Saturday, 23rd November 2024

MP Dr K Sudhakar: ಕೆಟ್ಟ ಮನಸ್ಥಿತಿ ಇರುವ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಎಂದೂ ವೇದಿಕೆ ಹಂಚಿ ಕೊಳ್ಳಲಾರೆ : ಸಂಸದ ಸುಧಾಕರ್ ಘೋಷಣೆ

ಚಿಕ್ಕಬಳ್ಳಾಪುರ: ಜನಪರ ಕೆಲಸ ಮಾಡಲು ವೇದಿಕೆ ಹಂಚಿಕೊ0ಡರೆ ಸಾಲದು; ನನಗೆ ಆಶೀರ್ವಾದ ಮಾಡಿದ ೮ ವರೆ ಲಕ್ಷ ಜನಬೆಂಬಲ ನನಗಿದೆ. ಮತದಾರರ ಪ್ರೀತಿ ವಿಶ್ವಾಸಕ್ಕೆ ತಕ್ಕಂತೆ ಕೆಸ ಮಾಡಿದರೆ ಸಾಕು. ಹೀಗಾಗಿ ಕೆಟ್ಟ ಮನಸ್ಥಿತಿ ಇರುವ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಎಂದೂ ಕೂಡ ವೇದಿಕೆ ಹಂಚಿಕೊಳ್ಳದಿರಲು ನಿರ್ಧರಿಸಿದ್ದೇನೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದಲ್ಲಿ ನಡೆದ ಸಮಾಜ ಸೇವಕ ಕೆ.ವಿ.ನವೀನ್‌ ಕಿರಣ್ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಆರೋಗ್ಯ ಸಚಿವರ ಜತೆ, ಜಿಲ್ಲಾ ಉಸ್ತುವಾರಿ ಸಚಿವರ ಜತೆ ವೇದಿಕೆ ಹಂಚಿಕೊ0ಡ ತಕ್ಷಣ ಅಭಿವೃದ್ದಿ ಆದಂತೆ ಅಲ್ಲ. ಶಂಕುಸ್ಥಾಪನೆ ಮಾಡಿದ ಕಾಮಗಾರಿ ಪೂರ್ಣಗೊಂಡು ಜನಸೇವೆಗೆ ಮುಕ್ತವಾದಾದರೆ ಸಾಕು. ಇದರಿಂದ ಜಿಲ್ಲೆಯ ಜನರಿಗೆ ಒಳ್ಳ್ಲೆಯದಾದರೆ ಸಾಕು. ಅವರಿಗೆ ಒಳ್ಳೆಯ ಆರೋಗ್ಯ ವ್ಯವಸ್ಥೆ ಸಿಕ್ಕಬೇಕು. ನನ್ನ ಹೆಸರು ಹಾಕಲಿ ಹಾಕದೇ ಇರಲಿ,ಆಮಂತ್ರಣ ಮಾಡಲಿ ಮಾಡದೇ ಇರಲಿ, ೮.೫ ಲಕ್ಷ ಮತದಾರರು ನನ್ನ ಬೆಂಬಲಿಸಿದ್ದಾರೆ. ಜನಪರ ವಾಗಿ ನನ್ನ ಕೆಲಸ ಮುಂದುವರೆಸುತ್ತೇನೆ ಎಂದರು.

ಇವರ ಜತೆ ಹೋದರೆ ಮಾತ್ರ ಆಸ್ಪತ್ರೆ ಉದ್ಘಾಟನೆ ಆಗಲ್ಲ.ಆಸ್ಪತ್ರೆ ಯಾವಾಗ ಉದ್ಘಾಟನೆ ಆಗುತ್ತದೆ ಎಂದರೆ ಇದಕ್ಕೆ ಬೇಕಾದ ಎಲ್ಲಾ ಸಾಧನ ಸಲಕರಣೆಗಳನ್ನು ತರಿಸಿ, ಜನರ ಸೇವೆಗೆ ಮುಕ್ತ ಮಾಡಿದಾಗ ಮಾತ್ರ ನಿಜವಾದ ಉದ್ಘಾಟನೆ ಆಗುತ್ತದೆ. ನಾನು ಮಂತ್ರಿ ಆಗಿದ್ದಾಗಲೇ ಚಿಂತಾಮಣಿಯ ಮುರುಗಮಲ್ಲದಲ್ಲಿ ರಾಜ್ಯದಲ್ಲಿಯೇ ಮೊದಲ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ಪಾಪ ಅದನ್ನು ಕೂಡ ಹೋಗಿ ಉದ್ಘಾಟನೆ ಮಾಡಿದ್ದಾರೆ ಸಂತೋಷ ಎಂದು ವ್ಯಂಗ್ಯವಾಡಿದರು.

ಇವರು ಎಲ್ಲೆಲ್ಲಿ ಹೋಗಿ ಉದ್ಘಾಟನೆ ಮಾಡಿದ್ದಾರೋ ಅಲ್ಲಿಗೆ ನಾನು ಹೋಗುತ್ತೇನೆ, ನಮ್ಮೆಲ್ಲ ಮುಖಂಡರಿದ್ದಾರೆ. ಸ್ಥಳೀಯ ನಾಯಕರಿದ್ದಾರೆ,ಅಲ್ಲಿನ ಜನಸಾಮಾನ್ಯರಿದ್ದಾರೆ. ಸ್ಥಳೀಯ ಅಧಿಕಾರಿಗಳ ಜತೆ ನನೊಮ್ಮೆ ಹೋಗಿ, ಹೇಗೆ ಬಂದಿದೆ,ಯಾವ ರೀತಿ ಕಾಮಗಾರಿ ಪೂರ್ಣ ಆಗಿದೆ, ಗುಣಮಟ್ಟ ಹೇಗಿದೆ ಎಂಬುದನ್ನು ನೋಡಿಕೊಂಡು ಬರುತ್ತೇವೆ. ಹೀಗಾಗಿ ನಾನೊಂದು ತೀರ್ಮಾನ ಮಾಡುತ್ತಿದ್ದೇನೆ. ಇಂತಹ ಕೆಟ್ಟ ಮನಸ್ಥಿತಿ ಇರತಕ್ಕಂತಹ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಯಾವಾಗಲೂ ಕೂಡ ಅಧಿಕೃತವಾಗಿ ವೇದಿಕೆ ಹಂಚಿಕೊಳ್ಳಬಾರದು ಎಂದು ತೀರ್ಮಾನಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಚೀಪ್ ಪಾಲಿಟಿಕ್ಸ್ ಮಾಡುವುದಿಲ್ಲ
ಪಾಪ ಸಂದೀಪ್‌ರೆಡ್ಡಿಗೆ ಮಾಧ್ಯಮದವರು ನೀವು ಮಾರ್ಗದರ್ಶನ ಮಾಡಿ. ಇದು ಯಾರ ಅಧೀನದಲ್ಲಿ ಬರುತ್ತದೆ, ಯಾರಿಗೆ ಯಾವ ಪ್ರಶ್ನೆ ಕೇಳಬೇಕು ಎಂಬುದನ್ನು ತಿಳಿದುಕೊಂಡು ನೀವು ಪ್ರಶ್ನೆ ಕೇಳಬೇಕು. ನಾನು ಯಾರಿಗೆ ಊಟ ನಿಲ್ಲಿಸಲು ಹೇಳಿದ್ದೇನೆ? ಅಂತಹ ಚೀಪ್ ಪಾಲಿಟಿಕ್ಸ್ ಮಾಡುವುದಿಲ್ಲ. ನಾನು ಮಂತ್ರಿ ಆಗಿದ್ದಾಗಲೇ ಕ್ಲಾಸ್ ರೂಮ್ ಮಾಡ್ತೀನಿ ಅಣ್ಣ ಎಂದು ಕೇಳಿದ್ದರು. ಆಗ ನೋಡಪ್ಪ ವಾಪಸಂದ್ರ ಪ್ರೌಢಶಾಲೆಗೆ ಕೊಠಡಿ ಕಟ್ಟಿಸಿಕೊಡಲು ಒಂದು ಕಂಪನಿಗೆ ವಹಿಸಿದ್ದೀನಿ? ಅವರು ಮಾಡಿಸಿಕೊಡ್ತಾರೆ. ಬೇರೆ ಯಾವುದಾರರೂ ಹಳ್ಳಿಯನ್ನು ತೆಗೆದುಕೊಂಡು ಮಾಡು ನಾನು ನಿನ್ನ ತೀರ್ಮಾನವನ್ನು ಸ್ವಾಗತಿಸುತ್ತೇನೆ. ಡಿಡಿಪಿಐಗೆ ಹೇಳುತ್ತೇನೆ. ಯಾವ ಊರು ಬೇಕೋ ಹೇಳು ಪೂರ್ಣ ವಾಗಿ ನೀನೇಕಟ್ಟು ಎಂದು ಹೇಳಿದ್ದೆ. ಮೇಲಾಗಿ ನಾನು ಎಲ್ಲರ ಹತ್ತಿರವೂ ಬೇಡಿಕೆ ಇಡುತ್ತಿದ್ದೇನೆ. ನೀವು ಬಂದು ಕ್ಲಾಸ್‌ರೂಮ್ಸ್ ಕಟ್ಟಿಸಿ ಎಂದು. ಊಟ ಕೊಡೋದಕ್ಕೆ ಬೇಡ ಅಂತೀವಾ? ಎಂದು ಮಾಧ್ಯಮದವರಿಗೆ ಹೇಳುವ ಮೂಲಕ ಸನ್ನದ ವಿಚಾರಕ್ಕೆ ತೆರೆ ಎಳೆದರು.