Monday, 18th November 2024

Pakistan Team Announced: ಮುಲ್ತಾನ್‌ ಟೆಸ್ಟ್‌ ಪಂದ್ಯಕ್ಕೆ ಪಾಕಿಸ್ತಾನ ತಂಡ ಪ್ರಕಟ

ಇಂಗ್ಲೆಂಡ್‌ ವಿರುದ್ದದ ಮೊದಲ ಟೆಸ್ಟ್‌ ಪಂದ್ಯದಲ್ಲಿನ ಹೀನಾಯ ಸೋಲಿನ ಬಳಿಕ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(PCB), ಮುಲ್ತಾನ್‌ ಟೆಸ್ಟ್‌ʼಗೆ (Multan Test) ತಂಡ ಪ್ರಕಟಿಸಿದೆ.

ಎರಡನೇ ಟೆಸ್ಟ್‌ ಪಂದ್ಯಕ್ಕೆ ಪಾಕಿಸ್ತಾನ ತಂಡದಲ್ಲಿ ಮೂವರು ಸ್ಪೆಷಲಿಸ್ಟ್‌ ಸ್ಪಿನ್ನರ್‌ (Three specialist spinners) ಸ್ಥಾನ ಪಡೆದುಕೊಂಡಿದ್ದಾರೆ. ಮಾಜಿ ನಾಯಕ ಬಾಬರ್‌ ಆಜಂ(Babar Azam) ಅವರ ಸ್ಥಾನಕ್ಕೆ ಕಮ್ರಾನ್‌ ಗುಲಾಂ(Kamran Ghulam) ಅವರು ತಂಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಮೊದಲ ಟೆಸ್ಟ್‌ ನ ಸೋಲಿನ ನಂತರ, ಶಹೀನ್‌ ಅಫ್ರಿದಿ (Shaheen Afridi) , ನಸೀಮ್‌ಶಾ(Naseem Shah), ಅಬ್ರಾರ್‌ ಅಹ್ಮದ್‌(Abrar Ahmed) ಹಾಗೂ ಮಾಜಿ ನಾಯಕ ಬಾಬರ್‌ ಅಜಂ ಮುಂತಾದವರಿಗೆ ಸ್ಥಾನ ನೀಡಲಾಗಿಲ್ಲ.

ಮೊದಲ ಟೆಸ್ಟ್‌ ಪಂದ್ಯದ ಸೋಲಿನ ಬಳಿಕ, ನೇಮಕಗೊಂಡ ನೂತನ ಆಯ್ಕೆ ಸಮಿತಿ ಸದಸ್ಯರು, ಸುಮಾರು ಒಂದು ಗಂಟೆಯ ಚರ್ಚೆಯ ಬಳಿಕ ಎರಡನೇ ಟೆಸ್ಟ್‌ ಪಂದ್ಯದ ಮುನ್ನ ತಂಡದಲ್ಲಿ ಭಾರೀ ಬದಲಾವಣೆ ತರುವ ನಿರ್ಧಾರ ಕೈಗೊಂಡಿದ್ದಾರೆ.

ಪಾಕಿಸ್ತಾನ ತಂಡದಲ್ಲಿ ಏಕೈಕ ವೇಗಿ ಇದ್ದು, ಆಮೀರ್‌ ಜಮಾಲ್‌(Aamir Jamal) ಆಗಿದ್ದಾರೆ. ಸ್ಪಿನ್ನರುಗಳ ಪೈಕಿ, ಸಾಜಿದ್‌ ಅವರು ಕಳೆದ ಸಿಡ್ನಿ ಪಂದ್ಯದಲ್ಲಿ ಅಮೋಘ ನಿರ್ವಹಣೆ ತೋರಿದ್ದರು. ಎರಡನೇ ಪಂದ್ಯಕ್ಕೆ ಆಯ್ಕೆಯಾದ ನೋಮನ್‌ಅಲಿ ಅವರು ಜುಲೈ 2023ರಲ್ಲಿ ಕೋಲಂಬೋ ಟೆಸ್ಟ್‌ ಪಂದ್ಯದಲ್ಲಿ ಏಳು ವಿಕೆಟ್‌ ಕಬಳಿಸಿ, ತಂಡಕ್ಕೆ ಗೆಲುವನ್ನು ತಂದಿಟ್ಟಿದ್ದರು. ಇಂಗ್ಲೆಂಡ್‌ ವಿರುದ್ದದ ಸರಣೀಗೆ ಸ್ಪಿನ್ನರುಗಳ ಆಯ್ಕೆಯಾಗಿದ್ದರೂ, ಮೊದಲ ಟೆಸ್ಟ್‌ ಆರಂಭವಾಗುವ ಮೊದಲ ದಿನವೇ ತಂಡದಿಂದ ಬಿಡುಗಡೆಯಾಗಿ ತವರಿಗೆ ಮರಳಿದ್ದರು.

ಬಾಬರ್‌ ಸ್ಥಾನಕ್ಕೆ ಆಯ್ಕೆಯಾಗಿರುವ ಗುಲಾಂ ಅವರು ಮೊದಲ ದರ್ಜೆ ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ತೋರಿ ದ್ದಾರೆ. 49.72 ಸರಾಸರಿಯಲ್ಲಿ 4525 ರನ್‌ ಗಳಿಸಿದ್ದಾರೆ. 29ರ ಹರೆಯದ ಬಲಗೈ ಆಟಗಾರ 13 ಮೊದಲ ದರ್ಜೆ ಶತಕ ಗಳಿಸಿದ್ದಾರೆ.

ಗುಲಾಂ ಕಳೆದ ವರ್ಷ ಬಾಂಗ್ಲಾದೇಶ ವಿರುದ್ದದ ಸರಣಿಗೆ ಆಯ್ಕೆಯಾಗಿದ್ದರು. ಆದರೆ ಮುಲ್ತಾನ್‌ ಟೆಸ್ಟ್‌ ಪಂದ್ಯದ ವೇಳೆ ಹೊರ ಬಿದ್ದದ್ದರು. 2022-23ರಲ್ಲಿ ಕಿವೀಸ್‌ ವಿರುದ್ದದ ಎರಡು ಟೆಸ್ಟ್‌ ಪಂದ್ಯಕ್ಕಾಗಿ ಕರೆ ಪಡೆದಿದ್ದರು. 2020-21 ರಲ್ಲಿ ಗುಲಾಮ್‌ ಮೊದಲ ದರ್ಜೆ ಪಂದ್ಯದಲ್ಲಿ ಅತೀ ಹೆಚ್ಚು ರನ್‌ ಬಾರಿಸಿ ದಾಖಲೆ ನಿರ್ಮಿಸಿದರು. ಈ ವೇಳೆ ವರ್ಷದ ದೇಶೀಯ ಕ್ರಿಕೆಟಿಗ ಎಂಬ ಪ್ರಶಸ್ತಿಗೆ ಭಾಜನರಾದರು.

2021ರ ಫೆಬ್ರವರಿಯಿಂದ ಪಾಕಿಸ್ತಾನ ತಂಡ ಮಸೂದ್‌ ಅವರ ನಾಯಕತ್ವದಲ್ಲಿ ಸಾಲು ಸಾಲು ಆರು ಟೆಸ್ಟ್‌ ಪಂದ್ಯಗಳಲ್ಲಿ ಸೋಲನುಭವಿಸಿದೆ.

ಇದನ್ನೂ ಓದಿ: Babar Azam: ಪಾಕ್‌ ತಂಡದಿಂದ ಬಾಬರ್‌ಗೆ ಗೇಟ್‌ಪಾಸ್‌