Sunday, 24th November 2024

BBK 11: ನಗು ನಗುತ್ತಲೇ ಉಗ್ರಂ ಮಂಜುಗೆ ಟಕ್ಕರ್ ಕೊಟ್ಟ ಧನರಾಜ್ ಆಚಾರ್

Ugramm Manju and Dhanraj Achar (1)

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada) ಎರಡನೇ ವಾರ ಕೊನೆಯಾಗುತ್ತಿದ್ದು, ಸ್ಪರ್ಧಿಗಳು ಟಾಸ್ಕ್​ನಲ್ಲಿ ಮುಳುಗಿ ಹೋಗಿದ್ದಾರೆ. ನಾಮಿನೇಷನ್​ನಿಂದ ಪಾರಾಗಲು ಬಿಗ್ ಬಾಸ್ ಟಾಸ್ಕ್ ನೀಡುತ್ತಿದ್ದಾರೆ. ಇದರಲ್ಲಿ ಗೆದ್ದ ತಂಡದ ಸದಸ್ಯರಿಗೆ ನಾಮಿನೇಷನ್​ನಿಂದ ಬಚಾವ್ ಆಗಲು ಅವಕಾಶ ನೀಡಲಾಗುತ್ತಿದೆ. ಕ್ಯಾಪ್ಟನ್ ಹಂಸ ತೆಗೆದುಕೊಂಡ ನಿರ್ಧಾರಗಳಿಂದ ಮನೆ ಅಲ್ಲೋಲ-ಕಲ್ಲೋಲವಾಗಿದೆ. ಇದರ ಮಧ್ಯೆ ಇಂದು ಕ್ಯಾಪ್ಟನ್ಸಿ ಟಾಸ್ಕ್ ನಡೆಯಲಿದೆ.

ಈ ವಾರ ಮನೆಯ ನಾಯಕರಾಗಲು ಉಗ್ರಂ ಮಂಜು, ತ್ರಿವಿಕ್ರಮ್‌, ಚೈತ್ರಾ ಕುಂದಾಪುರ, ಮೋಕ್ಷಿತಾ ರೇಸ್​ನಲ್ಲಿದ್ದಾರೆ. ಇವರಿಷ್ಟು ಮಂದಿ ವೇದಿಕೆ ಮೇಲೆ ನಿಂತಿದ್ದು, ಉಳಿದ ಸ್ಪರ್ಧಿಗಳು ಇವರಲ್ಲಿ ಯಾರು ನಾಯಕನಾಗಬೇಕು-ಯಾರು ಆಗಬಾರದು ಎಂದು ಕಾರಣ ಸಹಿತ ವಿವರಿಸುವ ಟಾಸ್ಕ್ ನೀಡಿರುವಂತೆ ಕಾಣುತ್ತಿದೆ. ಇದರಲ್ಲಿ ಧನರಾಜ್ ಅವರು ಉಗ್ರಂ ಮಂಜು ಅವರಿಗೆ ನೀಡಿರುವ ಕಾರಣ ವಿಶೇಷವಾಗಿದ್ದು, ನಗು ನಗುತ್ತಲೇ ಟಾಂಗ್ ಕೊಟ್ಟಿದ್ದಾರೆ.

‘ನಾನು ಮಂಜು ಅವರ ಜತೆ ಇದ್ದು ನೋಡಿದ್ದೇನೆ. ಅವರು ಹೇಗೆ ಅಂದರೆ ಡಿಸ್ಕಶನ್‌ ಮಾಡ್ತಾರೆ. ಮಾಡುವಾಗ ಅದು ಹಾಗಿರುತ್ತೆ, ಹೀಗಿರುತ್ತೆ ಎನ್ನುವ ತರ ವಿವರಣೆ ಕೊಡ್ತಾರೆ. ನನಗೆ ಅನ್ನಿಸೋದು ಆಗ ಆ ಸೆಟ್‌ ಹೀಗೆ ಇರಬೋದು..ಹಾಗೇ ಇರಬಹುದು ಎಂದು. ಆಮೇಲೆ ನನಗೆ ಅನ್ನಿಸ್ತದೆ ಹೋಗುದು ಬೇಡ ಭಾರಿ ಕಷ್ಟ ಇದೆ ಎಂದು. ಆಮೇಲೆ ನೋಡುವಾಗ ಎಲ್ಲ ಚಿಕ್ಕ ಚಿಕ್ಕದು ಇರತ್ತೆ. ಇದೆಲ್ಲ ನಾವೇ ಮಾಡಬಹುದಿತ್ತು ಅಂತ ಆಮೇಲೆ ಅನ್ನಿಸುತ್ತೆ. ಅವರು ಬಿಲ್ಡಪ್ ಕೊಡ್ತಾರೆ’ ಎಂದು ಹೇಳಿದ್ದಾರೆ.

‘ಅವರು ನಾನು ಹೇಳಿದ ಹಾಗೇ ಡೈನೋಸರ್‌, ತಿಂದುಕೊಂಡು ತುಳಿದುಕೊಂಡು ಹೋಗ್ತಾರೆ. ಯಾಕಂದರೆ ಕೆಲವೊಂದು ಸಲ ನಾನೇ ಕೈ ಮೇಲೆ ಎತ್ತಿರುತ್ತೇನೆ ಆದರೆ ಅವರಿಗೆ ಅದು ಕಾಣೋದೇ ಅಲ್ಲ. ಆಮೇಲೆ ಬಂದು ನೀನು ಎಲ್ಲಿ ಇದ್ದೆ? ಡಿಸ್ಕಷನ್‌ನಲ್ಲಿ ಎಂದು ಕೇಳ್ತಾರೆ. ಆ ಥರ ಸುಮಾರ್‌ ಕೇಸಸ್‌ ಆಗಿದೆ’ ಎಂದು ಧನರಾಜ್ ಹೇಳುತ್ತಾರೆ.

ಧನರಾಜ್ ಅವರ ಈ ಹೇಳಿಕೆಗೆ ಮನೆ ನಕ್ಕು-ನಕ್ಕು ಫುಲ್ ಸುಸ್ತಾಗಿದೆ. ಸೀರಿಯೆಸ್ ಟಾಪಿಕ್​ನಲ್ಲೂ ಮನೆ ನಗಾಡಿರುವುದು ಇದೇ ಮೊದಲು ಎಂದು ಸ್ಪರ್ಧಿಗಳು ಮಾತನಾಡಿಕೊಂಡಿದ್ದಾರೆ. ಮುಂದಿನ ವಾರದ ಕ್ಯಾಪ್ಟನ್ ಶಿಶಿರ್‌ ಆಗಬೇಕು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

BBK 11: ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಅವಾಂತರ: ನರಕ ವಾಸಿಗಳ ಜಾಗ ಪೀಸ್ ಪೀಸ್