ಹೈದರಾಬಾದ್: ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಟಾಲಿವುಡ್ನ ʼಪುಷ್ಪ 2ʼ (Pushpa 2) ಕೂಡ ಒಂದು. ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆ ಕಾಣಲಿರುವ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ (Allu Arjun)ಗೆ ಜೋಡಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಕಾಣಿಸಿಕೊಳ್ಳುತ್ತಿದ್ದಾರೆ. 2021ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್ನಲ್ಲಿ ಮ್ಯಾಜಿಕ್ ಮಾಡಿದ್ದ ಪ್ಯಾನ್ ಇಂಡಿಯಾ ಸಿನಿಮಾ ʼಪುಷ್ಪʼ ಚಿತ್ರದ ಮುಂದುವರಿದ ಭಾಗ ಇದು. ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಚಿತ್ರದ ಹಾಡುಗಳು, ಟೀಸರ್ ಈಗಾಗಲೇ ರಿಲೀಸ್ ಆಗಿ ಇಂಟರ್ನೆಟ್ನಲ್ಲಿ ಧೂಳೆಬ್ಬಿಸುತ್ತಿದೆ. ಆಗಸ್ಟ್ನಲ್ಲಿ ತೆರೆಕಾಣಬೇಕಿದ್ದ ಈ ಚಿತ್ರ ಡೆಸೆಂಬರ್ 6ರಂದು ಬಿಡುಗಡೆಯಾಗಲಿದೆ. ಇದೀಗ ಈ ಬಹು ನಿರೀಕ್ಷಿತ ಚಿತ್ರದ ಟ್ರೈಲರ್ ರಿಲೀಸ್ಗೆ ದಿನಾಂಕ ನಿಗದಿಯಾಗಿದೆ ಎನ್ನಲಾಗಿದೆ.
ʼಪುಷ್ಪʼ ಚಿತ್ರದಲ್ಲಿ ಅಲ್ಲು ಅರ್ಜುನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದುವರೆಗೆ ಸ್ಟೈಲಿಶ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು ಅದಕ್ಕೆ ಸಂಪೂರ್ಣ ವಿರುದ್ಧ ಪಾತ್ರ ನಿರ್ವಹಿಸಿದ್ದರು. ಹಳ್ಳಿ ಹೈದನ ಪಾತ್ರದಲ್ಲಿ ಮೋಡಿ ಮಾಡಿದ್ದರು. ಜತೆಗೆ ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಹೀಗಾಗಿ ʼಪುಷ್ಪ 2ʼ ಚಿತ್ರದ ಮೇಲೆ ನಿರೀಕ್ಷೆ ಮೂಡಿತ್ತು. ಅಲ್ಲದೆ ಮೊದಲ ಭಾಗದ ಕಥೆ ಕುತೂಹಲ ಘಟ್ಟದಲ್ಲಿ ಕೊನೆಯಾಗಿದ್ದು ಕೂಡ ಎರಡನೇ ಭಾಗಕ್ಕೆ ಕಾಯುವಂತೆ ಮಾಡಿದೆ.
#Pushpa2TheRule in cinemas from December 6th, 2024. pic.twitter.com/BySX31G1tl
— Allu Arjun (@alluarjun) June 17, 2024
ಈಗಾಗಲೇ ರಿಲೀಸ್ ಆಗಿರುವ ʻಪುಷ್ಪ ಪುಷ್ಪʼ ಎಂದು ಶುರುವಾಗುವ ಹಾಡಿಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದು, ಇದರಲ್ಲಿನ ಹುಕ್ ಸ್ಟೆಪ್ ವೈರಲ್ ಆಗಿದೆ. ʻಪುಷ್ಪ ಪುಷ್ಪʼ ಅಲ್ಲು ಅರ್ಜುನ್ ಪಾತ್ರವನ್ನು ಪರಿಚಯಿಸುವ ಹಾಡಾಗಿದ್ದು, ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಜತೆಗೆ ಶ್ರೇಯಾ ಘೋಷಾಲ್ ಧ್ವನಿ ನೀಡಿರುವ ಎರಡನೇ ಹಾಡು ಕೂಡ ವೈರಲ್ ಆಗಿದೆ. ಹೀಗಾಗಿ ಅಭಿಮಾನಿಗಳು ಟ್ರೈಲರ್ಗಾಗಿ ಕಾಯುತ್ತಿದ್ದಾರೆ.
ಟ್ರೈಲರ್ ರಿಲೀಸ್ ಯಾವಾಗ?
ಕೆಲವೊಂದು ವರದಿಗಳ ಪ್ರಕಾರ ನವೆಂಬರ್ ಮೊದಲ ವಾರದಲ್ಲಿ ʼಪುಷ್ಪ 2ʼ ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದೆ. ಆ ಮೂಲಕ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಹಬ್ಬದ ಕೊಡುಗೆ ನೀಡಲು ಚಿತ್ರತಂಡ ಯೋಜನೆ ರೂಪಿಸಿದೆ ಎನ್ನಲಾಗಿದೆ. ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರ ಬರಬೇಕಿದೆ.
ಮೈತ್ರಿ ಮೂವೀ ಮೇಕರ್ಸ್ ದುಬಾರಿ ಬಜೆಟ್ನಲ್ಲಿ ಚಿತ್ರ ನಿರ್ಮಿಸುತ್ತಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜತೆಗೆ ಫಹದ್ ಫಾಸಿಲ್, ಡಾಲಿ ಧನಂಜಯ್, ಅನಸೂಯಾ ಭಾರದ್ವಾಜ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದು ʼಪುಷ್ಪ 2ʼ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಟೀಸರ್ನಲ್ಲಿ ಅಲ್ಲು ಅರ್ಜುನ್ ಸೀರೆ ಉಟ್ಟು, ಮುಖವನ್ನು ನೀಲಿ ಮತ್ತು ಕೆಂಪು ಬಣ್ಣಗಳನ್ನು ಮೆತ್ತಿಕೊಂಡಿರುವುದು ಕಂಡು ಬಂದಿತ್ತು. ಭಾರವಾದ ಸಾಂಪ್ರದಾಯಿಕ ಚಿನ್ನ ಮತ್ತು ಹೂವಿನ ಆಭರಣಗಳೊಂದಿಗೆ ಮೇಕಪ್ ಧರಿಸಿ ಗೂಂಡಾಗಳನ್ನು ಹೊಡೆಯುತ್ತಿರುವುದನನು ನೋಡಿದ ವೀಕ್ಷಕರ ಕುತೂಹಲ ಕೆರಳಿತ್ತು. ಆಗಲೆ ಕಥೆಯ ಬಗ್ಗೆ ಚರ್ಚೆ ಆರಂಬವಾಗಿತ್ತು. ಜತೆಗೆ ಬಿಡುಗಡೆಯಾದ ಹಾಡುಗಳು ಕುತೂಹಲವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿವೆ. ವಿವಿಧ ಭಾರತೀಯ ಭಾಷೆಯ ಜತೆಗೆ ರಷ್ಯನ್ ಭಾಷೆಯಲ್ಲಿಯೂ ಸಿನಿಮಾ ತೆರೆ ಕಾಣಲಿದೆ.
ಈ ಸುದ್ದಿಯನ್ನೂ ಓದಿ: Rashmika Mandanna: ಮತ್ತೊಮ್ಮೆ ಮಿಲಾನ್ ಫ್ಯಾಷನ್ ವೀಕ್ನಲ್ಲಿ ರಶ್ಮಿಕಾ ಮಂದಣ್ಣ