ್ಯಾಕ್ಟೀರಿಯಾಗಳು ತುಂಬಾ ಚಿಕ್ಕದಾಗಿದೆ. ಮೂಗಿನ ಕೂದಲು ದೊಡ್ಡ ಕಣಗಳನ್ನು ಮಾತ್ರ ತಡೆಯುತ್ತದೆ ಎಂದಿದ್ದಾರೆ. ಎನ್ ಹೆಚ್ ಎಸ್ ವೈದ್ಯರಾದ ಕರಣ್ ರಾಜನ್ ಅವರು ತಮ್ಮ ಯೂಟ್ಯೂಬ್ ವಿಡಿಯೋವೊಂದರಲ್ಲಿ ಮೂಗಿನ ಕೂದಲು ಕಿತ್ತುಕೊಳ್ಳುವುದರಿಂದಾಗುವ ಅಪಾಯಗಳ ಬಗ್ಗೆ ವಿವರಿಸಿದ್ದಾರೆ.

ಅದರಲ್ಲಿ ಅವರು, ಮೂಗಿನಲ್ಲಿ ಎರಡು ರೀತಿಯ ಫಿಲ್ಟರ್ ಇರುತ್ತದೆ. ಒಂದು ಕೂದಲು. ಇನ್ನೊಂದು ಲೋಳೆಯಂತದ್ದು. ಲೋಳೆಯಂತ ಫಿಲ್ಟರ್ ಗಂಟಲಿನ ಮೂಲಕ ಸಾಗಿ ಹೊಟ್ಟೆಯಲ್ಲಿ ಕೊನೆಗೊಳ್ಳುತ್ತದೆ. ಮೂಗಿನ ಕೂದಲನ್ನು ಕೀಳುವುದರಿಂದ ಸೂಕ್ಷ್ಮಾಣುಗಳು ಸುಲಭವಾಗಿ ದೇಹದ ಒಳಗೆ ಪ್ರವೇಶಿಸುತ್ತವೆ. ಇದು ಮೆದುಳಿನ ಸೋಂಕುಗಳಿಗೆ ಕಾರಣವಾಗಬಹುದು ಎಂದಿದ್ದಾರೆ.

Hairfall Tips: ಪಾರಿಜಾತ ಹೂಗಳನ್ನು ಬಳಸಿ ಕೂದಲು ಉದುರುವುದನ್ನು ತಡೆಯಬಹುದೇ?

ಮೂಗಿನ ಮೂಲಕ ಮೆದುಳಿಗೆ ಸಾಗುವ ರಕ್ತನಾಳಗಳ ಮೂಲಕ ಸೂಕ್ಷ್ಮಜೀವಿಗಳು ಮೆದುಳಿಗೆ ಹೋದರೆ ಅದು ಮೆದುಳಿನಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಇದು ಕೆಲವೊಮ್ಮೆ ಮೆದುಳಿನ ಬಾವುಗೆ ಕಾರಣವಾಗುತ್ತದೆ. ಇದು ಅಪರೂಪ. ಆದರೆ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರಲ್ಲಿ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ಮೂಗಿನ ಕೂದಲನ್ನು ಕೀಳುವ ಬದಲು ಅವುಗಳನ್ನು ಟ್ರಿಮ್ ಮಾಡುವುದು ಉತ್ತಮ ಎಂದು ತಿಳಿಸಿದ್ದಾರೆ.