Friday, 18th October 2024

Unique Tradition: ಈ ದೇಶಕ್ಕೆ ಬರುವ ಪ್ರವಾಸಿಗರಿಗೆ ವೀಸಾ ಜತೆ ಹೆಂಡತಿಯೂ ಸಿಕ್ತಾಳೆ; ಏನಿದು ಸಂಪ್ರದಾಯ ?

Unique Tradition

ಇಲ್ಲಿಗೆ ಬರುವ ಪ್ರವಾಸಿಗರು ಹಣ ನೀಡಿದರೆ ಸಾಕು ತಾತ್ಕಾಲಿಕ ಹೆಂಡತಿಯರು (temporary marriage) ಸಿಗುತ್ತಾರೆ. ಪ್ರವಾಸಿಗರು (tourists) ತಮ್ಮ ಭೇಟಿ ಮುಗಿಸಿ ಹೊರಡುವ ವೇಳೆ ಇಲ್ಲಿನ ತಮ್ಮ ಹೆಂಡತಿಗೆ ವಿಚ್ಛೇದನ ನೀಡಿ ಹೊರಡಬೇಕು. ಇಂತಹ ಒಂದು ಸಂಪ್ರದಾಯ ಇಂಡೋನೇಷ್ಯಾದ (Indonesia) ಪನ್ಕಾಕ್ ( Puncak region) ಪ್ರದೇಶದಲ್ಲಿದೆ. ಹಣಕ್ಕಾಗಿ ಪ್ರವಾಸಿಗರೊಂದಿಗೆ ತಾತ್ಕಾಲಿಕ ವಿವಾಹ ಬಂಧನಕ್ಕೆ ಒಳಗಾಗುವ ಉದ್ಯಮ ಇಂಡೋನೇಷ್ಯಾದ ಪನ್ಕಾಕ್ ಪ್ರದೇಶದಲ್ಲಿ ಬೆಳೆಯುತ್ತಿದ್ದು, ಇದಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

ಸಾಮಾನ್ಯವಾಗಿ “ಸಂತೋಷದ ಮದುವೆಗಳು” ಎಂದು ಕರೆಯಲ್ಪಡುವ ಈ ವ್ಯವಸ್ಥೆ ಇಂಡೋನೇಷ್ಯಾ ಮಾತ್ರವಲ್ಲ ಹೊರದೇಶಗಳಲ್ಲೂ ಆಕ್ರೋಶವನ್ನು ಹುಟ್ಟುಹಾಕಿದೆ. ಇದು ದುರ್ಬಲ ಮಹಿಳೆಯರ ಶೋಷಣೆ ಎಂದು ಅನೇಕರು ಟೀಕಿಸಿದ್ದಾರೆ.

ಇಂಡೋನೇಷ್ಯಾದ ಪಶ್ಚಿಮ ಭಾಗದಲ್ಲಿರುವ ಪುಂಕಾಕ್ ಮಧ್ಯಪ್ರಾಚ್ಯದ ಪ್ರವಾಸಿಗರಿಗೆ ಜನಪ್ರಿಯ ತಾಣವಾಗಿದೆ. ಇಲ್ಲಿನ ನೈಸರ್ಗಿಕ ಸೌಂದರ್ಯ ಸಾಕಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

ಕೋಟಾ ಬುಂಗಾದ ಪರ್ವತ ರೆಸಾರ್ಟ್‌ಗೆ ಬರುವ ಪ್ರವಾಸಿಗರಿಗೆ ಏಜೆನ್ಸಿಗಳ ಮೂಲಕ ಸ್ಥಳೀಯ ಮಹಿಳೆಯರನ್ನು ಪರಿಚಯಿಸಲಾಗುತ್ತದೆ. ಇದು ತಾತ್ಕಾಲಿಕ ವಿವಾಹ ಪ್ರಕ್ರಿಯೆಯ ಆರಂಭ. ಬಳಿಕ ಪ್ರವಾಸಿಗರು ಹಣ ನೀಡಿ ವಧುವನ್ನು ಖರೀದಿಸುತ್ತಾರೆ. ಅನಂತರ ಅನೌಪಚಾರಿಕ ವಿವಾಹ ಸಮಾರಂಭವನ್ನು ನಡೆಸಲಾಗುತ್ತದೆ. ಮದುವೆಯು ಸಾಮಾನ್ಯವಾಗಿ ಪ್ರವಾಸಿ ವಾಸ್ತವ್ಯದ ಅವಧಿಯವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಪ್ರವಾಸಿಗ ದೇಶವನ್ನು ತೊರೆದ ಅನಂತರ ರದ್ದಾಗುತ್ತದೆ.

ಈ ವಿವಾಹದ ಬಳಿಕ ಮಹಿಳೆಯರು ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಾರೆ. ಲೈಂಗಿಕ ಸೇವೆಗಳನ್ನೂ ಒದಗಿಸುತ್ತಾರೆ ಎನ್ನಲಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಉದ್ಯಮವಾಗಿ ಮಾರ್ಪಟ್ಟಿದೆ.. ಇದರಲ್ಲಿ ಪಾಲ್ಗೊಳ್ಳುವ ಮಹಿಳೆಯರು ಸಾಮಾನ್ಯವಾಗಿ ಬಡ ವರ್ಗದವರಿಗಿದ್ದು, ಹಣದ ಅವಶ್ಯಕತೆಗಾಗಿ ಅವರು ಈ ಉದ್ಯಮದಲ್ಲಿ ತೊಡಗಿರುತ್ತಾರೆ.

ಇವರಲ್ಲಿ ಕಹಾಯಾ ಎನ್ನುವ ಯುವತಿ ತನ್ನ ಕಥೆಯನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾಳೆ. ತಾನು 17 ವರ್ಷ ವಯಸ್ಸಿನಲ್ಲಿ ತಾತ್ಕಾಲಿಕ ಹೆಂಡತಿಯಾಗಿದ್ದೇನೆ ಎಂದು ಹೇಳಿರುವ ಆಕೆ, ಈವರೆಗೆ ತಾನು 15ಕ್ಕೂ ಹೆಚ್ಚು ಬಾರಿ ಮದುವೆಯಾಗಿದ್ದೇನೆ. ಎಲ್ಲವೂ ಮಧ್ಯಪ್ರಾಚ್ಯದ ಪ್ರವಾಸಿಗರನ್ನು ಎಂದು ತಿಳಿಸಿದ್ದಾರೆ.

Unique Tradition

ಆಕೆಯ ಮೊದಲ ತಾತ್ಕಾಲಿಕ ಪತಿ ಸೌದಿ ಅರೇಬಿಯಾದ 50ರ ಹರೆಯದ ವ್ಯಕ್ತಿ. 850 ಡಾಲರ್ ಕೊಟ್ಟು ಮದುವೆಯಾಗಿದ್ದ. ಏಜೆಂಟ್ ಮತ್ತು ಅಧಿಕಾರಿಗಳು ತಮ್ಮ ಪಾಲು ಪಡೆದ ಬಳಿಕ ಅರ್ಧದಷ್ಟು ಮೊತ್ತ ಮಾತ್ರ ತಮ್ಮ ಕೈ ಸೇರಿತ್ತು ಎಂದು ಅವರು ತಿಳಿಸಿದ್ದಾರೆ.

ಮದುವೆಯಾದ ಐದು ದಿನಗಳ ಬಳಿಕ ಪತಿ ತನ್ನ ತಾಯ್ನಾಡಿಗೆ ತೆರಳಿದ್ದು, ಬಳಿಕ ವಿಚ್ಛೇದನ ಪಡೆದಿರುವುದಾಗಿ ಕಹಾಯಾ ಹೇಳಿದ್ದಾರೆ. ಇದರಿಂದಲೇ ತಮ್ಮ ಜೀವನ ಸಾಗುತ್ತಿದೆ. ಅನಾರೋಗ್ಯದಿಂದ ಬಳಲುತ್ತಿರುವ ಅಜ್ಜಿಯರನ್ನು ನೋಡಿಕೊಳ್ಳಲು ಇದು ಸಹಾಯ ಮಾಡಿದೆ ಎಂದಿದ್ದಾರೆ ಕಹಾಯಾ.

ಇನ್ನೊಬ್ಬ ಮಹಿಳೆ ತಾನು ಕನಿಷ್ಠ 20 ಬಾರಿ ಮದುವೆಯಾಗಿದ್ದೇನೆ. ಈಗ ಇಂಡೋನೇಷ್ಯಾದ ವ್ಯಕ್ತಿಯೊಬ್ಬನನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದಿದ್ದು, ಹಿಂದಿನ ಜೀವನಕ್ಕೆ ಮರಳುವ ಯಾವುದೇ ಇರಾದೆ ಇಲ್ಲ ಎಂದು ತಿಳಿಸಿದ್ದಾರೆ.

ಶಿಯಾ ಮುಸ್ಲಿಮರ ಸಂಪ್ರದಾಯ

ನಿಕಾಹ್ ಮುತಾಹ್ ಎಂದು ಕರೆಯಲ್ಪಡುವ ಈ ಸಂಪ್ರದಾಯವನ್ನು ಶಿಯಾ ಮುಸ್ಲಿಮರು ಪಾಲಿಸುತ್ತಾರೆ. ಅನೇಕ ಇಸ್ಲಾಮಿಕ್ ವಿದ್ವಾಂಸರು ಇದನ್ನು ಖಂಡಿಸುತ್ತಾರೆ.

ಇಂಡೋನೇಷ್ಯಾದ ಈ ಸಂಪ್ರದಾಯ ಕಾನೂನುಬದ್ಧವಲ್ಲ. ಯಾಕೆಂದರೆ ಇದು ದೇಶದ ಕಾನೂನು ವ್ಯಾಖ್ಯಾನಕ್ಕೆ ವಿರುದ್ಧವಾಗಿದೆ. ಇಂಡೋನೇಷ್ಯಾದ ವಿವಾಹ ಕಾನೂನುಗಳ ಉಲ್ಲಂಘನೆಯು ದಂಡ, ಸೆರೆವಾಸ ಮತ್ತು ಸಾಮಾಜಿಕ ಅಥವಾ ಧಾರ್ಮಿಕ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಹೇಳುತ್ತಾರೆ.

Unique Tradition: ಈ ದೇಶದ ಮನೆಗಳ ಗೋಡೆಗೆ ಅಶ್ಲೀಲ ಚಿತ್ರಗಳದ್ದೇ ಅಲಂಕಾರ! ಇದಕ್ಕೂಒಂದು ಕಾರಣವಿದೆ

ಇಂಡೋನೇಷ್ಯಾದ ಈ ಸಂಪ್ರದಾಯವನ್ನು ಚೀನಾ ಮಾಧ್ಯಮಗಳು ಇತ್ತೀಚೆಗೆ ಬೆಳಕಿಗೆ ತಂದಿತ್ತು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು. ಅನೇಕರು ಇದಕ್ಕೆ ಕಾಮೆಂಟ್ ಮಾಡಿ, ಈ ಕರಾಳ ಉದ್ಯಮವು ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸಬಹುದು. ಆದರೆ ಸರ್ಕಾರವನ್ನು ಸಹ ಶಕ್ತಿಹೀನಗೊಳಿಸುತ್ತದೆ ಎಂದು ಹೇಳಿದ್ದರೆ, ಮತ್ತೊಬ್ಬರು, ಇದು ಚೀನಾದ ಬಡ ಗ್ರಾಮೀಣ ಹಳ್ಳಿಗಳಲ್ಲಿನ ಹುಡುಗಿಯರನ್ನು ನೆನಪಿಸುತ್ತದೆ. ಅವರ ಭವಿಷ್ಯವನ್ನು ಬದಲಾಯಿಸಲು ಶಿಕ್ಷಣ ಮತ್ತು ಕೌಶಲ್ಯಗಳೊಂದಿಗೆ ಸಬಲೀಕರಣಗೊಳಿಸಬೇಕು ಎಂದು ತಿಳಿಸಿದ್ದಾರೆ.