Friday, 22nd November 2024

BBK 11: ನಮ್ಮ ಪ್ರೀತಿಗೆ ಭಾಗಿಯಾಗಿ, ಚಾಲೆಂಜ್ ಮಾಡ್ಬೇಡಿ: ವಾರದ ಕತೆಯಲ್ಲಿ ಕಿಚ್ಚನ ಖಡಕ್ ಕ್ಲಾಸ್

Varada kathe kicchana jothe (1)

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಎರಡನೇ ವಾರದ ಪಂಚಾಯಿತಿ ನಡೆಯುತ್ತಿದೆ. ವಾರದ ಕತೆ ಕಿಚ್ಚನ ಜೊತೆ ಶೋನಲ್ಲಿ ಕೆಲ ಮಹತ್ವದ ವಿಚಾರಗಳು ಚರ್ಚೆ ಆಗುತ್ತಿವೆ. ಈ ವಾರ ಸ್ಪರ್ಧಿಗಳು ಮಾಡಿದ ಕೆಲ ತಪ್ಪುಗಳನ್ನು ಸುದೀಪ್ ಎತ್ತಿ ತೋರಿಸಿದ್ದಾರೆ. ಹಾಗೆಯೆ ತಮ್ಮದೇ ಶೈಲಿಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವೆಲ್ಲ ನಮ್ಮ ಪ್ರೀತಿಗೆ ಭಾಗಿಯಾಗಿ ಆದರೆ ಚಾಲೆಂಜ್ ಹಾಕಬೇಡಿ ಎಂದು ಹೇಳಿದ್ದಾರೆ.

ಈ ವಾರ ಮನೆಯಲ್ಲಿ ಬಿಗ್‌ ಬಾಸ್‌ ಒಂದು ಟಾಸ್ಕ್‌ ನೀಡಿದ್ದರು. ನರಕದಿಂದ ಇಬ್ಬರನ್ನು ಹಾಗೂ ಸ್ವರ್ಗದಿಂದ ಒಬ್ಬರನ್ನು ನಾಮಿನೇಟ್‌ ಮಾಡುವುದುದಾಗಿ ಹೇಳಿದ್ದರು. ಆಗ ಗೌತಮಿ ಅವರು ಸ್ವರ್ಗದಲ್ಲಿ ನನ್ನನ್ನು ನಾನು ಸೇವ್‌ ಮಾಡಿಕೊಳ್ಳುತ್ತೇನೆ. ನರಕದಲ್ಲಿ ಜಗದೀಶ್‌ ಅವರನ್ನು ನಾನು ನಾಮಿನೇಟ್‌ ಮಾಡುತ್ತೇನೆ. ಎರಡನೇ ಹೆಸರು ಅನುಷಾ. ಮುಖ್ಯವಾದ ರೂಲ್ಸ್‌ ಬ್ರೇಕ್‌ ಮಾಡಿದ್ದೀರಿ. ಅನುಷಾ ಅವರನ್ನು ನೇರವಾಗಿ ನಾಮಿನೇಟ್‌ ಮಾಡುತ್ತೇನೆ. ಅವರು ಮೊದಲಿಗೆ ಪರದೆ ಹಿಂದೆ ನೋಡಿ ರೂಲ್ಸ್‌ ಬ್ರೇಕ್‌ ಮಾಡಿದ್ದು ಎಂದು ಹೇಳಿದ್ದರು.

ಇದಾದ ಬಳಿಕ ಅನುಷಾ ಅವರು ಕಣ್ಣೀರಿಟ್ಟಿದ್ದರು. ನಾನು ಮೊದಲು ಹೋಗಿದ್ದಲ್ಲ ಎಂದು ಹೇಳಿದ್ದರು. ಗೋಲ್ಡ್‌ ಸುರೇಶ್‌ ಜತೆಗೂ ಅನುಷಾ ಅವರು ಗಲಾಟೆ ಮಾಡಿಕೊಂಡರು. ಇದೀಗ ಕಿಚ್ಚ ಸುದೀಪ್ ಈ ವಿಚಾರವಾಗಿ ಮಾತನಾಡಿದ್ದಾರೆ. ಅನುಷಾ ರೈ ಹಾಗೂ ಗೋಲ್ಡ್‌ ಸುರೆಶ್‌ ವಿಚಾರವನ್ನು ಚರ್ಚೆ ಮಾಡಿದ್ದಾರೆ

ಸುದೀಪ್‌ ಅವರು ಮಾತನಾಡಿ, ಗೌತಮಿ ಅವರು ಅನುಷಾ ಅವರನ್ನು ಡೈರೆಕ್ಟ್‌ ಆಗಿ ನಾಮಿನೇಟ್‌ ಮಾಡುತ್ತೀರಿ. ಒಂದು ಚಿಕ್ಕ ಹೆಲ್ಪ್‌ ಕೂಡ ಬರತ್ತೆ ನಿಮಗೆ. ಮಾನಸ ಅವರನ್ನು ಒಳಗಡೆ ಹೋಗಿ ನೋಡಿ ಎಂದು ಹಾಕೊಟ್ಟಿದ್ದೇ ಸುರೇಶ್‌ ಅವರು. ಬಳಿಕ ಸುರೇಶ್‌ ಅವರು ಮಾತನಾಡಿ ಮಾನಸ ಹೋಗಿ ಬಂದರು ಏನು ಕಾಣಿಸಿಲ್ಲ ಎಂದರು. ಅದೇ ಸಮಯಕ್ಕೆ ಅನುಷಾ ಅವರು ನಾನು ಸುರೇಶ್‌ ಅವರನ್ನು ಅಣ್ಣ ಎಂದು ಅಂದುಕೊಂಡಿದ್ದೆ ಎಂದರು.

ಇದಕ್ಕೆ ಕಿಚ್ಚ ಗರಂ ಆದರು. ನೀವು ಅನುಷಾ ಅವರೇ ಒಂದು ಕೆಲಸ ಮಾಡಿ. ಅಣ್ಣ ಅಂತ ಬಾಯಿ ತುಂಬ ಕರೀತೀನಿ ಅಂತ ಸುರೇಶ್‌ ಸೋಲೋದು ಇಷ್ಟ ಅಲ್ಲ ಮನೆಗೆ ಹೋಗುತ್ತೀನಿ. ಇಲ್ಲ ಅಯ್ಯೋ ತಂಗಿ ನೀನೆ ಗೆಲ್ಲು ಅಂತ ಚಿನ್ನ ಬಿಚ್ಚಿಟ್ಟು ಹೋಗ್ತೀನಿ ಅಂತ ಸುರೆಶ್ ಹೇಳ್ತಾರಾ ಕೇಳಿ ಎಂದಿದ್ದಾರೆ. ಗೊತ್ತಿದ್ದು ಮಾಡಿದ್ರೆ ಮಿಸ್ಟೇಕ್‌ ಅನ್ನಲ್ಲ ಮಿಸ್ಟರ್‌, ಚಾಲೆಂಜಿಂಗ್‌ ಅಂತಾರೆ. ನಮ್ಮ ಪ್ರೀತಿಗೆ ಭಾಗಿಯಾಗಿ ಚಾಲೆಂಜ್‌ ಮಾಡಬೇಡಿ ಎಂದು ಸುದೀಪ್ ಅವರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

BBT 8: ಬಿಗ್ ಬಾಸ್ ತಮಿಳಿನಲ್ಲಿ ಮತ್ತೊಂದು ಟ್ವಿಸ್ಟ್: 24 ಗಂಟೆಯಲ್ಲಿ ಎಲಿಮಿನೇಟ್ ಆಗಿದ್ದ ಸ್ಪರ್ಧಿ ಕಮ್​ಬ್ಯಾಕ್