Monday, 7th October 2024

Amit Shah: 10 ತಿಂಗಳು..194 ನಕ್ಸಲರ ಎನ್‌ಕೌಂಟರ್‌..801 ಮಂದಿ ಅರೆಸ್ಟ್‌; ಅಮಿತ್‌ ಶಾ ಮಾಹಿತಿ

amit shah

ನವದೆಹಲಿ: ಜನವರಿಯಿಂದ ಛತ್ತೀಸ್‌ಗಢದಲ್ಲಿ 194 ಮಾವೋವಾದಿಗಳನ್ನು ಎನ್‌ಕೌಂಟರ್‌(Encounter) ಮಾಡಲಾಗಿದ್ದು, 801 ಮಂದಿ ಅರೆಸ್ಟ್‌ ಮಾಡಲಾಗಿದೆ. ಇನ್ನು 742 ಮಂದಿ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಸೋಮವಾರ ಹೇಳಿದ್ದಾರೆ.

ನಕ್ಸಲ್‌ (LWE) ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರುವಂತೆ ಮನವಿ ಮಾಡಿದರು. ಈಶಾನ್ಯ ರಾಜ್ಯ ಮತ್ತು ಜಮ್ಮು ಕಾಶ್ಮೀರದಲ್ಲಿ ಸುಮಾರು 13,000 ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿದ್ದಾರೆ ಎಂದು ಶಾ ತಿಳಿಸಿದರು.

“ನಾನು ಛತ್ತೀಸ್‌ಗಢದ ಮುಖ್ಯಮಂತ್ರಿ, ಗೃಹ ಸಚಿವರು, ಡಿಜಿಪಿ ಮತ್ತು ಇಡೀ ತಂಡವನ್ನು ಅಭಿನಂದಿಸುತ್ತೇನೆ. ಜನವರಿಯಿಂದ ಇಲ್ಲಿಯವರೆಗೆ 194 ನಕ್ಸಲರನ್ನು ಎನ್‌ಕೌಂಟರ್‌ ಮಾಡಲಾಗಿದೆ. 801 ನಕ್ಸಲೀಯರನ್ನು ಬಂಧಿಸಲಾಗಿದೆ ಮತ್ತು 742 ನಕ್ಸಲೀಯರು ಶರಣಾಗಿದ್ದಾರೆ ಎಂದು ಶಾ ತಿಳಿಸಿದ್ದಾರೆ.

ನಕ್ಸಲಿಸಂನೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಯುವಕರು ಶಸ್ತ್ರಾಸ್ತ್ರಗಳನ್ನು ತೊರೆದು ಮುಖ್ಯವಾಹಿನಿಗೆ ಬರುವಂತೆ ನಾನು ಮನವಿ ಮಾಡುತ್ತೇನೆ. ಅದು ಈಶಾನ್ಯ ರಾಜ್ಯಗಳಾಗಲೀ ಅಥವಾ ಜಮ್ಮು-ಕಾಶ್ಮೀರವಾಗಲೀ ಸುಮಾರು 13000 ಜನರು ಆಯುಧವನ್ನು ತೊರೆದು ಮುಖ್ಯವಾಹಿನಿಗೆ ಸೇರಿದ್ದಾರೆ. ಭದ್ರತಾ ಸಂಬಂಧಿತ ವೆಚ್ಚ (SRE) ಯೋಜನೆಯಡಿ, 2004-2014 ರಿಂದ ₹1180 ಕೋಟಿ ಈ ಯೋಜನೆಗೆ ಖರ್ಚು ಮಾಡಲಾಗಿದೆ, ಆದರೆ 2014-2024 ರಿಂದ ನಾವು ₹ 3,006 ಕೋಟಿ ಖರ್ಚು ಮಾಡಿದ್ದೇವೆ, ಇದು ಸುಮಾರು ಮೂರು ಪಟ್ಟು ಹೆಚ್ಚಾಗಿದೆ. SRE ಪ್ರಮುಖ ಯೋಜನೆಯಾಗಿದೆ. ವಿಶೇಷ ಕೇಂದ್ರ ನೆರವು ಯೋಜನೆಯಡಿ ಕಳೆದ ಹತ್ತು ವರ್ಷಗಳಲ್ಲಿ ₹ 3590 ಕೋಟಿ ವೆಚ್ಚ ಮಾಡಿದ್ದೇವೆ. ಆ ಮೂಲಕ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು.

2019 ರ ಮೊದಲು, ಸೈನಿಕರಿಗೆ ಎರಡು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿತ್ತು, ಆದರೆ ಇಂದು ಸೈನಿಕರಿಗೆ ಸಹಾಯ ಮಾಡಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಆರು ವಾಯುಪಡೆ ಸೇರಿದಂತೆ ಅವುಗಳ ಸಂಖ್ಯೆ 12ಕ್ಕೆ ಏರಿದೆ. ಕಳೆದ 10 ವರ್ಷಗಳಲ್ಲಿ 544 ಸುರಕ್ಷಿತ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿದೆ. ಈ ಹಿಂದೆ ರಸ್ತೆ ಸಂಪರ್ಕ 2900 ಕಿ.ಮೀ. ಇತ್ತು, ಕಳೆದ 10 ವರ್ಷಗಳಲ್ಲಿ ರಸ್ತೆ ಸಂಪರ್ಕ ವ್ಯಾಪ್ತಿಯನ್ನು 11,500 ಕಿ.ಮೀ.ಗೆ ಹೆಚ್ಚಿಸಲಾಗಿದೆ. ಕಳೆದ 10 ವರ್ಷಗಳಲ್ಲಿ 15,300 ಮೊಬೈಲ್ ಟವರ್‌ಗಳನ್ನು ನಿರ್ಮಿಸಲಾಗಿದೆ. ಸ್ಥಾಪಿಸಲಾಗಿದೆ ಮತ್ತು ಅವುಗಳಲ್ಲಿ 5139 ಟವರ್‌ಗಳಿಗೆ 4G ಸಂಪರ್ಕಗಳನ್ನು ನೀಡಲಾಗಿದೆ. 2014ರ ಮೊದಲು 38 ಏಕಲವ್ಯ ಮಾದರಿ ಶಾಲೆಗಳಿಗೆ ಮಂಜೂರಾತಿ ದೊರೆತಿದ್ದರೂ ಒಂದೂ ನಿರ್ಮಾಣವಾಗಿಲ್ಲ, ಈಗ 216 ಶಾಲೆಗಳಿಗೆ ಅನುಮೋದನೆ ದೊರೆತಿದ್ದು, 165 ನಿರ್ಮಿಸಲಾಗಿದೆ ಎಂದರು.

ಈ ಸುದ್ದಿಯನ್ನೂ ಓದಿ: Amit Shah: ಮೋದಿ ವಿರುದ್ಧ ಖರ್ಗೆ ಹೇಳಿಕೆ ಅಸಹ್ಯಕರ; ಅಮಿತ್‌ ಶಾ ತಿರುಗೇಟು