Monday, 25th November 2024

Physical Abuse: ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಿದ ವ್ಯಕ್ತಿಗೆ ಬಿತ್ತು ಗೂಸಾ; ವಿಡಿಯೊ ವೈರಲ್

Physical Abuse

ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿ ಹೆಚ್ಚಾಗಿಯೇ ಇರುತ್ತದೆ. ಇಂತಹ ಕಿಕ್ಕಿರಿದ ಜನಸಂದಣಿ ಇರುವಂತಹ ಸ್ಥಳಗಳಲ್ಲಿ ಕೆಲವು ಕೆಟ್ಟ ಮನಸ್ಥಿತಿಯ ವ್ಯಕ್ತಿಗಳು ಅನುಚಿತ ವರ್ತನೆಗಳನ್ನು ತೋರಿಸುತ್ತಾರೆ. ಎಲ್ಲಿ ಮಹಿಳೆಯರು ಹೆಚ್ಚಾಗಿ ಇರುತ್ತಾರೆ ಅಲ್ಲಿಗೆ ಬಂದು ಮಹಿಳೆಯರನ್ನು ಅನುಚಿತವಾಗಿ ಸ್ಪರ್ಶಿಸುವ ಮೂಲಕ ತಮ್ಮ ಚಟವನ್ನು ತೀರಿಸಿಕೊಳ್ಳುತ್ತಾರೆ. ಇದು ಹೆಚ್ಚಾಗಿ ಎಲ್ಲಾ ಕಡೆಗಳಲ್ಲಿ ನಡೆಯುತ್ತಿರುತ್ತದೆ. ಅಂತಹ ಒಂದು ಸ್ಥಳದಲ್ಲಿ ವ್ಯಕ್ತಿಯೊಬ್ಬ ಜನಸಮೂಹದೊಳಗೆ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಿ(Physical Abuse) ಅದಕ್ಕೆ ತಕ್ಕ ಶಿಕ್ಷೆಯನ್ನು ಪಡೆದುಕೊಂಡ ಘಟನೆ ವರದಿಯಾಗಿದೆ. ಆತನ ನೀಚ ಕೃತ್ಯಗಳನ್ನು ವಿಡಿಯೊ ಮಾಡಿದ ಕ್ಯಾಮೆರಾಮನ್ ತಕ್ಷಣ ಮಧ್ಯಪ್ರವೇಶಿಸಿ, ಆ ವ್ಯಕ್ತಿಗೆ ಎಲ್ಲರ ಮುಂದೆ ಕಪಾಳಮೋಕ್ಷ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಘಟನೆಯು  ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ಮತ್ತು ಅನುಚಿತ ನಡವಳಿಕೆಯ ಬಗ್ಗೆ ಹೆಚ್ಚುತ್ತಿರುವುದನ್ನು ಒತ್ತಿಹೇಳುತ್ತಿದೆ. ಆಗಾಗ್ಗೆ, ಜನದಟ್ಟಣೆಯ ಸ್ಥಳಗಳಲ್ಲಿ ನೀಚ  ವ್ಯಕ್ತಿಗಳು ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅಂತಹ ನಡವಳಿಕೆಯನ್ನು ತೋರಿಸುತ್ತಾರೆ. ಆದರೆ ಇದನ್ನು ನೋಡಿದವರು ಸುಮ್ಮನೆ ಇರುತ್ತಾರೆ. ಆದರೆ ಈ ಘಟನೆಯಲ್ಲಿ  ಕ್ಯಾಮೆರಾಮೆನ್‌ ಪ್ರತಿಕ್ರಿಯೆ ಮೆಚ್ಚುವಂತದ್ದು. ಇಂತಹ ಘಟನೆಗಳು ನಡೆದಾಗ ಅದನ್ನು ನೋಡಿ ಸುಮ್ಮನೆ ಇರುವವರಿಗೆ ಈ ಘಟನೆ ತಕ್ಷಣ ಪ್ರತಿಕ್ರಿಯೆ ನೀಡಲು ಪ್ರೋತ್ಸಾಹಿಸುತ್ತದೆ.

ಇದನ್ನೂ ಓದಿ: ಇವು ಭಾರತದ ಅತ್ಯಂತ ಜನದಟ್ಟಣೆಯ ನಗರಗಳಂತೆ!

ಅನುಚಿತವಾಗಿ ಸ್ಪರ್ಶಿಸಿದಾಗ ಮಹಿಳೆ ವಸ್ತುಗಳನ್ನು ಖರೀದಿಸುವಲ್ಲಿ ತಲ್ಲೀನಳಾಗಿದ್ದಳು. ಹಾಗಾಗಿ ಅವಳಿಗೆ ಈ ಬಗ್ಗೆ ತಿಳಿಯಲಿಲ್ಲ. ಇಲ್ಲವಾದರೆ ಈ ಘಟನೆ ಮತ್ತಷ್ಟು ಉಲ್ಬಣಗೊಳ್ಳುತ್ತಿತ್ತು. ಆದರೆ ಅಲ್ಲಿದ್ದ ಜನರು ಏನಾಗಿದೆ ಎಂಬುದೇ ಅರ್ಥವಾಗದೆ ದಿಗ್ಭ್ರಮೆಗೊಂಡಿದ್ದರು. ಈ ಘಟನೆಯು ಸಮಾಜದಲ್ಲಿ ಗೌರವಯುತ ನಡವಳಿಕೆಯನ್ನು ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂಬ ಪ್ರಜ್ಞೆಯನ್ನು ಮೂಡಿಸುತ್ತದೆ.