Thursday, 12th December 2024

Unique Tradition: ಈ ದೇಶದ ಮನೆಗಳ ಗೋಡೆಗೆ ಅಶ್ಲೀಲ ಚಿತ್ರಗಳದ್ದೇ ಅಲಂಕಾರ! ಇದಕ್ಕೂಒಂದು ಕಾರಣವಿದೆ

Unique Tradition

ಒಂದು ವೇಳೆ ಭೂತಾನ್‌ಗೆ (Bhutan) ನೀವು ಭೇಟಿ ಕೊಟ್ಟರೆ ಅಲ್ಲಿನ ಮನೆ ಗೋಡೆಗಳ ಮೇಲಿರುವ ಚಿತ್ರಗಳನ್ನು (Art) ನೋಡಿ ಒಂದು ಕ್ಷಣ ಮುಜುಗರ ಪಟ್ಟುಕೊಳ್ಳಬಹುದು. ಆದರೆ ಇದು ಅಲ್ಲಿನ ಜನರ ನಂಬಿಕೆ ಮತ್ತು ಅನೇಕ ವರ್ಷಗಳಿಂದ ನಡೆದು ಬಂದಿರುವ ಸಂಪ್ರದಾಯದ (Unique Tradition) ಭಾಗವಾಗಿದೆ. ಬಹುತೇಕ ಮನೆಗಳ ಗೋಡೆಗಳ ಮೇಲೆ ಅಶ್ಲೀಲ ಚಿತ್ರಗಳನ್ನು ಕಾಣಬಹುದು. ಇದರ ಹಿಂದೆ ಒಂದು ಕಥೆಯೇ ಇದೆ.

ಭೂತಾನ್‌ನ ಮನೆ, ದೇವಾಲಯಗಳ ಮೇಲೆ ಮಾನವ ಶಿಶ್ನದ ಚಿತ್ರಗಳನ್ನು ಬರೆಯಲಾಗಿರುತ್ತದೆ. ಕೂದಲು, ಕಣ್ಣುಗಳನ್ನು ಕೆಲವು ಚಿತ್ರಗಳಲ್ಲಿ ಸೇರಿಸಿ ಸೊಗಸಾದ ವಿವರಗಳೊಂದಿಗೆ ಪ್ರಸ್ತುತ ಪಡಿಸಲಾಗಿದೆ.

ಬೌದ್ಧಧರ್ಮದ ವಜ್ರಯಾನ ಶಾಖೆಯ ಭದ್ರಕೋಟೆಯಾದ ಭೂತಾನ್‌ನಲ್ಲಿ ಇಂತಹ ಕಲಾಕೃತಿಗಳನ್ನು ಕಾಣಬಹುದು. ಹಿಮಾಲಯದ ಮೊನಚಾದ ಪರ್ವತಗಳ ನಡುವೆ ಇರುವ ಭೂತಾನ್ ಪ್ರಪಂಚದ ಇತರ ಭಾಗಗಳಿಂದ ಪ್ರತ್ಯೇಕವಾಗಿದೆ. 1960ರ ದಶಕದವರೆಗೆ ಭೂತಾನ್‌ ನಲ್ಲಿ ರಸ್ತೆಗಳೇ ಇರಲಿಲ್ಲ. 1999ರವರೆಗೆ ಯಾವುದೇ ಇಂಟರ್ನೆಟ್ ಸಂಪರ್ಕವನ್ನೂ ಹೊಂದಿರಲಿಲ್ಲ.

Unique Tradition

ಭೂತಾನ್‌ನ ಹೆಚ್ಚಿನ ಮನೆಗಳಲ್ಲಿ ಮಾನವ ಶಿಶ್ನಗಳ ಚಿತ್ರಗಳು ಕಂಡು ಬರುತ್ತವೆ. ಶಿಶ್ನದ ಗೊಂಬೆಗಳನ್ನೂ ಮಾರಲಾಗುತ್ತದೆ. ಮನೆ, ದೇವಳಗಳ ಬಾಗಿಲ ಕಂಬಗಳಲ್ಲಿ ಇವುಗಳನ್ನು ನೇತುಹಾಕಲಾಗುತ್ತದೆ. ಇದರ ಹಿಂದೆ ಒಂದು ಕಥೆಯೇ ಇದೆ.

15ನೇ ಶತಮಾನದ ಟಿಬೆಟಿಯನ್ ಸನ್ಯಾಸಿಯಾಗಿದ್ದ ಲಾಮಾಕುನ್ಲೆ ಎಂಬಾತ ಅತಿಯಾದ ಲೈಂಗಿಕ ಬಯಕೆ ಹೊಂದಿದ್ದು, ಮಾನವ ಶಿಶ್ನವನ್ನು ಪೂಜಿಸುವಂತೆ ಅವರೇ ತಮ್ಮ ಅನುಯಾಯಿಗಳಿಗೆ ಪ್ರೇರೇಪಿಸಿದ್ದರು. ಇದರಿಂದ ದುಷ್ಟಶಕ್ತಿಗಳು ಮನೆಗೆ ಬರುವುದಿಲ್ಲ ಎಂಬುದು ಇಲ್ಲಿನ ಜನರ ನಂಬಿಕೆಯಾಗಿ ಇಂದಿಗೂ ಇದು ಮುಂದುವರಿದುಕೊಂಡು ಬಂದಿದೆ.

ಲಾಮಾಕುನ್ಲೆ ಭೂತಾನ್‌ನಾದ್ಯಂತ ಸಂಚರಿಸಿ ರಾಕ್ಷಸರನ್ನು ವಧಿಸಿದನು ಮತ್ತು ನಿರ್ವಾಣವನ್ನು ತಲುಪಲು ಬ್ರಹ್ಮಚರ್ಯದ ಅಗತ್ಯವಿಲ್ಲ ಎಂದು ಸಾರಿದನು. 5,000 ಕ್ಕೂ ಹೆಚ್ಚು ಮಹಿಳೆಯರನ್ನು ಭೋಗಿಸಿ ಆಶೀರ್ವಾದ ನೀಡಿದನು ಎನ್ನಲಾಗುತ್ತದೆ.

Unique Tradition: ಇಲ್ಲಿನ ರಾಜನಿಗೆ ಪ್ರತಿ ವರ್ಷವೂ ಮದುವೆ; ನಗ್ನ ನೃತ್ಯದಲ್ಲಿ ಗೆಲ್ಲುವಾಕೆ ಆತನ ಹೊಸ ಪತ್ನಿ!

ಪುನಾಖಾ ಪಟ್ಟಣದಲ್ಲಿ ಛಿಮಿ ಲಖಾಂಗ್ ಎಂಬ ಮಠವನ್ನು ಕುನ್ಲೆ ಸ್ಥಾಪಿಸಿದ್ದು, ಗರ್ಭಿಣಿಯಾಗಲು ಬಯಸುವವರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿ ಭಕ್ತರಿಗೆ ಬೃಹತ್ ಮರದ ಶಿಶ್ನದಿಂದ ತಲೆಯನ್ನು ತಟ್ಟಿ ಆಶೀರ್ವಾದ ನೀಡಲಾಗುತ್ತದೆ.