Monday, 25th November 2024

Joe Root: ಶತಕ ಬಾರಿಸಿ ಹಲವು ದಾಖಲೆ ಬರೆದ ಜೋ ರೂಟ್‌

ಮುಲ್ತಾನ್‌: ಇಂಗ್ಲೆಂಡ್‌ ತಂಡದ ಅನುಭವಿ ಆಟಗಾರ ಜೋ ರೂಟ್‌(Joe Root) ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ವಿಶ್ವದ 5ನೇ ಹಾಗೂ ಇಂಗ್ಲೆಂಡ್‌ನ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ರೂಟ್‌ ಈ ಮೈಲುಗಲ್ಲು ನೆಟ್ಟರು.

ಮುಲ್ತಾನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೂರನೇ ದಿನದಾಟದಲ್ಲಿ ರೂಟ್‌ 71 ರನ್ ಬಾರಿಸುತ್ತಿದ್ದಂತೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 12,473 ರನ್‌ ಗಡಿ ದಾಟುವ ಮೂಲಕ ಇಂಗ್ಲೆಂಡ್‌ ಪರ ಅತ್ಯಧಿಕ ಟೆಸ್ಟ್‌ ರನ್‌ ಗಳಿಸಿದ ಆಟಗಾರ ಎನಿಸಿಕೊಂಡರು. ಇದುವರೆಗೂ ಈ ದಾಖಲೆ ಮಾಜಿ ಆಟಗಾರ ಅಲೆಸ್ಟೇರ್‌ ಕುಕ್‌(12,472) ಹೆಸರಿನಲ್ಲಿತ್ತು. ಈಗ ಈ ದಾಖಲೆ ರೂಟ್‌ ಪಾಲಾಗಿದೆ.‌ ವಿಶ್ವ ದಾಖಲೆ ಭಾರತ ತಂಡದ ಮಾಜಿ ಆಟಗಾರ ಸಚಿನ್‌ ತೆಂಡೂಲ್ಕರ್‌(Sachin Tendulkar) ಹೆಸರಿನಲ್ಲಿದೆ. ಸಚಿನ್‌ 15,921 ರನ್‌ ಬಾರಿಸಿದ್ದಾರೆ.

ಅತಿ ಹೆಚ್ಚು ಟೆಸ್ಟ್‌ ರನ್‌

ಆಟಗಾರಪಂದ್ಯರನ್‌
ಸಚಿನ್‌ ತೆಂಡೂಲ್ಕರ್20015,921
ರಿಕಿ ಪಾಂಟಿಂಗ್‌16813,378
ಜಾಕ್‌ ಕ್ಯಾಲಿಸ್‌16613,289
ರಾಹುಲ್‌ ದ್ರಾವಿಡ್‌16413,288
ಜೋ ರೂಟ್‌147*12,473*
ಅಲೆಸ್ಟೇರ್‌ ಕುಕ್‌16112,472

ಗವಾಸ್ಕರ್‌ ದಾಖಲೆ ಪತನ

ಶತಕ ಬಾರಿಸುವ ಮೂಲಕವೂ ರೂಟ್‌ ದಾಖಲೆಯೊಂದನ್ನು ಬರೆದಿದ್ದಾರೆ. ಅತ್ಯಧಿಕ ಶತಕ ಬಾರಿಸಿದ ವಿಶ್ವದ 6ನೇ ಬ್ಯಾಟರ್‌ ಎನಿಸಿಕೊಂಡರು. ಈ ವೇಳೆ ಅವರು ಮಾಜಿ ಆಟಗಾರರಾದ ಸುನೀಲ್‌ ಗವಾಸ್ಕರ್‌, ಬ್ರಿಯಾನ್‌ ಲಾರ, ಮಹೇಲಾ ಜಯವರ್ಧನೆ ಮತ್ತು ಯೂನಿಸ್‌ ಖಾನ್‌(ತಲಾ 34 ಶತಕ) ದಾಖಲೆ ಮುರಿದರು. ಇದು ರೂಟ್‌ ಅವರ 35 ಟೆಸ್ಟ್‌ ಶತಕ. ಪ್ರಸಕ್ತ ಕ್ರಿಕೆಟ್‌ ಆಡುತ್ತಿರುವ ಆಟಗಾರರ ಪೈಕಿ ರೂಟ್‌ಗೆ ಅಗ್ರಸ್ಥಾನ.

ಇದನ್ನೂ ಓದಿ IND vs NZ: ಭಾರತ ವಿರುದ್ಧದ ಟೆಸ್ಟ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ನ್ಯೂಜಿಲ್ಯಾಂಡ್‌

ಅತಿ ಹೆಚ್ಚು ಟೆಸ್ಟ್‌ ಶತಕ

ಆಟಗಾರಶತಕ
ಸಚಿನ್‌ ತೆಂಡೂಲ್ಕರ್51
ಜಾಕ್‌ ಕ್ಯಾಲಿಸ್‌45
ರಿಕಿ ಪಾಂಟಿಂಗ್‌41
ಕುಮಾರ ಸಂಗಕ್ಕರ38
ರಾಹುಲ್‌ ದ್ರಾವಿಡ್‌36
ಜೋ ರೂಟ್‌34*

ಡಬ್ಲ್ಯುಟಿಸಿಯಲ್ಲಿ(WTC history) 5 ಸಾವಿರ್‌ ರನ್‌ ಪೂರ್ತಿಗೊಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎನ್ನುವ ಹಿರಿಮೆಗೆ ರೂಟ್‌ ಪಾತ್ರರಾಗಿದ್ದಾರೆ. ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ರೂಟ್‌ನ ನಂತರ ಎರಡನೇ ಅತಿ ಹೆಚ್ಚು ಸ್ಕೋರರ್ ಆಗಿರುವ ಆಸ್ಟ್ರೇಲಿಯಾದ ಮಾರ್ನಸ್ ಲ್ಯಾಬುಶೇನ್‌ 3904 ರನ್ ಗಳಿಸಿದ್ದಾರೆ. ಭಾರತದ ಯಾವೊಬ್ಬ ಬ್ಯಾಟರ್‌ ಕೂಟ ಅಗ್ರ 5ರೊಳಗೆ ಕಾಣಿಸಿಕೊಂಡಿಲ್ಲ.

ವಿಶ್ವ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳು

ಜೋ ರೂಟ್‌-5000* ರನ್‌

ಮಾರ್ನಸ್‌ ಲಬುಶೇನ್‌-3904 ರನ್‌

ಸ್ಟೀವನ್‌ ಸ್ಮಿತ್‌-3486 ರನ್‌

ಬೆನ್‌ ಸ್ಟೋಕ್ಸ್‌-3101 ರನ್‌

ಬಾಬರ್‌ ಅಜಂ-2755 ರನ್‌