Wednesday, 23rd October 2024

Bomb Threat : ಲಂಡನ್- ದೆಹಲಿ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ; ಟಿಶ್ಯೂ ಪೇಪರ್‌ನಲ್ಲಿತ್ತು ಸಂದೇಶ

Vistara

ಬೆಂಗಳೂರು: ಲಂಡನ್‌ನಿಂದ ದೆಹಲಿಗೆ ತೆರಳುತ್ತಿದ್ದ ವಿಸ್ತಾರಾ ವಿಮಾನಕ್ಕೆ ಬುಧವಾರ ಬಾಂಬ್ ಬೆದರಿಕೆ (Bomb Threat) ಬಂದಿದೆ. ಸುಮಾರು 290 ಪ್ರಯಾಣಿಕರನ್ನು ಹೊತ್ತ ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Indira Gandhi International Airport) ಸುರಕ್ಷಿತವಾಗಿ ಇಳಿಯಿತು. ವರದಿಗಳ ಪ್ರಕಾರ, ವಿಮಾನದಲ್ಲಿ ಬಾಂಬ್ ಇದೆ ಎಂಬ ಸಂದೇಶವನ್ನು ಪ್ರಯಾಣಿಕರೊಬ್ಬರು ಶೌಚಾಲಯವೊಂದರಲ್ಲಿ ಟಿಶ್ಯೂ ಪೇಪರ್ ಬರೆದಿರುವುದನ್ನು ನೋಡಿದ್ದರು. ನಂತರ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ಅವರ ಮಾಹಿತಿ ನೀಡಿದ್ದರು.

ಬೆಳಿಗ್ಗೆ 8: 45 ಕ್ಕೆ, ಲಂಡನ್‌ನಿಂದ ದೆಹಲಿಗೆ ತೆರಳುತ್ತಿದ್ದ ವಿಸ್ತಾರಾ ಏರ್‌ಲೈನ್‌ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿರುವುದು ವರದಿಯಾಗಿದೆ. ವಿಮಾನದ ಶೌಚಾಲಯದಲ್ಲಿ ಬಾಂಬ್ ದಿಸ್ ಫ್ಲಿಗ್ ಎಂಬ ಸಂದೇಶ ಪತ್ತೆಯಾಗಿತ್ತು. ಆದಾಗ್ಯೂ ವಿಮಾನ ಬೆಳಿಗ್ಗೆ 11:45 ಕ್ಕೆ ವಿಮಾನವು ಸುರಕ್ಷಿತವಾಗಿ ಇಳಿಯಿತು. ಎಲ್ಲಾ ಪ್ರಯಾಣಿಕರು ಸುರಕ್ಷತೆಯಿಂದ ಇಳಿದಿದ್ದಾರೆ. ಭದ್ರತಾ ಪ್ರೋಟೋಕಾಲ್‌ಗಳ ಪ್ರಕಾರ ಸಮಗ್ರ ತಪಾಸಣೆ ನಡೆಸಲಾಗಿದೆ. ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲಎಂದು ಮೂಲಗಳು ತಿಳಿಸಿವೆ.

ಲಂಡನ್‌ನಿಂದ ರಾಷ್ಟ್ರ ರಾಜಧಾನಿಗೆ ಬರುತ್ತಿದ್ದ ಯುಕೆ 018 ವಿಮಾನವನ್ನು ನಿರ್ವಹಿಸುವ ಸಿಬ್ಬಂದಿ ಸುರಕ್ಷತಾ ಕಾಳಜಿಯನ್ನು ಪೂರೈಸಿದ್ದಾರೆ ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದ ನಂತರ ವಿಮಾನವನ್ನು ಕಡ್ಡಾಯ ತಪಾಸಣೆಗಾಗಿ ಕೊಂಡೊಯ್ಯಲಾಗಿದೆ.

ಇದನ್ನೂ ಓದಿ: Delhi assembly election : ಹರಿಯಾಣದ ಕೋಪ ; ಡೆಲ್ಲಿಯಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡದಿರಲು ಆಪ್‌ ನಿರ್ಧಾರ

ಅಕ್ಟೋಬರ್ 9, 2024 ರಂದು ಲಂಡನ್‌ನಿಂದ ದೆಹಲಿಗೆ ತೆರಳುತ್ತಿದ್ದ ವಿಸ್ತಾರಾ ಫ್ಲೈಟ್ ಯುಕೆ 018 ಅನ್ನು ನಿರ್ವಹಿಸುತ್ತಿರುವ ನಮ್ಮ ಸಿಬ್ಬಂದಿ ಭದ್ರತಾ ಆತಂಕವನ್ನು ಗಮನಿಸಿದ್ದಾರೆ. ಪ್ರೋಟೋಕಾಲ್‌ಗೆ ಅನುಗುಣವಾಗಿ, ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಲಾಯಿತು. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದ ನಂತರ ವಿಮಾನವನ್ನು ತಪಾಸಣೆಗಾಗಿ ಪ್ರತ್ಯೇಕ ಪಥಕ್ಕೆ ಕೊಂಡೊಯ್ಯಲಾಯಿತು. ಅಗತ್ಯ ಭದ್ರತಾ ತಪಾಸಣೆ ಪೂರ್ಣಗೊಳಿಸುವಲ್ಲಿ ನಾವು ಸಂಬಂಧಿತ ಅಧಿಕಾರಿಗಳೊಂದಿಗೆ ಸಹಕರಿಸಿದ್ದೇವೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.