Monday, 28th October 2024

Pejawar Swamiji: ಎಲ್ಲ ದೇವಾಲಯಗಳಿಗೂ ಅಯೋಧ್ಯೆ ಮಾದರಿ ಆಡಳಿತ: ಪೇಜಾವರ ಶ್ರೀ ಆಗ್ರಹ

pejawar swamiji

ಮಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರದ (Ayodhya Sri Ram Mandir) ಮಾದರಿಯಲ್ಲಿ ಎಲ್ಲ ದೇವಾಲಯಗಳಿಗೂ ಪ್ರತ್ಯೇಕ ವಿಶ್ವಸ್ಥ ಮಂಡಳಿ ರೂಪಿಸಿ ಆಡಳಿತ ನಡೆಸಬೇಕು ಎಂದು ಪೇಜಾವರ ಮಠದ (Pejawar Math) ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Pejawar Swamiji Viswa Prasanna Theertha) ಆಗ್ರಹಿಸಿದ್ದಾರೆ.

ಅವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಚಾರ ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಪ್ರಾಚೀನ ದೇವಾಲಯಗಳು ಸೇರಿದಂತೆ ಹಲವು ದೇವಾಲಯಗಳು ಇನ್ನೂ ಸರಕಾರದ ವಶದಲ್ಲಿ ಇರಿಸಿಕೊಳ್ಳಲಾಗಿದೆ. ಇದರಿಂದ ಹಿಂದೂಗಳ ನಂಬಿಕೆಗೆ ಧಕ್ಕೆ ಉಂಟು ಮಾಡುವ ಕೆಲಸಗಳಾಗುತ್ತಿವೆ. ಸರಕಾರದ ವಶದಲ್ಲಿರುವ ದೇವಾಲಯಗಳನ್ನು ಹಿಂದೂಗಳ ವಶಕ್ಕೆ ನೀಡುವಂತೆ ಸುಪ್ರೀಂ ಕೋರ್ಟ್ ಈಗಾಗಲೇ ಸೂಚನೆ ನೀಡಿದ್ದರೂ ದೇವಸ್ಥಾನಗಳು ಸರಕಾರ ವಶದಲ್ಲಿರುವುದರಿಂದಲೇ ನಮ್ಮ ಶ್ರದ್ಧಾ ಕೇಂದ್ರಗಳಿಗೆ ಅಪಚಾರಗಳು ಉಂಟಾಗುತ್ತಿವೆ. ನ್ಯಾಯಾಲಯದ ತೀರ್ಪಿನಂತೆ ಹಿಂದೂ ದೇವಾಲಯಗಳನ್ನು ಸರಕಾರವು ಸಮಾಜದ ವಶಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ತಿರುಪತಿ-ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿಯ ಲಡ್ಡು ಪ್ರಸಾದ ಅಪವಿತ್ರದಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕಾದ್ದು ಸರ್ಕಾರಗಳ ಕರ್ತವ್ಯ. ಸಂಬಂಧಪಟ್ಟ ವಿಭಾಗಗಳು ಈ ಬಗ್ಗೆ ನಿಗಾ ವಹಿಸಬೇಕಿತ್ತು. ಇಂತಹ ಘಟನೆ ಮರುಕಳಿಸದೇ ಇರಬೇಕಾದರೆ, ದೇವಾಲಯಗಳು ಸ್ವಂತ ಗೋಶಾಲೆ ಹೊಂದುವಂತಾಗಬೇಕು. ಜಾಗೃತ ಕೇಂದ್ರಗಳಾದಾಗ ಮಾತ್ರ ಹಿಂದೂಗಳ ನಂಬಿಕೆ, ನಡವಳಿಕೆಯ ಗೌರವಿಸಲು ಸಾಧ್ಯವಾಗುತ್ತದೆ. ಇಂತಹ ಉಪಕ್ರಮಕ್ಕೆ ಸರ್ಕಾರಗಳು ಮುಂದಾಗಬೇಕು ಎಂದರು.

ಇದನ್ನೂ ಓದಿ: Nitin Gadkari: ಸ್ವಪಕ್ಷ ನಾಯಕರ ವಿರುದ್ಧ ಗಡ್ಕರಿ ಮತ್ತೆ ಅಸಮಾಧಾನ; ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಗೈರು