ಬಹ್ರೈಚ್: ಉತ್ತರ ಪ್ರದೇಶದ (Uttarpradesh) ಬಹ್ರೈಚ್ ಜಿಲ್ಲೆಯಲ್ಲಿ ಅಕ್ಟೋಬರ್ 13ರಂದು ದುರ್ಗಾ ಮಾತೆಯ ವಿಗ್ರಹದ ಮೆರವಣಿಗೆ (procession) ವೇಳೆ ಇಸ್ಲಾಮಿಸ್ಟ್ ಗುಂಪು ಕಲ್ಲು ತೂರಾಟ (Islamist Attack) ನಡೆಸಿದ್ದು, ರಾಮ್ ಗೋಪಾಲ್ ಮಿಶ್ರಾ (Ram Gopal Mishra) ಎಂಬುವರ ಮೃತಪಟ್ಟಿದ್ದಾರೆ. ಅಂದಹಾಗೆ ಅವರಿಗೆ ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಕಲ್ಲು ತೂರಾಟಕ್ಕೆ ಸಂಬಂಧಿಸಿ ಅಬ್ದುಲ್ ಹಮೀದ್, ಸರ್ಫರಾಜ್, ಫಹೀಮ್ ಮತ್ತು ಸಾಹಿರ್ ಖಾನ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಂತಕರು ನೇಪಾಳದಲ್ಲೂ ದುಷ್ಕೃತ್ಯಗಳನ್ನು ನಡೆಸಿದ್ದರು ಎಂಬುದಾಗಿ ಗೊತ್ತಾಗಿದೆ.
ತಂದೆ ಆರೋಗ್ಯ ಕೆಟ್ಟಿದೆ, ಹೆಂಡತಿ ವಿಧವೆ
ರಾಮಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ರೆಹುಯಾ ಮನ್ಸೂರ್ ಗ್ರಾಮದಲ್ಲಿ ವಾಸಿಸುತ್ತಿದ್ದ ರಾಮ್ ಗೋಪಾಲ್ ಮಿಶ್ರಾ ಮೂವರು ಸಹೋದರರಲ್ಲಿ ಕಿರಿಯವರು. ಕೇವಲ 22 ವರ್ಷದ ಅವರ ತಂದೆ ಕೈಲಾಸನಾಥ್ ಅವರಿಗೆ 75 ವರ್ಷ. ಕಿರಿಯ ಮಗನ ಸಾವಿನ ಅನಂತರ ಅವರ ಆರೋಗ್ಯ ಹದಗೆಟ್ಟಿದೆ.
ಕೂಲಿ, ಕೃಷಿ ಮಾಡುತ್ತಾ ಜೀವನ ಸಾಗಿಸುತ್ತಿದ್ದ ರಾಮ್‌ಗೋಪಾಲ್ ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಪತಿಯ ಹತ್ಯೆಯ ಸುದ್ದಿ ಕೇಳಿ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎಂದು ರಾಮ್ ಸಹೋದರ ಹರಿಮಿಲನ್ ಹೇಳಿದ್ದಾರೆ.
ಪೊಲೀಸರು ಲಾಠಿ ಚಾರ್ಜ್ ಮಾಡದೇ ಇದ್ದಿದ್ದರೆ ನನ್ನ ಸಹೋದರ ಬದುಕಿರುತ್ತಿದ್ದ ಎಂದಿರುವ ಹರಿಮಿಲನ್, ನಮ್ಮ ಕುಟುಂಬಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿರುವ ಅವರು, ಘಟನೆ ವೇಳೆ ಪೊಲೀಸರು ನಡೆದುಕೊಂಡ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದುರ್ಗಾ ವಿಗ್ರಹ ವಿಸರ್ಜನಾ ಮೆರವಣಿಗೆ ವೇಳೆ ಅಬ್ದುಲ್ ಹಮೀದ್ ಅವರ ಮನೆಯಿಂದ ಆರಂಭದಲ್ಲಿ ಕಲ್ಲು ತೂರಾಟ ನಡೆಸಲಾಯಿತು. ಇದರಿಂದಾಗಿ ವಿಗ್ರಹದ ಕೈ ಮುರಿಯಿತು. ಈ ನಡುವೆ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ದುಷ್ಕರ್ಮಿಗಳು ಈ ಅವ್ಯವಸ್ಥೆಯನ್ನು ಬಳಸಿಕೊಂಡರು. ರಾಮ್ ಗೋಪಾಲ್ ಅವರನ್ನು ಮನೆಗೆ ಎಳೆದೊಯ್ದು ಕ್ರೂರವಾಗಿ ಹತ್ಯೆ ಮಾಡಿದ್ದಾರೆ.
ಪೊಲೀಸರು ಲಾಠಿ ಚಾರ್ಜ್ ಮಾಡದಿದ್ದರೆ ಹಿಂದೂಗಳು ಒಟ್ಟಿಗೆ ಇರುತ್ತಿದ್ದರು. ನಮ್ಮ ಸಹೋದರ ಜೀವಂತವಾಗಿರುತ್ತಿದ್ದ ಎಂದು ಹರಿಮಿಲನ್ ಹೇಳಿದ್ದಾರೆ. ಮಹಾರಾಜ್‌ಗಂಜ್‌ನಲ್ಲಿ ದಾಳಿ ನಡೆದ ಸ್ಥಳವು ಮುಸ್ಲಿಂ ಪ್ರಾಬಲ್ಯದ ಪ್ರದೇಶವಾಗಿದೆ. ರಸ್ತೆಯಲ್ಲಿ ನಿಂತಿದ್ದ ಕೆಲವು ಮುಸ್ಲಿಂ ಯುವಕರು ಹೋಳಿ ಬಣ್ಣದ ಹೆಸರಿನಲ್ಲಿ ಸಮಸ್ಯೆ ಹುಟ್ಟುಹಾಕಿದರು ಎಂದು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಲಲಿತ್ ಹೇಳಿದ್ದಾರೆ.
ಪೊಲೀಸರು ಮೂಕಪ್ರೇಕ್ಷಕರಂತೆ ವರ್ತಿಸಿದ್ದರಿಂದ ಅಬ್ದುಲ್ ಹಮೀದ್ ಅವರ ಮನೆಯಿಂದ ಕಲ್ಲು ತೂರಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಕಲ್ಲು ತೂರಾಟದ ವೇಳೆ ವಿಗ್ರಹದ ಕೈ ಮುರಿದಿರುವುದು ಹಿಂದೂ ಭಕ್ತರನ್ನು ಕೆರಳಿಸಿದೆ. ಅಬ್ದುಲ್ ಹಮೀದ್ ಅವರ ನಿವಾಸದಲ್ಲಿ ರಾಮ್ ಗೋಪಾಲ್ ಮಿಶ್ರಾ ಅವರ ಮೃತದೇಹ ಪತ್ತೆಯಾಗಿದೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ಕೆಲವು ಭಕ್ತರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಲೆಗಾರರಿಗೆ ನೇಪಾಳ ಸಂಪರ್ಕ
ಮೆರವಣಿಗೆ ವೇಳೆ ನಡೆದ ದಾಳಿಯ ಹಿಂದೆ ಅಬ್ದುಲ್ ಹಮೀದ್ ಪ್ರಮುಖ ಪಾತ್ರವಿದ್ದು, ಆತನ ಇಬ್ಬರು ಮಕ್ಕಳಾದ ಸರ್ಫರಾಜ್ ಮತ್ತು ಫಹೀಂ ದಾಳಿಯ ಆರೋಪಿಗಳೆಂದು ಗುರುತಿಸಲಾಗಿದೆ. ಅಬ್ದುಲ್ ಹಮೀದ್ ನೇಪಾಳದಲ್ಲಿ ನೆಲೆಸಿರುವ ಒಬ್ಬ ಮಗನಿದ್ದಾನೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ನೇಪಾಳದಲ್ಲಿರುವ ಇವರು ದೇಶ ವಿರೋಧಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ನೇಪಾಳದ ಬಂಕೆ ಜಿಲ್ಲೆಯ ಫುಲ್ಟೆಕ್ರಾ ಬಳಿಯ ಮದ್ರಸಾಗೆ ಭೇಟಿ ನೀಡುತ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ.
Predator drones: 31 ಪ್ರಿಡೇಟರ್ ಡ್ರೋನ್‌ಗಳ ಖರೀದಿಗೆ ಅಮೆರಿಕ ಜತೆ ಭಾರತ ಒಪ್ಪಂದ
ರಾಮ್ ಗೋಪಾಲ್ ಹತ್ಯೆಯ ಅನಂತರ ಅಬ್ದುಲ್ ಹಮೀದ್ ಕುಟುಂಬ ಭಾರತದ ಗಡಿ ದಾಟಿ ನೇಪಾಳಕ್ಕೆ ಪರಾರಿಯಾಗಿದೆ ಎನ್ನಲಾಗಿದೆ. ಆರೋಪಿಗಳ ಮನೆಯನ್ನು ಧ್ವಂಸಗೊಳಿಸಲು ಅನೇಕರು ಒತ್ತಾಯಿಸಿದ್ದಾರೆ. ಮೃತರ ಕುಟುಂಬಕ್ಕೆ ಆರ್ಥಿಕ ನೆರವು ಮತ್ತು ಸರ್ಕಾರಿ ಉದ್ಯೋಗ ನೀಡುವಂತೆಯೂ ಮನವಿ ಸಲ್ಲಿಸಲಾಗಿದೆ.