Saturday, 23rd November 2024

Rajinikanth: ‘ಲಿಂಗ’ ಚಿತ್ರದ ಸೋಲಿಗೆ ರಜನಿಕಾಂತ್ ಕಾರಣ ಎಂದ ನಿರ್ದೇಶಕ!

Lingaa Film

2014ರಲ್ಲಿ ತೆರೆಕಂಡಿದ್ದ ʼಲಿಂಗʼ ಚಿತ್ರದ (Lingaa Film) ಸೋಲಿಗೆ ನಟ ರಜನಿಕಾಂತ್ (superstar Rajinikanth) ಅವರೇ ಕಾರಣ ಎಂದು ಚಿತ್ರ ನಿರ್ದೇಶಕ ಕೆ.ಎಸ್. ರವಿಕುಮಾರ್ (K.S. Ravikumar ) ಆರೋಪಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಈ ಚಿತ್ರವನ್ನು 100 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಆದರೆ ಇದು ಅಭಿಮಾನಿಗಳು ಮತ್ತು ವಿಮರ್ಶಕರಿಂದ ನೀರಸ ವಿಮರ್ಶೆಗಳನ್ನು ಪಡೆಯಿತು ಎಂದು ಹೇಳಿದ್ದಾರೆ.

ಚಾಟ್ ವಿದ್ ಚಿತ್ರಾದಲ್ಲಿ (Chat with Chitra) ಮಾತನಾಡಿರುವ ಅವರು, ಚಿತ್ರದ ಮೇಕಿಂಗ್ ಮತ್ತು ಎಡಿಟಿಂಗ್‌ನಲ್ಲಿ ರಜನಿಕಾಂತ್ ಕೂಡ ತೊಡಗಿಸಿಕೊಂಡಿದ್ದರು ಎಂದು ಆರೋಪಿಸಿದರು. ರಜನಿಕಾಂತ್ ಅವರು ಚಿತ್ರೀಕರಣ ಪ್ರಕ್ರಿಯೆ ಮತ್ತು ಪೋಸ್ಟ್ ಪ್ರೊಡಕ್ಷನ್‌ಗೆ ಅಡ್ಡಿಪಡಿಸಿದರು. ಅವರ ಇಚ್ಛೆಯಂತೆ ಕೆಲವು ದೃಶ್ಯಗಳನ್ನು ತೆಗೆದುಹಾಕಿದ್ದಾರೆ ಮತ್ತು ಸೇರಿಸಿದ್ದಾರೆ ಎಂದು ರವಿಕುಮಾರ್ ಹೇಳಿದರು.

ರಜನಿಕಾಂತ್ ಅವರು ಕಥೆಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಸೂಪರ್‌ಸ್ಟಾರ್ ನಟಿ ಅನುಷ್ಕಾ ಶೆಟ್ಟಿಅವರನ್ನು ಒಳಗೊಂಡಿದ್ದ ಹಾಡನ್ನು ಕತ್ತರಿಸಿದ್ದಾರೆ. ನಕಲಿ ಹಾಟ್ ಏರ್ ಬಲೂನ್ ದೃಶ್ಯವನ್ನು ಕೂಡ ಸೇರಿಸಿದ್ದಾರೆ ಎಂದು ದೂರಿದರು.

ಚಿತ್ರಕಥೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಮತ್ತು ನನಗೆ ಇದನ್ನು ಪರಿಶೀಲಿಸಲು ಸಮಯವನ್ನೂ ನೀಡಲಿಲ್ಲ ಎಂದು ದೂರಿದ ರವಿಕುಮಾರ್, ಸಿನಿಮಾದ ದ್ವಿತಿಯಾರ್ಧವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿತ್ತು. ಕ್ಲೈಮ್ಯಾಕ್ಸ್‌ನಲ್ಲಿನ ಅಚ್ಚರಿಯ ಟ್ವಿಸ್ಟ್ ಅನ್ನು ಅವರು ತೆಗೆದುಹಾಕಿದರು. ಇದು ಚಿತ್ರವನ್ನು ಸಂಪೂರ್ಣವಾಗಿ ಬದಲಿಸಿತ್ತು ಎಂದರು.

Lingaa Film

ʼಲಿಂಗʼ ಚಿತ್ರದಲ್ಲಿ ರಜನಿಕಾಂತ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಲಿಂಗ ಮತ್ತು ಅವರ ಮೊಮ್ಮಗ ರಾಜಾ ಲಿಂಗೇಶ್ವರನ್ ಪಾತ್ರದಲ್ಲಿ. ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ, ಅನುಷ್ಕಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. 100 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸಲಾಗಿತ್ತು. ಆದರೆ ಚಿತ್ರವು ನೀರಸ ಪ್ರತಿಕ್ರಿಯೆ ಪಡೆದಾಗ ಬಿಸಿ ಗಾಳಿಯ ಬಲೂನ್‌ನಂತಹ ಕೆಲವು ದೃಶ್ಯಗಳು ಪ್ರೇಕ್ಷಕರಿಂದ ಭಾರೀ ಟೀಕೆಗೆ ಗುರಿಯಾಗಿತ್ತು.

ತಮಿಳು ಚಿತ್ರರಂಗದ ಹಿರಿಯ ನಟ ರಜನಿಕಾಂತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಟಿ.ಜಿ. ಜ್ಞಾನವೇಲ್ ಬರೆದು ನಿರ್ದೇಶಿಸಿದ ವೆಟ್ಟೈಯಾನ್ ಬಿಡುಗಡೆಯನ್ನು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಚಿತ್ರವು ಅಕ್ಟೋಬರ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕಾಗಿ ರಜನಿಕಾಂತ್ ಅವರು ಸುಮಾರು 100- 125 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಇದು ರಜನಿಕಾಂತ್ ಅವರ 170 ನೇ ಚಿತ್ರವಾಗಿದ್ದು, 160 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದೆ. ಚಿತ್ರವು ಚೆನ್ನೈ, ಮುಂಬೈ, ತಿರುವನಂತಪುರಂ ಮತ್ತು ಹೈದರಾಬಾದ್‌ನಲ್ಲಿ ಚಿತ್ರೀಕರಿಸಲ್ಪಟ್ಟಿದೆ.

ಬಿಡುಗಡೆಗೂ ಮುನ್ನವೇ ವೆಟ್ಟೈಯಾನ್ ಚಿತ್ರದ ಸುಮಾರು 4,000 ಮುಂಗಡ ಟಿಕೆಟ್ ಮಾರಾಟವಾಗಿದ್ದು, ಸುಮಾರು 80 ಲಕ್ಷ ರೂ. ಗಳಿಸಿದೆ. ಅನಿರುದ್ಧ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಎಸ್. ಆರ್. ಕಥಿರ್ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫಿಲೋಮಿನ್ ರಾಜ್ ಸಂಕಲನ ಕಾರ್ಯವನ್ನು ನಡೆಸಿದ್ದಾರೆ.

Huli Karthik: ‘ಗಿಚ್ಚಿ ಗಿಲಿಗಿಲಿ’ ವಿನ್ನರ್‌ ಹುಲಿ ಕಾರ್ತಿಕ್‌ ವಿರುದ್ಧ ಜಾತಿ ನಿಂದನೆ ಕೇಸ್‌; ಏನಿದು ವಿವಾದ?

ರಜನಿಕಾಂತ್ ಅವರು ಸಾಂಪ್ರದಾಯಿಕ ಪಾತ್ರಗಳನ್ನು ಹೆಚ್ಚಾಗಿ ನಿರ್ವಹಿಸಿದ್ದು, ತಮ್ಮದೇ ಆದ ವರ್ಚಸ್ವಿನಿಂದ ಗಮನ ಸೆಳೆದಿದ್ದಾರೆ. “ತಲೈವರ್” ಎಂದು ಪ್ರೀತಿಯಿಂದ ಕರೆಯಲ್ಪಡುವ ಅವರು ಬಾಷಾ, ಶಿವಾಜಿ, ಜೈಲರ್ ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳಿಂದ ವೀಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ.