Wednesday, 6th November 2024

BBT 8: ಬಿಗ್ ಬಾಸ್ ತಮಿಳಿನಲ್ಲಿ ಮತ್ತೊಂದು ಟ್ವಿಸ್ಟ್: 24 ಗಂಟೆಯಲ್ಲಿ ಎಲಿಮಿನೇಟ್ ಆಗಿದ್ದ ಸ್ಪರ್ಧಿ ಕಮ್​ಬ್ಯಾಕ್

Sachana Namidass

ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ಇದೀಗ ಕನ್ನಡ ಸೇರಿದಂತೆ ತಮಿಳು ಮತ್ತು ಹಿಂದಿಯಲ್ಲೂ ಪ್ರಾರಂಭವಾಗಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಳ್ಳುತ್ತಿದ್ದರೆ, ತಮಿಳಿನಲ್ಲಿ ಇದೇ ಮೊದಲ ಬಾರಿಗೆ ವಿಜಯ್ ಸೇತುಪತಿ ನಿರೂಪಕರಾಗಿದ್ದಾರೆ. ತಮಿಳು ಬಿಗ್ ಬಾಸ್ ಸೀಸನ್ 8 ಆಕ್ಟೋಬರ್ 6 ರಂದು ಶುರುವಾಯಿತು. ಆದರೆ, ಶೋ ಆರಂಭವಾದ 24 ಗಂಟೆಯೊಳಗೆನೇ ನಟಿ ಸಚಾನಾ ನಮಿದಾಸ್ ಮನೆಯಿಂದ ಔಟ್ ಆದರು

ಇದೀಗ ಮೊದಲ ದಿನವೇ ಬಿಗ್ ಬಾಸ್ ಮನೆಯಿಂದ ಹೊರಹಾಕಲ್ಪಟ್ಟ ಸಚಾನಾ ಬಿಗ್ ಬಾಸ್ ಮನೆಗೆ ಮರುಪ್ರವೇಶ ಮಾಡಿದ್ದಾರೆ. ಇವರನ್ನು ಮತ್ತೊಮ್ಮೆ ಕಂಡು ಎಲ್ಲಾ ಸ್ಪರ್ಧಿಗಳು ಸಂಭ್ರಮಿಸಿದ್ದಾರೆ. ಸ್ಪರ್ಧಿಗಳ ಮುಂದೆ ಮಾತನಾಡಿದ ಸಚನಾ, ಈ ಮನೆಯಲ್ಲಿ ಯಾರು ಕಡಿಮೆ ಕಂಟೆಂಟ್ ಕೊಡ್ತಾರೆ ಅಂತ ಹೇಳಿದ್ದಾರೆ. ಅದರಲ್ಲಿ ರಂಜಿತ್, ಸತ್ಯ ಮತ್ತು ವಿಜೆ ವಿಶಾಲ್ ಎಂಬ ಮೂವರ ಹೆಸರನ್ನು ಉಲ್ಲೇಖಿಸಿದ್ದಾರೆ.

ತಮಿಳಿನಲ್ಲಿ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿ ಸೂಪರ್ ಡೂಪರ್ ಹಿಟ್ ಆಗಿದ್ದ ಸಿನಿಮಾ ಮಹಾರಾಜದಲ್ಲಿ ವಿಜಯ್ ಸೇತುಪತಿ ಅವರ ಮಗಳ ಪಾತ್ರದಲ್ಲಿ ಸಚಾನಾ ನಮಿದಾಸ್ ಅದ್ಭುತವಾಗಿ ನಟಿಸಿದ್ದರು. ಇವರು ಅತ್ಯಂತ ಕಿರಿಯ ವಯಸ್ಸಿನ ಸ್ಪರ್ಧಿ. ಇದೀದ ಬಿಗ್ ಬಾಸ್ ಮನೆಗೆ ಮತ್ತೊಮ್ಮೆ ಕಾಲಿಟ್ಟಿರುವ ಸಚಾನಾ ಮೇಲೆ ದೊಡ್ಡ ನಿರೀಕ್ಷೆ ಇದೆ.

ಬಿಗ್ ಬಾಸ್ ತಮಿಳು ಸೀಸನ್ 8 ಕೂಡ ರೋಚಕತೆ ಸೃಷ್ಟಿಸಿದೆ. ಮನೆಯ ಕ್ಯಾಪ್ಟನ್ ಆಗಿ ದರ್ಶಿಕಾ ಆಯ್ಕೆ ಆಗಿದ್ದಾರೆ. ಇನ್ನು ಈ ವಾರ ಮನೆಯಿಂದ ಹೊರಹೋಗಲು ರವೀಂದರ್ ಚಂದ್ರಶೇಖರ್, ಅರುಣ್ ಪ್ರಸಾದ್, ಜಾಕ್ವೆಲಿನ್, ಮುತ್ತು ಕುಮಾರ್, ಸೌಂದರ್ಯ ಮತ್ತು ರಂಜಿತ್ ನಾಮಿನೇಟ್ ಆಗಿದ್ದಾರೆ. ಅವರಲ್ಲಿ ಒಬ್ಬರು ಈ ವಾರ ಹೊರಹೋಗಲಿದ್ದಾರೆ.

Bigg Boss Kannada 11: ಸ್ವರ್ಗ-ನರಕ ಕಾನ್ಸೆಪ್ಟ್ ಎರಡೇ ವಾರಕ್ಕೆ ಕೊನೆಗೊಳ್ಳಲು ಏನು ಕಾರಣ?: ಇಲ್ಲಿದೆ ನೋಡಿ