ಬೆಂಗಳೂರು: 2024ನೇ ಸಾಲಿನ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಗೆ (Nobel Prize 2024) ವಿಜ್ಞಾನಿಗಳಾದ ಡೇವಿಡ್ ಬೇಕರ್, ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಜಂಪರ್ ಭಾಜನರಾಗಿದ್ದಾರೆ. ವೈಜ್ಞಾನಿಕ ಜಗತ್ತಿನಲ್ಲಿ ಅತ್ಯಂತ ಪ್ರತಿಷ್ಠಿತ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ಈ ಪ್ರಶಸ್ತಿಯನ್ನು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ನೀಡುತ್ತದೆ. ಇದರ ಮೌಲ್ಯ 11 ಮಿಲಿಯನ್ ಸ್ವೀಡಿಷ್ ಕ್ರೌನ್ (9,23,65,625 ರೂಪಾಯಿ) ಬಹುಮಾನ ಹೊಂದಿದೆ.
ಈ ವರ್ಷ ಪರಿಗಣಿಸಿರುವ ಸಂಶೋಧನೆಗಳಲ್ಲಿ ಅದ್ಭುತ ಪ್ರೋಟೀನ್‌ಗಳ ರಚನೆಗೆ ಸಂಬಂಧಿಸಿದೆ. ಇನ್ನೊಂದು 50 ವರ್ಷಗಳ ಕನಸನ್ನು ಈಡೇರಿಸುವ ಬಗ್ಗೆ.: ಅವುಗಳ ಅಮೈನೋ ಆಮ್ಲದ ಅನುಕ್ರಮಗಳಿಂದ ಪ್ರೋಟೀನ್ ರಚನೆಗಳನ್ನು ಊಹಿಸಿರುವುದು ಎಂದು ಅಕಾಡೆಮಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅರ್ಧದಷ್ಟು ಬಹುಮಾನವನ್ನು ಬೇಕರ್‌ಗೆ “ಕಂಪ್ಯೂಟೇಶನಲ್ ಪ್ರೋಟೀನ್ ರಚನೆಗೆ ” ನೀಡಲಾಗಿದೆ. ಉಳಿದ ಅರ್ಧ ಹಸ್ಸಾಬಿಸ್ ಮತ್ತು ಜಂಪರ್ “ಪ್ರೋಟೀನ್ ರಚನೆಯ ಮುನ್ಸೂಚನೆಗಾಗಿ” ಹಂಚಿಕೊಂಡಿದ್ದಾರೆ ಎಂದು ಅಕಾಡೆಮಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿ ವರ್ಷ ಮೂರನೇ ಹಂತದಲ್ಲಿ ರಸಾಯನ ಶಾಸ್ತ್ರಕ್ಕೆ ನೀಡಲಾಗುತ್ತದೆ. ಈ ವಾರದ ಆರಂಭದಲ್ಲಿ ವೈದ್ಯಕೀಯ ಮತ್ತು ಭೌತಶಾಸ್ತ್ರದ ಸಾಧಕರಿಗೆ ಪ್ರಶಸ್ತಿ ನೀಡಲಾಗಿತ್ತು.
ನೊಬೆಲ್ ಪ್ರಶಸ್ತಿಗಳನ್ನು ಡೈನಮೈಟ್ ಸಂಶೋಧಕ ಮತ್ತು ಶ್ರೀಮಂತ ಉದ್ಯಮಿ ಆಲ್ಫ್ರೆಡ್ ನೊಬೆಲ್ ಅವರ ಇಚ್ಛೆಯ ಮೇರೆಗೆ ಸ್ಥಾಪಿಸಲಾಗಿದೆ. ” ಆಯಾ ವರ್ಷದಲ್ಲಿ ಮನುಕುಲಕ್ಕೆ ಹೆಚ್ಚಿನ ಪ್ರಯೋಜನ ನೀಡುವ ಸಂಶೋಧನೆ ನಡೆಸಿದವರಿಗೆ” ನೀಡಲಾಗುತ್ತದೆ.
ನೊಬೆಲ್ ಅವರ ಮರಣದ 15 ವರ್ಷಗಳ ನಂತರ, 1901ರಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿ ನೀಡಲಾಗಿದೆ. ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ ಮತ್ತು ಶಾಂತಿಯ ಸ್ಥಾಪನೆಯ ಸಾಧನೆಗಳಿಗಾಗಿ ಇದನ್ನು ನೀಡಲಾಗುತ್ತದೆ. ಪ್ರತಿ ವಿಭಾಗದ ವಿಜೇತರು ವರ್ಷಗಳಿಂದ ಸರಿಹೊಂದಿಸಲಾದ ಬಹುಮಾನದ ಮೊತ್ತ ಹಂಚಿಕೊಳ್ಳುತ್ತಾರೆ. ಅರ್ಥಶಾಸ್ತ್ರ ಪ್ರಶಸ್ತಿಯು ಸ್ವೀಡಿಷ್ ಕೇಂದ್ರ ಬ್ಯಾಂಕ್ ನಿಂದ ಪ್ರಾಯೋಜಕತ್ವ ಪಡೆದ ನಂತರ ಸೇರ್ಪಡೆಗೊಂಡಿದೆ.
ಇದನ್ನೂ ಓದಿ : Nobel Prize 2024: ವಿಜ್ಞಾನಿಗಳಾದ ಅಂಬ್ರೋಸ್, ಗ್ಯಾರಿ ರುವ್ಕುನ್‌ಗೆ ನೊಬೆಲ್ ಪ್ರಶಸ್ತಿ
ಆಲ್ಫ್ರೆಡ್ ನೊಬೆಲ್ ಅವರ ಹೃದಯಕ್ಕೆ ಹತ್ತಿರವಾದ ರಸಾಯನಶಾಸ್ತ್ರ ಮತ್ತು ಸಂಶೋಧಕರಾಗಿ ಅವರ ಸ್ವಂತ ಕೆಲಸಕ್ಕೆ ಹೆಚ್ಚು ಅನ್ವಯವಾಗುವ ವಿಭಾಗವು ಯಾವಾಗಲೂ ಬಹುಮಾನಗಳಲ್ಲಿ ಹೆಚ್ಚು ಗಮನಾರ್ಹ. ವಿಕಿರಣಶೀಲತೆಯ ಪ್ರವರ್ತಕರಾದ ಅರ್ನೆಸ್ಟ್ ರುದರ್ಫೋರ್ಡ್ ಮತ್ತು ಮೇರಿ ಕ್ಯೂರಿ ಅವರಂತಹ ವೈಜ್ಞಾನಿಕ ಶ್ರೇಷ್ಠರು ಈ ಪ್ರಶಸ್ತಿ ಪಡೆದಿದ್ದಾರೆ.
ಕಳೆದ ವರ್ಷದ ರಸಾಯನಶಾಸ್ತ್ರ ಪ್ರಶಸ್ತಿಯನ್ನು ಮೌಂಗಿ ಬಾವೆಂಡಿ, ಲೂಯಿಸ್ ಬ್ರೂಸ್ ಮತ್ತು ಅಲೆಕ್ಸೆ ಎಕಿಮೊವ್ ಅವರು ಕ್ವಾಂಟಮ್ ಡಾಟ್ಸ್ ಎಂದು ಕರೆಯಲ್ಪಡುವ ಪರಮಾಣುಗಳ ಸಣ್ಣ ಗುಚ್ಛಗಳನ್ನು ಕಂಡುಹಿಡಿದಿದ್ದಕ್ಕಾಗಿ ಪಡೆದಿದ್ದರು.
ನಗದು ಬಹುಮಾನದ ಜೊತೆಗೆ, ವಿಜೇತರಿಗೆ ಡಿಸೆಂಬರ್ 10ರಂದು ನಡೆಯುವ ಕಾರ್ಯಕ್ರಮದಲ್ಲಿ ಸ್ವೀಡಿಷ್ ದೊರೆ ಪದಕ ಪ್ರದಾನ ಮಾಡಲಿದ್ದಾರೆ. ನಂತರ ಸ್ಟಾಕ್‌ಹೋಮ್ ಸಿಟಿ ಹಾಲ್‌ನಲ್ಲಿ ಅದ್ಧೂರಿ ಔತಣಕೂಟ ನಡೆಯಲಿದೆ.