ಮುಂಬಯಿ: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಗೆದ್ದು ವಿಶ್ರಾಂತಿಯಲ್ಲಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ(Rohit Sharma) ತವರಾದ ಮುಂಬೈಯಲ್ಲಿ ಜಾಲಿ ಮೂಡ್‌ನಲ್ಲಿದ್ದಾರೆ. ಮುಂಬೈಯ ಸ್ಟ್ರೀಟ್ ಒಂದರಲ್ಲಿ ರೋಹಿತ್ ತಮ್ಮ ನೀಲಿ ಬಣ್ಣದ ಲ್ಯಾಂಬೋರ್ಗಿನಿ(Lamborghini) ಕಾರಿನಲ್ಲಿ ರೈಡ್ ಮಾಡುತ್ತಿದ್ದ ವೇಳೆ ಮಹಿಳಾ ಅಭಿಮಾನಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ(Rohit wished her happy birthday). ಈ ವಿಡಿಯೊ ವೈರಲ್(viral video) ಆಗಿದೆ.
ಮುಂಬೈನ ಸಿಗ್ನಲ್ ಒಂದರಲ್ಲಿ ಕಾರಿನಲ್ಲಿದ್ದ ರೋಹಿತ್ ಅವರನ್ನು ಕಂಡು ಈ ಮಹಿಳಾ ಅಭಿಮಾನಿ ರೋಹಿತ್ ಜತೆ ಫೋಟೊ ಒಂದನ್ನು ತೆಗೆದುಕೊಂಡಿದ್ದಾಳೆ. ಇದೇ ವೇಳೆ ಈಕೆಯ ಸ್ನೇಹಿತರು ಇಂದು ಅವಳ ಹುಟ್ಟು ಹಬ್ಬ ಎಂದು ರೋಹಿತ್ ಬಳಿ ಹೇಳಿದ್ದಾರೆ. ಇದನ್ನು ಕೇಳಿಸಿಕೊಂಡ ರೋಹಿತ್ ಶೇಕ್ ಹ್ಯಾಂಡ್ ಮಾಡಿ ಹ್ಯಾಪಿ ಬರ್ತ್‌ಡೇ ಎಂದಿದ್ದಾರೆ. ಈ ವೇಳೆ ಅಭಿಮಾನಿಯ ಸಂತಸಕ್ಕೆ ಪಾರವೇ ಇರಲಿಲ್ಲ. ಈಕೆ ಖುಷಿಯಿಂದ ಕುಣಿಯುತ್ತಾ ಧನ್ಯವಾದ ಎಂದು ಹೇಳಿದ್ದಾಳೆ. ಈ ಎಲ್ಲ ಕ್ಷಣ ವಿಡಿಯೊದಲ್ಲಿ ಸೆರೆಯಾಗಿದೆ.
ರೋಹಿತ್ ಏಕದಿನದಲ್ಲಿ ಶ್ರೀಲಂಕಾ ವಿರುದ್ಧ 264 ರನ್ ಬಾರಿಸಿದ್ದರು. ಇದೇ ಸಂಖ್ಯೆಯನ್ನು ತಮ್ಮ ಕಾರ್ ನಂಬರ್ ಆಗಿ ಬಳಸಿಕೊಂಡಿದ್ದಾರೆ. ಅತಿ ವೇಗದ ಕಾರು ಚಾಲನೆ ಮಾಡಿದ್ದ ರೋಹಿತ್ಗೆ ಈ ಹಿಂದೆ 3 ಬಾರಿ ಪೊಲೀಸರು ದಂಡ ವಿಧಿಸಿದ್ದರು. ಲಂಬೋರ್ಗಿನಿ ಕಾರಿನಲ್ಲಿ ಅವರು ಗಂಟೆಗೆ 200 ಕಿ.ಮೀ ಕಾರು ಚಲಾಯಿಸಿದ್ದರು. ಇದೇ ಕಾರಣಕ್ಕೆ ಅತಿ ವೇಗದ ಚಾಲನೆಯ ಟ್ರಾಫಿಕ್ ನಿಯಮದ ಅಡಿಯಲ್ಲಿ ಅವರಿಗೆ ಮೂರು ಟ್ರಾಫಿಕ್ ದಂಡದ ಚಲನ್‌ಗಳನ್ನು ನೀಡಲಾಗಿತ್ತು.
ಇದನ್ನೂ ಓದಿ Rohit Sharma: ಮುಂಬೈ ತೊರೆದು ಲಕ್ನೋ ತಂಡ ಸೇರಲಿದ್ದಾರೆ ರೋಹಿತ್?
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಎರಡೂ ಪಂದ್ಯಗಳಲ್ಲಿಯೂ ರೋಹಿತ್ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಬ್ಯಾಟಿಂಗ್ ಶ್ರೇಯಾಂಕದಲ್ಲಿಯೂ ಭಾರೀ ಕುಸಿತ ಕಂಡಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ರೋಹಿತ್ ಬ್ಯಾಟಿಂಗ್ ಲಯಕ್ಕೆ ಮರಳುವ ಅನಿವಾರ್ಯತೆ ಇದೆ. ಈಗಾಗಲೇ ರೋಹಿತ್ ಪುಣೆಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಮೂರನೇ ಋತುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ)ನಲ್ಲಿ ಭಾರತ ತಂಡ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ರೋಹಿತ್ ಬ್ಯಾಟಿಂಗ್ ಫಾರ್ಮ್ ದೊಡ್ಡ ಪಾತ್ರವನ್ನು ವಹಿಸಲಿದೆ.
ಭಾರತ ವಿರುದ್ಧದ ಟೆಸ್ಟ್ ಸರಣಿಗೆ ನ್ಯೂಜಿಲ್ಯಾಂಡ್ ಬುಧವಾರ ತಂಡವನ್ನು ಪ್ರಕಟಿಸಿದೆ. ಇದೇ ವಾರಾಂತ್ಯದಲ್ಲಿ ಭಾರತ ತಂಡ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಇತ್ತಂಡಗಳ ನಡುವಣ ಮೊದಲ ಪಂದ್ಯ ಅಕ್ಟೋಬರ್ 19ರಿಂದ ಆರಂಭಗೊಳ್ಳಲಿದೆ.