ಚೆನ್ನೈ: ಮಸ್ಕತ್‌ನಿಂದ 146 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಏರ್‌ಪೋರ್ಟ್‌ನಲ್ಲಿ ಲ್ಯಾಂಡಿಂಗ್ ವೇಳೆ ಟೈರ್ ಸ್ಫೋಟ(Aircraft Tyre Burst)ಗೊಂಡ ಭೀಕರ ಘಟನೆ ವರದಿಯಾಗಿದೆ. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅವಘಡವೊಂದು ತಪ್ಪಿದೆ. ಈ ಬಗ್ಗೆ ಏರ್‌ಪೋರ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದ ಹಿಂಬದಿ ಚಕ್ರ ಬ್ಲಾಸ್ಟ್ ಆಗಿದ್ದು, ಆ ವೇಳೆ ವಿಮಾನ ಲ್ಯಾಂಡ್ ಆಗಿತ್ತು. ತಕ್ಷಣ ವಿಮಾನ ಪ್ರಯಾಣವನ್ನು ರದ್ದುಗೊಳಿಸಲಾಗಿದ್ದು, ಎಲ್ಲಾ ಪ್ರಯಾಣಿಕರಿಗೆ ನಗರದ ವಿವಿಧ ಹೋಟೆಲ್‌ಗಳಲ್ಲಿ ವಸತಿ ಕಲ್ಪಿಸಲಾಗಿದೆ.
ಎರಡು ದಿನಗಳ ಹಿಂದೆಯಷ್ಟೇ ಕೇರಳದ ತಿರುವನಂತಪುರಂನಿಂದ ಒಮಾನ್ ನ ಮಸ್ಕತ್‌ಗೆ ಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ (Air India) ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಗಿತ್ತು. ಐಎಕ್ಸ್ 549 ವಿಮಾನವು ರನ್‌ವೇನಲ್ಲಿ ಚಲಿಸಲು ಪ್ರಾರಂಭಿಸಿದ ಕೂಡಲೇ ಹೊಗೆ ಕಾಣಿಸಿತು. ಕ್ಯಾಬಿನ್ ಸಿಬ್ಬಂದಿ ಹೊಗೆಯನ್ನು ನೋಡಿ ಅಸಾಮಾನ್ಯ ವಾಸನೆಯನ್ನು ಗಮನಿಸಿದರು. ಬೆಳಿಗ್ಗೆ 10.30ರ ಸುಮಾರಿಗೆ ಈ ಘಟನೆ ವರದಿಯಾಗಿದೆ. ವಿಮಾನದಲ್ಲಿ 142 ಪ್ರಯಾಣಿಕರಿದ್ದರು. ತಕ್ಷಣ ವಿಮಾನ ನಿಲ್ಲಿಸಿ ಪ್ರಯಾಣಿಕರನ್ನು ಕೆಳಕ್ಕೆ ಇಳಿಸಲಾಯಿತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈ ಘಟನೆಯನ್ನು ಒಪ್ಪಿಕೊಂಡಿದೆ. ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆ ಮಾಡಲಾಗಿದೆ. ತನಿಖೆಯನ್ನು ಕೈಗೊಳ್ಳಲಾಗುವುದು ಎಂದು ವಿಮಾನ ಯಾನ ಸಂಸ್ಥೆಯು ಹೇಳಿಕೊಂಡಿದೆ.
ಟೇಕ್ ಆಫ್ ಸಮಯದಲ್ಲಿ ಕಂಡುಬಂದ ಹೊಗೆಯಿಂದಾಗಿ, ನಮ್ಮ ವಿಮಾನವೊಂದು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಮತ್ತೆ ಬೇಗೆ ಮರಳಿತು.ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿಕೊಂಡಿದೆ.
ಸಮಸ್ಯೆಯ ನಿಖರ ಸ್ವರೂಪ ನಿರ್ಧರಿಸಲು ತನಿಖೆ ನಡೆಸಲಾಗುವುದು” ಎಂದು ಅದು ಹೇಳಿದೆ. “ನಮ್ಮ ಕಾರ್ಯಾಚರಣೆಯ ಪ್ರತಿಯೊಂದು ಅಂಶದಲ್ಲೂ ಸುರಕ್ಷತೆಗೆ ಆದ್ಯತೆ ನೀಡುತ್ತೇವೆ. ಆದಾಗ್ಯೂ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ” ಎಂದು ವಿಮಾನಯಾನ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: 1968 IAF plane crash: 1968ರಲ್ಲಿ ಸೇನಾ ವಿಮಾನ ಪತನ; 56 ವರ್ಷಗಳ ನಂತರ ಮೃತದೇಹ ಪತ್ತೆ