Thursday, 19th September 2024

ಲಸಿಕೆ ಸಂಗ್ರಹ ಸಾಮರ್ಥ್ಯ ಹೆಚ್ಚಳ ಅಗತ್ಯ

ಭಾರತದಲ್ಲಿ ಶೀಘ್ರದಲ್ಲಿ ಲಭ್ಯವಾಗಲಿರುವುದಾಗಿ ನಿರೀಕ್ಷಿಸುತ್ತಿರುವ ಕರೋನಾ ನಿರ್ಮೂಲನಾ ಲಸಿಕೆ ಕುರಿತು ಇದೀಗ ಇತರ ದೇಶಗಳಿಂದಲೂ ಭರವಸೆ ವ್ಯಕ್ತವಾಗುತ್ತಿದೆ.

ಕೋವಿಡ್-೧೯ ವಿರುದ್ಧದ ಹೋರಾಟ ಹಾಗೂ ಲಸಿಕೆ ತಯಾರಿಕೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬದ್ಧತೆ ಬಗ್ಗೆ
ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಮೆಚ್ಚುಗೆ ವ್ಯಕ್ತಪಡಿಸಿದಸದ್ದಾರೆ. ಕೋವಿಡ್ ವಿರುದ್ಧದ ಹೋರಾಟ, ಲಸಿಕೆ ತಯಾರಿಕೆ ಹಾಗೂ ಇತರ ದೇಶಗಳಿಗೆ ಪೂರೈಕೆ ಮಾಡಲು ಭಾರತ ತನ್ನ ಲಸಿಕೆ ಉತ್ಪಾದನಾ ಸಾಮರ್ಥ್ಯ
ಬಳಕೆಯ ಬಗ್ಗೆ ತೋರುತ್ತಿರುವ ಬದ್ಧತೆಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಇದೇ ವೇಳೆ ಅಮೆರಿಕದ ಕರೋನಾ ಕಾರ್ಯಪಡೆ ಸಲಹಾ ಸಮಿತಿಗೆ ಭಾರತೀಯ ಮೂಲದ ವೈದ್ಯೆ ಸೆಲೈನ್ ಗೌಂಡರ್ ಅವರನ್ನು ನೇಮಕಗೊಳಿಸಲಾಗಿದೆ. ಈ ಎರಡು ಬೆಳವಣಿಗೆಯಿಂದಾಗಿ ಕರೋನಾ ಲಸಿಕೆ ವಿಚಾರದಲ್ಲಿ ಅನೇಕ ರಾಷ್ಟ್ರಗಳು ಭಾರತದ ಬಗ್ಗೆ ಅಪಾರ ನಿರೀಕ್ಷೆಗಳು ಹೊಂದಿರುವುದು ತಿಳಿಯುತ್ತದೆ. ಈ ನಿರೀಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ಭಾರತದ ಪ್ರಯತ್ನವೂ ಪ್ರಗತಿ ಯಲ್ಲಿದೆ. ಕೋವಿಡ್-೧೯ ನಿಗ್ರಹ ಮತ್ತು ಶಮನ ಗೊಳಿಸುವ ನಿಟ್ಟಿನಲ್ಲಿ ಲಸಿಕೆ ಸಂಶೋಧನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ೯೦೦ ಕೋಟಿ ಘೋಷಿಸಿದ್ದಾರೆ. ಈ ಹಣವನ್ನು ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಜೈವಿಕ ತಂತ್ರಜ್ಞಾನ
ಇಲಾಖೆಗೆ ಒದಗಿಸಲಾಗಿದೆ.

ಕರೋನಾ ಲಸಿಕೆ ವಿಚಾರದಲ್ಲಿ ಭಾರತದ ಪ್ರಯತ್ನವನ್ನು ಇತರೆ ದೇಶಗಳು ಸಹ ಎದುರುನೋಡುತ್ತಿವೆ. ಭಾರತದಲ್ಲಿ ಉತ್ಪಾದಿ ಸುವ ಲಸಿಕೆಯನ್ನು ಮೊದಲ ಹಂತದಲ್ಲಿ ಭಾರತೀಯ ಸೇನೆ ಹಾಗೂ ಕರೋನಾ ವಾರಿಯರ್‌ಗಳಿಗೆ ನೀಡಲು ಚಿಂತನೆ ನಡೆಸ ಲಾಗಿದ್ದು, ಇದಕ್ಕಾಗಿ ೫೦ಲಕ್ಷ ಡೋಸ್ ಸಂಗ್ರಹಕ್ಕೆ ಪ್ರಯತ್ನಗಳು ಆರಂಭಗೊಂಡಿವೆ. ನಾನಾ ರಾಷ್ಟ್ರಗಳು ಸಹ ಭಾರತದ ಲಸಿಕೆ ಬಗ್ಗೆ ಅಪಾರ ನಿರೀಕ್ಷೆಗಳನ್ನು ಹೊಂದಿರುವುದರಿಂದ ಇದೀಗ ಲಸಿಕೆ ಸಂಶೋಧನೆ ಜತೆಗೆ ಸಂಗ್ರಹಣೆ ಸಾಮರ್ಥ್ಯ ಹೆಚ್ಚಿಸಬೇಕಿರುವ ಅಗತ್ಯತೆ ಕಂಡುಬರುತ್ತಿದೆ.

Leave a Reply

Your email address will not be published. Required fields are marked *