ಸಂಗತ
ಡಾ.ವಿಜಯ್ ದರಡಾ
ಐವತ್ತಾರು ವರ್ಷಗಳ ಹಿಂದೆ ಕಾಣೆಯಾಗಿದ್ದ ವೀರಯೋಧರನ್ನು ಹುಡುಕುವ ಕಾರ್ಯಾಚರಣೆ ಈವರೆಗೂ ನಡೆಯುತ್ತಿತ್ತು. ಯೋಧರೇ ಇಂಥದ್ದೊಂದು ಆಂದೋಲನವನ್ನು ಜೀವಂತವಾಗಿಟ್ಟಿದ್ದರು. ನಿಜಕ್ಕೂ ಇದು ಅವರ ಶೌರ್ಯ ಹಾಗೂ ಬದ್ಧತೆಗೆ ಸಾಕ್ಷಿ. ನಮ್ಮ ಸೇನಾಪಡೆ ಮಾತ್ರ ಇಂಥ ಸಾಹಸ ಪ್ರವೃತ್ತಿ, ದೇಶಭಕ್ತಿ ಯನ್ನು ಪ್ರದರ್ಶಿಸಲು ಸಾಧ್ಯ. ಸೇನೆಯಿಂದ ನಾವು ಕಲಿಯಬೇಕಾಗಿರುವುದು ಬಹಳಷ್ಟಿದೆ.
ಇತ್ತೀಚೆಗೆ ನಿವೃತ್ತಿಯಾದ ಭಾರತೀಯ ಸೇನಾಪಡೆಯ ಮುಖ್ಯಸ್ಥರನ್ನು ಭೇಟಿಯಾಗಿದ್ದೆ. ಅವರು ನಾಗ್ಪುರದ ಜನರಲ್ ಮನೋಜ್ ಪಾಂಡೆಯವರ ಮಗ. ನನ್ನ ಜತೆ ಉಭಯ ಕುಶಲೋಪರಿಯ ಬಳಿಕ “ಇವರು ಲೋಕಮತ್ನ ವಿಜಯ್ ದರಡಾ” ಎಂದು ತಮ್ಮ ಪತ್ನಿಗೆ ಪರಿಚಯಿಸಿದರು. “ಕಾರ್ಗಿಲ್ ಯುದ್ಧದ ಸಮಯದಲ್ಲಿ ಸೈನಿಕರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ, ಸೈನಿಕರಿಗಾಗಿ ಬೆಚ್ಚನೆಯ ಮನೆಗಳನ್ನೂ ನಿರ್ಮಿಸಿ ಕೊಟ್ಟಿದ್ದಾರೆ” ಎಂದೂ ಪತ್ನಿಗೆ ಹೇಳಿದರು.
ನಾನು ವಿನೀತ ಭಾವದಿಂದ ಕೈಕಟ್ಟಿಕೊಂಡು ಕುಳಿತಿದ್ದೆ. ನನ್ನ ಪ್ರಕಾರ ನಮ್ಮ ದೇಶದಲ್ಲಿ ಇದೊಂದು ಸ್ಥಳದಲ್ಲಿ
ಮಾತ್ರ ಎಲ್ಲರೂ ಶಿರಬಾಗಿ ನಿಲ್ಲುತ್ತಾರೆ. ಅವರು ಯಾರಾದರೂ ಆಗಿರಲಿ, ಯಾವ ರಾಜಕೀಯ ಪಕ್ಷಕ್ಕಾದರೂ ಸೇರಿರಲಿ, ಯಾವ ಧರ್ಮ, ಯಾವ ನಂಬಿಕೆ, ಯಾವ ಜಾತಿಯಿಂದಾದರೂ ಬಂದಿರಲಿ, ಇದೊಂದು ಸ್ಥಳದಲ್ಲಿ
ಮಾತ್ರ ಅವರೆಲ್ಲರೂ ಭಕ್ತಿಭಾವದಿಂದ ನಿಲ್ಲುತ್ತಾರೆ. ಆ ಸ್ಥಳವೆಂದರೆ ನಮ್ಮ ಸಶಸ್ತ್ರ ಪಡೆಗಳು! ಸಶಸ್ತ್ರ ಪಡೆಗಳು ಅಂದರೆ ಅದರಲ್ಲಿ ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆ ಮೂರೂ ಸೇರುತ್ತವೆ.
ನಾನು ಈ ಬಾರಿ ಭಾರತೀಯ ಸೇನಾಪಡೆಯ ವಿಷಯವನ್ನೇ ಅಂಕಣದ ವಸ್ತುವನ್ನಾಗಿ ಆಯ್ದುಕೊಂಡಿದ್ದೇನೆ.
ಬಹಳ ರೋಚಕವಾದ ಸಶಸ ಪಡೆಗಳ ಕತೆಯಿದು. 1968ರ ಫೆಬ್ರವರಿ 7ರಂದು ಭಾರತೀಯ ವಾಯುಪಡೆಯ ಕಾರ್ಗೋ ವಿಮಾನವೊಂದು ಅರುಣಾಚಲ ಪ್ರದೇಶದ ರೋಹ್ತಂಗ್ ಪಾಸ್ ಬಳಿ ಪತನಗೊಂಡಿತ್ತು. ಆ ಸರಕು ವಿಮಾನವು ಚಂಡೀಗಢದಿಂದ ಲೇಹ್ಗೆ ಸೇನಾಪಡೆಯ ಸರಕು ಹಾಗೂ ಯೋಧರನ್ನು ಸಾಗಿಸುತ್ತಿತ್ತು. ವಿಮಾನದಲ್ಲಿ 102 ಸೈನಿಕರಿದ್ದರು. ಹವಾಮಾನ ತೀರಾ ಪ್ರತಿಕೂಲವಾಗಿತ್ತು. ಬಹುಶಃ ಆ ಕಾರಣದಿಂದಲೋ ಅಥವಾ ತಾಂತ್ರಿಕ
ದೋಷದಿಂದಲೋ ದುರದೃಷ್ಟವಶಾತ್ ವಿಮಾನ ಪತನಗೊಂಡಿತು. ಹಿಮಾಚ್ಛಾದಿತ ಪರ್ವತದಲ್ಲಿ ಪತನಗೊಂಡಿದ್ದ ರಿಂದ ಎಷ್ಟು ಹುಡುಕಿದರೂ ವಿಮಾನದ ಅವಶೇಷಗಳಾಗಲೀ, ಸೈನಿಕರ ದೇಹಗಳಾಗಲೀ ತಕ್ಷಣಕ್ಕೆ ಸಿಗಲಿಲ್ಲ. ಆದರೆ ಭಾರತೀಯ ಸೇನಾಪಡೆ ಕೈಚೆಲ್ಲಲಿಲ್ಲ.
ವಿಮಾನದ ಪತನದ ಸ್ಥಳದಲ್ಲಿ ಶೋಧಕಾರ್ಯ ನಡೆಸಲು ಆಗಾಗ ಸೇನಾಪಡೆಯ ತುಕಡಿಗಳನ್ನು ಕಳುಹಿಸುತ್ತಲೇ ಇತ್ತು. ಅದರ ಫಲವಾಗಿ 2003 ಮತ್ತು 2019ರ ನಡುವೆ ಕೆಲ ಸೈನಿಕರ ಮೃತದೇಹದ ಅವಶೇಷಗಳು ಹಾಗೂ ವಿಮಾನದ ಅವಶೇಷಗಳು ದೊರೆತವು. ಆದರೆ ವಿಮಾನದಲ್ಲಿದ್ದ ಎಲ್ಲಾ ಯೋಧರ ಮೃತದೇಹ ಲಭಿಸಿರಲಿಲ್ಲ. ಹೀಗಾಗಿ ಹುಡುಕಾಟ ಮುಂದುವರಿದಿತ್ತು. ಪರಿಣಾಮ, ಸೆಪ್ಟೆಂಬರ್ನ ಕೊನೆಯ ವಾರದಲ್ಲಿ ಇನ್ನೂ ನಾಲ್ವರು ಮೃತಯೋಧರ ದೇಹದ ಅವಶೇಷಗಳು ಲಭಿಸಿದವು. ೧೬,೦೦೦ ಅಡಿ ಎತ್ತರದಲ್ಲಿರುವ ಢಾಕಾ ನೀರ್ಗಲ್ಲು ಪ್ರದೇಶ ದಲ್ಲಿ ಹಿಮದ ಕೆಳಗೆ ಹುದುಗಿದ್ದ ಅವಶೇಷಗಳು ಅವಾಗಿದ್ದವು.
ಥಾಮಸ್ ಚೆರಿಯನ್, ಮಲ್ಖಾನ್ ಸಿಂಗ್, ನಾರಾಯಣ ಸಿಂಗ್ ಮತ್ತು ಮುನ್ಷಿರಾಮ್ ಅವರು ತಮ್ಮ ಎಳೆಯ ವಯಸ್ಸಿನ ದೇಶಸೇವೆಗಾಗಿ ಪ್ರಾಣ ತೆತ್ತು, 56 ವರ್ಷಗಳ ಕಾಲ ಹಿಮದ ಕೆಳಗೆ ಶವವಾಗಿ ಮಲಗಿ, ಕೊನೆಗೆ ಅವಶೇಷ ಗಳ ರೂಪದಲ್ಲಿ ಪತ್ತೆಯಾಗಿದ್ದರು! ಅವರ ದೇಹದ ಅಳಿದುಳಿದ ಭಾಗಗಳನ್ನು ಊರಿಗೆ ಕೊಂಡೊಯ್ದು ಅಂತ್ಯ ಸಂಸ್ಕಾರ ನಡೆಸಲಾಯಿತು.
ಗಮನಿಸಬೇಕಾದ ಸಂಗತಿಯೆಂದರೆ, ಅಪಘಾತದ ಬಳಿಕ ಈ ಯೋಧರು ಮೃತಪಟ್ಟಿದ್ದಾರೆಂದೇ ಸೇನಾಪಡೆ
ನಿರ್ಧರಿಸಿತ್ತು. ಅದನ್ನೇ ಅವರ ಕುಟುಂಬಗಳಿಗೆ ತಿಳಿಸಿತ್ತು. ಆದರೆ, ಕಾಲಕಾಲಕ್ಕೆ ನಡೆಯುತ್ತಿದ್ದ ಮೃತದೇಹದ
ಹುಡುಕಾಟದ ಬಗ್ಗೆಯೂ ಅವರ ಕುಟುಂಬಗಳಿಗೆ ಮಾಹಿತಿ ನೀಡುತ್ತಿತ್ತು. ವಾಸ್ತವವಾಗಿ ಭಾರತೀಯ ಸೇನಾಪಡೆಯ
ಮೂಲಭೂತ ಧ್ಯೇಯಗಳಲ್ಲಿ ಇದೂ ಒಂದು. “ಯಾವತ್ತೂ ನಿಮ್ಮ ಸೋದರನನ್ನು ಹಿಂದೆ ಬಿಡಬೇಡಿ. ಅವರು
ಗಾಯಗೊಂಡಿರಲಿ ಅಥವಾ ಹುತಾತ್ಮರೇ ಆಗಿರಲಿ, ಅವರನ್ನು ಬಿಟ್ಟು ಮುಂದೆ ಹೋಗಬಾರದು” ಎಂದೇ ನಮ್ಮ ಯೋಧರಿಗೆ ತರಬೇತಿಯ ಸಮಯದಲ್ಲಿ ಕಲಿಸಿರುತ್ತಾರೆ. ಇದಕ್ಕೆ ಸಂಬಂಧಿಸಿದ ಅನೇಕ ಕತೆಗಳನ್ನು ನಾವು ಕೇಳಿದ್ದೇವೆ.
ದುರ್ಗಮ ಪ್ರದೇಶಗಳಲ್ಲಿ ಪಹರೆ ಕಾಯುವಾಗ ಅಥವಾ ಯುದ್ಧ ಮಾಡುವಾಗ ಯಾರಿಗಾದರೂ ಗಾಯವಾದರೆ,
ಗುಂಡೇಟು ಬಿದ್ದರೆ ಅಥವಾ ಜೀವವೇ ಹೋದರೆ, ಅವರನ್ನು ಹೊತ್ತೊಯ್ಯುವುದಕ್ಕೆಂದು ನಮ್ಮ ಯೋಧರು ತಮ್ಮ
ಮೈಮೇಲಿರುವ ಭಾರ ಕಡಿಮೆ ಮಾಡಿಕೊಳ್ಳಲು ಬ್ಯಾಗ್ ನಲ್ಲಿರುವ ಆಹಾರ ಪದಾರ್ಥಗಳನ್ನೇ ತೆಗೆದು ಎಸೆದಿರುತ್ತಾರೆ.
ಶತ್ರುವಿನ ಗಡಿಯೊಳಗೆ ಸಹವರ್ತಿ ಯೋಧರು ಬಿದ್ದಿದ್ದರಂತೂ, ಬೇರೆಲ್ಲವನ್ನೂ ಕಡೆಗಣಿಸಿ, ಮೊದಲು ಅವರನ್ನು ನಮ್ಮ ದೇಶದ ಗಡಿಯೊಳಗೆ ಎಳೆದುಕೊಂಡು ಬರುತ್ತಾರೆ. ಬೇರಾವುದೇ ದೇಶದ ಸೇನಾಪಡೆಯಲ್ಲಿ ಇಂಥ ಕೆಚ್ಚೆದೆಯ ಸಾಹಸ ಅಥವಾ ಸಹವರ್ತಿ ಯೋಧರ ಮೇಲಿನ ಪ್ರೀತಿ ನಮಗೆ ಕಾಣಿಸುವುದಿಲ್ಲ.
ಪಾಕಿಸ್ತಾನಿ ಸೇನೆಯ ಕತೆ ನಿಮಗೆ ನೆನಪಿರಬಹುದು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತದ ಗಡಿಯೊಳಗೆ ಮೃತಪಟ್ಟ ಪಾಕಿಸ್ತಾನದ ಯೋಧರ ಶವಗಳನ್ನು ಸ್ವೀಕರಿಸಲು ಪಾಕಿಸ್ತಾನಿ ಸೇನೆಯೇ ನಿರಾಕರಿಸಿತ್ತು. ಶವ ಪಡೆದು ಕೊಂಡರೆ ಮೃತಪಟ್ಟವರು ನಮ್ಮ ಯೋಧರು ಎಂದು ಒಪ್ಪಿಕೊಂಡಂತೆ ಆಗುತ್ತದೆ ಎಂಬ ಕಾರಣಕ್ಕೆ ಪಾಕಿಸ್ತಾನ ಹಾಗೆ ಮಾಡಿತ್ತು. ಆದರೆ ನಮ್ಮ ದೇಶದ ಸೇನಾಪಡೆಯ ದೊಡ್ಡ ಮನಸ್ಸು ನೋಡಿ, ಪಾಕ್ ಯೋಧರ ಅಂತ್ಯ ಸಂಸ್ಕಾರವನ್ನೂ ನಮ್ಮ ಯೋಧರು ಆ ದೇಶದ ಧರ್ಮಕ್ಕೆ ಅನುಗುಣವಾಗಿ ವಿಧ್ಯುಕ್ತವಾಗಿ ಮಾಡಿದರು. ಚೀನಾದ ಕತೆಯೂ ಇದೇ ಆಗಿದೆ. ಲಡಾಖ್ನಲ್ಲಿ ನಮ್ಮ ಯೋಧರು ಚೀನಾದ ಸೈನಿಕರನ್ನು ಹತ್ಯೆಗೈದಿದ್ದರು.
ಅವರ ಶವ ಪಡೆದುಕೊಳ್ಳುವುದು ಹಾಗಿರಲಿ, ಚೀನಾದ ಸೇನೆಯು “ನಮ್ಮ ಯೋಧರು ಲಡಾಖ್ನಲ್ಲಿ ಮೃತಪಟ್ಟೇ
ಇಲ್ಲ” ಎಂದು ರಾಜಾರೋಷವಾಗಿ ನಿರಾಕರಿಸುತ್ತಾ ಬಂದಿತು. ಪಾಕಿಸ್ತಾನ ಮತ್ತು ಚೀನಾ ಮಾತ್ರವಲ್ಲ, ಜಗತ್ತಿನ ಅನೇಕ ಸೇನಾಪಡೆಗಳು ಬೇರೆ ದೇಶಗಳ ಜತೆಗಿನ ಸಂಘರ್ಷದಲ್ಲಿ ಮೃತಪಟ್ಟ ತಮ್ಮ ಯೋಧರನ್ನು ಅ ಬಿಟ್ಟು ಮುಂದೆ ಹೋಗಿಬಿಡುತ್ತವೆ. ಆದರೆ ಭಾರತೀಯ ಸೇನಾಪಡೆ ಯಾವತ್ತೂ ಹಾಗೆ ಮಾಡುವುದಿಲ್ಲ. ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮರಿಗೆ ನೀಡಬೇಕಾದ ಎಲ್ಲಾ ಗೌರವವನ್ನೂ ನಮ್ಮ ದೇಶ ನೀಡುತ್ತದೆ.
ಭಾರತೀಯ ಸೇನೆಗೆ ಇನ್ನೊಂದು ವಿಶೇಷತೆಯಿದೆ. ಯುದ್ಧ ಹಾಗೂ ಸಂಘರ್ಷದ ಸಮಯದಲ್ಲಿ ಇಲ್ಲಿನ ಯುವ ಮಿಲಿಟರಿ ಅಧಿಕಾರಿಗಳು ಎಲ್ಲಾ ಯೋಧರಿಗಿಂತ ಮುಂದೆ ನಿಂತು ತಮ್ಮ ತುಕಡಿಗಳನ್ನು ಮುನ್ನಡೆಸುತ್ತಾರೆ. 1971ರ ಯುದ್ಧದಲ್ಲಿ 97000 ಪಾಕಿಸ್ತಾನಿ ಸೈನಿಕರು ಭಾರತಕ್ಕೆ ಸೋತು ಶರಣಾಗಿದ್ದರು. ಆಗ ಭಾರತೀಯ ಸೇನಾಪಡೆಯ ಮುಖ್ಯಸ್ಥ ಸ್ಯಾಮ್ ಮಾಣೆಕ್ ಶಾ ಅವರು ಖುದ್ದಾಗಿ ಪಾಕ್ ಯೋಧರ ಸುರಕ್ಷತೆಯ ಮೇಲ್ವಿಚಾರಣೆ ನೋಡಿಕೊಂಡಿ ದ್ದರು.
ಅದನ್ನು ನೋಡಿ ಸ್ವತಃ ಪಾಕಿಸ್ತಾನಿ ಯೋಧರೇ “ಭಾರತದ ಸೇನಾಪಡೆಯ ಈ ಒಳ್ಳೆಯ ಗುಣ ಹಾಗೂ ಯುವ ಮಿಲಿಟರಿ ಅಧಿಕಾರಿಗಳ ಶೌರ್ಯದ ಪ್ರವೃತ್ತಿಯೇ ಭಾರತದ ಗೆಲುವಿಗೆ ಕಾರಣವಾಯಿತು” ಎಂದು ಹೇಳಿದ್ದರು. ಭಾರತೀಯ ಸೇನಾಪಡೆಯ ನಡತೆ ಹಾಗೂ ಸ್ಪೂರ್ತಿ ನಿಜಕ್ಕೂ ಬಹಳ ವಿಶೇಷವಾದುದು. ಭಾರತೀಯ ಸೇನೆಯ ತರಬೇತಿ ಅಕಾಡೆಮಿಗಳಲ್ಲಿ ಒಂದು ಮಾತು ಹೇಳಲಾಗುತ್ತದೆ- “ನಮಗೆ ಯುವಕರನ್ನು ಕೊಡಿ, ನಾವು ನಮ್ಮ ದೇಶಕ್ಕೆ ಪರಿಪೂರ್ಣ ಯೋಧರನ್ನು ನೀಡುತ್ತೇವೆ”.
ಭಾರತೀಯ ಸೇನಾಪಡೆಯ ತರಬೇತಿ ಕೇಂದ್ರಗಳಿಗೆ ಹಾಗೂ ಯೋಧರ ಕ್ಯಾಂಪ್ಗಳಿಗೆ ಭೇಟಿ ನೀಡಿ ಅವರ ಜೀವನ ಶೈಲಿಯನ್ನು ಖುದ್ದಾಗಿ ನೋಡುವ ಅವಕಾಶ ನನಗೆ ಲಭಿಸಿತ್ತು. ಅದು ನನ್ನ ಬದುಕಿನ ಅದೃಷ್ಟಗಳಲ್ಲಿ ಒಂದು
ಎಂದೇ ಭಾವಿಸಿದ್ದೇನೆ. ಹಿಮಾಲಯದಿಂದ ಹಿಡಿದು ಮರುಭೂಮಿಯವರೆಗೆ, ಅಲ್ಲಿಂದ ‘ರಣ್ ಆಫ್ ಕಛ್’ಗೆ
ಹೋದರೂ ನಮ್ಮ ಯೋಧರು ಯುದ್ಧಸನ್ನದ್ಧ ಸ್ಥಿತಿಯಲ್ಲಿ ಅತ್ಯುತ್ಸಾಹದಿಂದ ದೇಶದ ರಕ್ಷಣೆಗೆ ತಯಾರಾಗಿ
ನಿಂತಿರುವುದನ್ನು ನೋಡಿ ನನ್ನ ಮನಸ್ಸು ತುಂಬಿಬಂದಿದೆ.
ನಾನು ಕಾಶ್ಮೀರಕ್ಕೆ ಹೋದಾಗ ಅಲ್ಲಿನ ಪರಿಸ್ಥಿತಿ ಬಿಗಡಾಯಿಸಿತ್ತು. ನಿಜ ಹೇಳಬೇಕೆಂದರೆ ಕಾಶ್ಮೀರ ಹೊತ್ತಿ ಉರಿಯುತ್ತಿತ್ತು. ನನ್ನ ಕಾರಿನ ಹಿಂದೆ ಹಾಗೂ ಮುಂದೆ ಸೇನಾಪಡೆಯ ಜೀಪುಗಳಿದ್ದವು. ನನ್ನ ಜತೆಗಿದ್ದ ಹಿರಿಯ
ಸೇನಾಧಿಕಾರಿ ರವಿ ಘೋಡ್ಗೆ ಅವರು ಹೇಗೆ ಭಾರತೀಯ ಸೇನಾಪಡೆಯು ದೇಶದ ಗಡಿಗಳನ್ನು ರಕ್ಷಿಸುವುದರ ಜತೆಗೇ
ಭಯೋತ್ಪಾದಕರನ್ನೂ ಸದೆಬಡಿಯುತ್ತಿದೆ ಎಂಬುದನ್ನು ಚೆನ್ನಾಗಿ ಅರ್ಥವಾಗುವಂತೆ ಬಿಡಿಸಿ ಹೇಳಿದ್ದರು.
ಅಷ್ಟೇ ಅಲ್ಲ, ಸೇನಾಪಡೆಯ ಕ್ಯಾಂಪ್ಗಳು ಇರುವ ಪ್ರದೇಶದ ಸುತ್ತಮುತ್ತಲ ಹಳ್ಳಿಗಳಲ್ಲಿ ಜನರ ಆರೋಗ್ಯ, ಶಿಕ್ಷಣ ಹಾಗೂ ಕ್ರೀಡಾ ಚಟುವಟಿಕೆಗಳ ವಿಷಯದಲ್ಲಿ ಸೇನೆ ಹೇಗೆ ಸಕ್ರಿಯವಾಗಿ ಕೆಲಸ ಮಾಡುತ್ತದೆ ಎಂಬುದನ್ನೂ ಹೇಳಿದ್ದರು. ನನ್ನ ಪ್ರಕಾರ ಜಗತ್ತಿನ ಯಾವ ದೇಶದ ಸೇನೆಯೂ ನಾಗರಿಕ ಸಮಾಜದಲ್ಲಿ ಒಂದಾಗಿ ಈ ರೀತಿಯ ಬದ್ಧತೆಯಿಂದ ಕೆಲಸ ಮಾಡುವುದಿಲ್ಲ. ನಿಮಗೆ ಗೊತ್ತೇ? ನಮ್ಮ ದೇಶದ ಸೇನಾಪಡೆಯ ಪ್ರಮುಖ ಧ್ಯೇಯಗಳಲ್ಲಿ “ಸ್ವಾರ್ಥಕ್ಕಿಂತ ದೊಡ್ಡದು ಸೇವೆ” ಎಂಬುದೂ ಒಂದು.
ಅಲ್ಲಿರುವ ಗುಂಡು ಹಾರಿಸುವ ಕೈಗಳು ಜನರಿಗೆ ಅಗತ್ಯಬಿದ್ದಾಗ ಸಂತೈಸುವುದಕ್ಕೂ ಮುಂದೆ ಬರುತ್ತವೆ. 2013ರಲ್ಲಿ ಸೇನಾಪಡೆಯ ಯೋಧರು ಉತ್ತರಾಖಂಡದಲ್ಲಿ ನಡೆಸಿದ ‘ಆಪರೇಷನ್ ರಾಹತ್’ ಈ ಜಗತ್ತಿನ ಇತಿಹಾಸದಲ್ಲಿ ನಡೆದ ಅತಿದೊಡ್ಡ ಸೇನಾ ಪರಿಹಾರ ಕಾರ್ಯಾಚರಣೆಗಳಲ್ಲಿ ಒಂದು. ಬರೋಬ್ಬರಿ 20000 ಜನರನ್ನು ನಮ್ಮ ಯೋಧರು ರಕ್ಷಿಸಿದ್ದರು. ಅವರಿಗೆ ಆಶ್ರಯ ನೀಡಿ, ಆಹಾರ ನೀಡಿ, ಔಷಧ ಕೊಟ್ಟು ಕಾಪಾಡಿದ್ದರು. ಹೆಚ್ಚುಕಮ್ಮಿ ನಾಲ್ಕು ಲಕ್ಷ ಕಿಲೋ ಆಹಾರ ವಸ್ತುಗಳನ್ನು ಸಾಗಾಟ ಮಾಡಿದ್ದರು. ಇಷ್ಟೇ ಅಲ್ಲ, ದೇಶದೊಳಗೆ ರಕ್ಷಣಾ ಕಾರ್ಯಾಚರಣೆ ನಡೆಸುವುದರ ಜತೆಗೇ ನಮ್ಮ ದೇಶದ ಸೇನೆಯು ಜಗತ್ತಿನ ಬೇರೆ ಬೇರೆ ದೇಶಗಳಲ್ಲೂ ರಕ್ಷಣಾ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುತ್ತದೆ.
ರಾಜಸ್ಥಾನದ ಗಡಿಯಲ್ಲಿರುವ ಶ್ರೀ ತನೋತ್ ಮಾತಾ ದೇವಸ್ಥಾನಕ್ಕೆ ನಾನು ಹೋಗಿದ್ದೆ. ಆ ಪ್ರದೇಶದಲ್ಲಿ ಪಾಕಿಸ್ತಾ ನದ ಸೇನೆ ಬಹಳ ಹಿಂದೆ ಸಾಕಷ್ಟು ನೆಲಬಾಂಬ್ಗಳನ್ನು ಹಾಕಿದೆ. ಅವುಗಳಲ್ಲಿ ಯಾವುದೂ ಸ್ಪೋಟಿಸಿಲ್ಲ. ಅಂದರೆ ಇವತ್ತಿಗೂ ಆ ಬಾಂಬ್ಗಳು ಜೀವಂತವಾಗಿವೆ. ಯಾರಾದರೂ ಆ ಜಾಗದಲ್ಲಿ ಕಾಲಿಟ್ಟರೆ ಸೋಟಿಸುತ್ತವೆ. ಆ ದೇವಸ್ಥಾನದಲ್ಲಿ ಧರ್ಮಭೇದ ವಿಲ್ಲದೆ ನಮ್ಮ ಯೋಧರು ಪೂಜೆ ಸಲ್ಲಿಸುತ್ತಾರೆ. ನಮ್ಮ ಸೇನಾಪಡೆಗಳಲ್ಲಿ ಜಾತಿ, ಧರ್ಮ, ಪಂಥಗಳ ಭೇದವಿಲ್ಲ. ಅವರಿಗೆ ಅತ್ಯಂತ ಶ್ರೇಷ್ಠವಾದ ಧರ್ಮವೆಂದರೆ ಭಾರತದ ತ್ರಿವರ್ಣ ಧ್ವಜ. ಈಶಾನ್ಯ ರಾಜ್ಯಗಳ ಗಡಿ ಪ್ರದೇಶದ ಮೂಲೆಗಳಿಗೂ ನಾನು ಹೋಗಿ ಬಂದಿದ್ದೇನೆ. ಅಲ್ಲಿ ಭಾರತೀಯ ಸೇನಾಪಡೆಯ ಯೋಧರು ಮಾಡುತ್ತಿರುವ ಕೆಲಸ ನೋಡಿ ಅಚ್ಚರಿಗೊಂಡಿದ್ದೇನೆ. ಜನಸಾಮಾನ್ಯರ ಸಂಕಷ್ಟಮಯ ಬದುಕನ್ನು ಅವರು ಸಹನೀಯವಾಗಿಸುತ್ತಿzರೆ. ಬರಡು ಭೂಮಿಯನ್ನೂ ಅವರು ಫಲವತ್ತು ಮಾಡುತ್ತಿದ್ದಾರೆ.
ಸೇನೆಯ ಯೋಧರು ಸ್ವಚ್ಛತೆಗೆ ಹೆಸರುವಾಸಿ. ಅವರ ವಾಹನಗಳ ಟೈರುಗಳು ಕೂಡ ಸ್ವಚ್ಛವಾಗಿರುತ್ತವೆ. ಅವರು
ಮಾಡುವ ಅಡುಗೆ, ಆಹಾ, ಸ್ವಾದಿಷ್ಟಮಯ! ಅದನ್ನು ಉಂಡರೆ ಬೆರಳು ನೆಕ್ಕುತ್ತಿರುತ್ತೀರಿ!
ಕೇವಲ ಭಾರತೀಯ ಯೋಧರು ಮಾತ್ರ ಶೌರ್ಯ, ಸಾಹಸ, ದೇಶಭಕ್ತಿ, ಬದ್ಧತೆ, ಒಳ್ಳೆಯತನ, ಸ್ವಚ್ಛತೆ, ಪಾಕಪ್ರಾವೀಣ್ಯ ಹೀಗೆ ನಾನಾ ಗುಣಗಳನ್ನು ಏಕಕಾಲಕ್ಕೆ ಹೊಂದಿರಲು ಸಾಧ್ಯ. ಸೇನಾಪಡೆಗಳಿಂದ ನಾವು ಕಲಿಯಬೇಕಿರುವುದು ಸಾಕಷ್ಟಿದೆ. ಆದ್ದರಿಂದಲೇ ನಮ್ಮ ದೇಶದ ಸೇನೆ ನಮಗೆ ಹೆಮ್ಮೆ. ದೇಶದ ತ್ರಿವರ್ಣಧ್ವಜ ನಿರಾತಂಕವಾಗಿ ಬಡಬಡಿಸು ತ್ತಿರುವಂತೆ ಅವರು ನೋಡಿಕೊಳ್ಳುತ್ತಾರೆ! ಅವರ ಸೇವೆಯಲ್ಲಿ ತ್ರಿವರ್ಣಧ್ವಜ ಹೀಗೇ ಎತ್ತರಕ್ಕೆ ಹಾರುತ್ತಿರಲಿ! ಜೈ ಹಿಂದ್!
ಇದನ್ನೂ ಓದಿ: Dr Vijay Darda Column: ಯಾವ ದೇಶದಲ್ಲೂ ನಮ್ಮಲ್ಲಿರುವಷ್ಟು ಹಬ್ಬಗಳಿಲ್ಲ!