ಬೆಂಗಳೂರು: ಅಮೆಜಾನ್ ಸಿಇಒ ಜೆಫ್ ಬೆಜೋಸ್ ಮತ್ತು ಎಲ್ವಿಎಂಎಚ್ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿದ ಮೆಟಾ ಸಂಸ್ಥೆಯ ಮಾಲೀಕ ಮಾರ್ಕ್ ಜುಕರ್ಬರ್ಗ್ (Mark Zuckerberg) ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಬ್ಲೂಮ್ಬರ್ಗ್ ಬಿಲಿಯನೇರ್ ಅಂಕ ಅಂಶಗಳ ಪ್ರಕಾರ, ಮೆಟಾ ಸಿಇಒ ಒಟ್ಟ ಮೌಲ್ಯವು 206 ಬಿಲಿಯನ್ ಡಾಲರ್ (17.3 ಲಕ್ಷ ಕೋಟಿ ರೂ.) ತಲುಪಿದೆ. ಹೀಗಾಗಿ ಟೆಸ್ಲಾ ಸಿಇಒ ಎಲೋನ್ ಮಸ್ಕ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಮಸ್ಕ್ 256 ಬಿಲಿಯನ್ ಡಾಲರ್ (21.5 ಲಕ್ಷ ಕೋಟಿ ರೂ.) ನೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
2024ರಲ್ಲಿ ಜುಕರ್ಬರ್ಗ್ ಅವರ ಸಂಪತ್ತು 78.1 ಬಿಲಿಯನ್ ಡಾಲರ್ (6.5 ಲಕ್ಷ ಕೋಟಿ ರೂ.) ಹೆಚ್ಚಾಗಿದೆ. ಇದು ಅವರಿಗೆ 200 ಬಿಲಿಯನ್ ಡಾಲರ್ ಕ್ಲಬ್ಗೆ ಸೇರಲು ಅನುವು ಮಾಡಿಕೊಟ್ಟಿತು. ಈ ಗುಂಪಿನಲ್ಲಿ ಈಗ ಮಸ್ಕ್ ಮತ್ತು ಬೆಜೋಸ್ ಇದ್ದರು. ಬೆಜೋಸ್ 205 ಬಿಲಿಯನ್ ಡಾಲರ್ (17.3 ಲಕ್ಷ ಕೋಟಿ ರೂ.) ಗಿಂತ ಸ್ವಲ್ಪ ಹಿಂದೆ ಇದ್ದಾರೆ.
ಅರ್ನಾಲ್ಟ್ ಅವರ ಸಂಪತ್ತು 193 ಬಿಲಿಯನ್ ಡಾಲರ್ (16.2 ಲಕ್ಷ ಕೋಟಿ ರೂ.) ಗೆ ಇಳಿದಿದೆ. ಹೀಗಾಗಿ ಅವರು 200 ಬಿಲಿಯನ್ ಡಾಲರ್ ಕ್ಲಬ್ನಿಂದ ಹೊರಕ್ಕೆ ಬಿದ್ದಿದ್ದಾರೆ.
2004ರಲ್ಲಿ ಫೇಸ್ಬುಕ್ ಸ್ಥಾಪಿಸಿದ ಜುಕರ್ಬರ್ಗ್, ತಮ್ಮ ಸಂಪತ್ತಿನ ಹೆಚ್ಚಿನ ಭಾಗವನ್ನು ಮೆಟಾ ಪ್ಲಾಟ್ಫಾರ್ಮ್ನಿಂದ ಪಡೆಯುತ್ತಿದ್ದಾರೆ. ಮೆಟಾ ಷೇರುಗಳು ಈ ವರ್ಷ 72% ಕ್ಕಿಂತ ಹೆಚ್ಚಾಗಿತ್ತು. ಷೇರು ದಾಖಲೆಯ ಗರಿಷ್ಠ $ 595.94 ಕ್ಕೆ ಕೊನೆಗೊಂಡಿತು. ಫೇಸ್ಬುಕ್, ಇನ್ಸ್ಟಾಗ್ರಾಮ್, ಥ್ರೆಡ್ಸ್ ಮತ್ತು ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಅಪ್ ನಂಥ ಸಾಮಾಜಿಕ ಮಾಧ್ಯಮ ಫ್ಲ್ಯಾಟ್ಪಾರ್ಮ್ಗಳನ್ನು ಮೆಟಾ ಹೊಂದಿದೆ.
ಇದನ್ನೂ ಓದಿ: IndiGo airlines : ಇಂಡಿಗೊ ಏರ್ಲೈನ್ಸ್ ಸರ್ವರ್ನಲ್ಲಿ ಸಮಸ್ಯೆ; ಪ್ರಯಾಣಿಕರ ಪರದಾಟ
ಸೆಪ್ಟೆಂಬರ್ 25 ರಂದು ನಡೆದ ಮೆಟಾ ಕನೆಕ್ಟ್ 2024 ಕಾರ್ಯಕ್ರಮದಲ್ಲಿ, 40 ವರ್ಷದ ಬಿಲಿಯನೇರ್ ಮೆಟಾ ಎಐ ಜಾಗತಿಕವಾಗಿ ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಡಿಜಿಟಲ್ ಮಾಧ್ಯಮವಾಗುವ ಹಾದಿಯಲ್ಲಿದೆ ಎಂದು ಘೋಷಿಸಿದ್ದರು. ಈ ಸೇವೆಯು 500 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಸಮೀಪಿಸುತ್ತಿದೆ, ಯುರೋಪಿಯನ್ ಒಕ್ಕೂಟದಂತಹ ದೊಡ್ಡ ಮಾರುಕಟ್ಟೆಗಳಲ್ಲಿ ಮತ್ತಷ್ಟು ವಿಸ್ತರಣೆಯನ್ನು ನಿರೀಕ್ಷಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು.
ಒಟ್ಟು ಮೌಲ್ಯದಲ್ಲಿ ಏರಿಕೆ
ಇತರ ಟೆಕ್ ನಾಯಕರು ಸಹ ಈ ವರ್ಷ ತಮ್ಮ ಆದಾಯದಲ್ಲಿ ಗಮನಾರ್ಹ ಬೆಳವಣಿಗೆ ಕಂಡಿದ್ದಾರೆ. ಜೆನ್ಸನ್ ಎನ್ವಿಡಿಯಾ ಸಿಇಒ ಹುವಾಂಗ್ ಮತ್ತು ಒರಾಕಲ್ ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್ 2024 ರಲ್ಲಿ ತಮ್ಮ ಒಟ್ಟು ಮೌಲ್ಯಕ್ಕೆ ಕ್ರಮವಾಗಿ 63.5 ಬಿಲಿಯನ್ ಡಾಲರ್ (5.3 ಲಕ್ಷ ಕೋಟಿ ರೂ.) ಮತ್ತು 55.9 ಬಿಲಿಯನ್ ಡಾಲರ್ (4.7 ಲಕ್ಷ ಕೋಟಿ ರೂ.) ಸೇರಿಸಿಕೊಂಡಿದ್ದಾರೆ.