Saturday, 23rd November 2024

Rishabh Pant: ಗಲ್ಲಿಯಲ್ಲಿ ಕ್ರಿಕೆಟ್‌ ಆಡಿ ಸರಳತೆ ತೋರಿದ ಪಂತ್‌; ವಿಡಿಯೊ ವೈರಲ್‌

ನವದೆಹಲಿ: ಟೀಮ್‌ ಇಂಡಿಯಾದ ಸ್ಟಾರ್‌ ವಿಕೆಟ್‌ ಕೀಪರ್‌ ಕಮ್‌ ಬ್ಯಾಟರ್‌ ರಿಷಭ್‌ ಪಂತ್‌(Rishabh Pant) ಅವರು ಗಲ್ಲಿಯೊಂದರಲ್ಲಿ ಅಭಿಮಾನಿಗಳ ಜತೆ ಕ್ರಿಕೆಟ್‌ ಆಡಿ ಸರಳತೆ ಮೆರೆದಿದ್ದಾರೆ. ಪಂತ್‌ ಕ್ರಿಕೆಟ್‌ ಆಡಿದ ವಿಡಿಯೊ ವೈರಲ್‌( ಆಗಿದೆ.

ಪಂತ್‌ ಅವರು ದೆಹಲಿಯ ಗಲ್ಲಿಯೊಂದಲ್ಲಿ ಅಭಿಮಾನಿಗಳ ಜತೆ ಅತ್ಯಂತ ಆತ್ಮೀಯವಾಗಿ ಕ್ರಿಕೆಟ್‌ ಆಡಿದ್ದಾರೆ. ಟಾಸ್‌ ಹಾರಿಸಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ನಡೆಸಿದ್ದಾರೆ. ಪಂತ್‌ ಅವರ ಈ ಸರಳತೆ ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾವೆಲ್ಲರೂ ಬಾಲ್ಯದಲ್ಲಿ ಗಲ್ಲಿಯಲ್ಲಿ ಯಾವ ರೀತಿ ಕ್ರಿಕೆಟ್‌ ಆಡಿದ್ದೇವೋ ಅದೇ ರೀತಿಯಲ್ಲಿ ಪಂತ್‌ ಕೂಡ ಆಡಿ ಬಾಲ್ಯದ ನೆನಪನ್ನು ಮೆಲುಕು ಹಾಕಿದ್ದಾರೆ. ಗಲ್ಲಿಯಲ್ಲಿ ಕ್ರಿಕೆಟ್‌ ಆಡಿದ ವಿಡಿಯೊವನ್ನು ಸ್ವತಃ ಪಂತ್‌ ಅವರೇ ತಮ್ಮ ಅಧಿಕೃತ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪಂತ್‌ ಶೀಘ್ರದಲ್ಲೇ ನ್ಯೂಜಿಲ್ಯಾಂಡ್‌ ಟೆಸ್ಟ್‌ ಸರಣಿಯನ್ನಾಡಲು ಟೀಮ್‌ ಇಂಡಿಯಾ ಕ್ಯಾಂಪ್‌ ಸೇರಲಿದ್ದಾರೆ.

ಅಪಘಾತದಲ್ಲಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದ ಪಂತ್‌

2022 ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್​ ಪಂತ್​ ಪಾರಾಗಿದ್ದರು. ಡೆಹ್ರಾಡೂನ್​ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಸುಮಾರು 14 ತಿಂಗಳು ವಿಶ್ರಾಂತಿಯಲ್ಲಿದ್ದ ಪಂತ್‌ ಈ ವರ್ಷ ನಡೆದಿದ್ದ ಐಪಿಎಲ್‌ ಮೂಲಕ ಮತ್ತೆ ಕ್ರಿಕೆಟ್‌ ಪುನರಾಗಮನ ಮಾಡಿದ್ದರು. ಬಳಿಕ ಟಿ20 ವಿಶ್ವಕಪ್‌ ಕಪ್‌ ಕೂಡ ಆಡಿದ್ದರು. ಸದ್ಯ ಉತ್ತಮ ಬ್ಯಾಟಿಂಗ್‌ ಫಾರ್ಮ್‌ನಲ್ಲಿದ್ದಾರೆ.

ಪಂತ್‌ 2020- 21ರ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗಾಬಾದಲ್ಲಿ ನಡೆದ ಅಂತಿಮ ಪಂದ್ಯವನ್ನು ಏಕಾಂಗಿಯಾಗಿ ನಿಂತು ಗೆಲ್ಲಿಸಿಕೊಟ್ಟಿದ್ದರು. ಒಂದೊಮ್ಮೆ ಕೊಹ್ಲಿ ನಾಯಕತ್ವ ವಹಿಸಿಕೊಳ್ಳಲು ಒಪ್ಪದಿದ್ದರೆ ಆಗ ಪಂತ್‌ಗೆ ಈ ಜವಾಬ್ದಾರಿ ಸಿಗುವುದು ಖಚಿತ. ಇದೇ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಪಂತ್‌ ನಡೆಸಿದ ಉಪಾಯದಿಂದ ಪಂದ್ಯ ಗೆಲ್ಲಲು ಸಹಕಾರಿಯಾಗಿತ್ತು ಎಂದು ಸ್ವತಃ ರೋಹಿತ್‌ ಸಂದರ್ಶನವೊಂದರಲ್ಲಿ ಹೇಳಿದ್ದರು. ಹೀಗಾಗಿ ರೋಹಿತ್‌ ಅವರು ಪಂತ್‌ ಹೆಸರನ್ನು ತಂಡದ ಮ್ಯಾನೆಜ್‌ಮೆಂಟ್‌ಗೆ ಸೂಚಿಸಬಹುದು.

ಇದನ್ನೂ ಓದಿ Rishabh Pant Birthday: 27ನೇ ವಸಂತಕ್ಕೆ ಕಾಲಿಟ್ಟ ರಿಷಭ್‌ ಪಂತ್‌

ರೋಹಿತ್​ ಶರ್ಮ(Rohit Sharma) ವರ್ಷಾಂತ್ಯದ ಆಸ್ಟ್ರೆಲಿಯಾ ಪ್ರವಾಸದ ಬಾರ್ಡರ್​-ಗಾವಸ್ಕರ್​ ಟ್ರೋಫಿ(IND vs AUS Test) ಟೆಸ್ಟ್​ ಸರಣಿಯ ಆರಂಭಿಕ ಎರಡು ಪಂದ್ಯಗಳ ಪೈಕಿ ಒಂದು ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ವೈಯಕ್ತಿಕ ಕಾರಣದಿಂದಾಗಿ ಒಂದು ಪಂದ್ಯಕ್ಕೆ ಗೈರಾಗುವುದಾಗಿ ರೋಹಿತ್​ ಈಗಾಗಲೆ ಬಿಸಿಸಿಐ ಜತೆಗೆ ಸಂವಹನ ನಡೆಸಿ ಒಪ್ಪಿಗೆ ಪಡೆದಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಈ ಪಂದ್ಯದಲ್ಲಿ ಭಾರತ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಚರ್ಚೆ ಕೂಡ ಜೋರಾಗಿದೆ. ಸದ್ಯಕ್ಕೆ ರೋಹಿತ್‌ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿಕೊಳ್ಳಲು ಮಾಜಿ ನಾಯಕ ವಿರಾಟ್‌ ಕೊಹ್ಲಿ(Virat Kohli), ರಿಷಭ್‌ ಪಂತ್‌ ಹೆಸರು ಕೇಳಿ ಬಂದಿದೆ.