ರಾಯ್ಪುರ: ಪೊಲೀಸ್ ಹೆಡ್ಕಾನ್ಸ್ಟೇಬಲ್ ಮನೆಗೆ ನುಗ್ಗಿದ ದುಷ್ಕರ್ಮಿಯೋರ್ವ ಆತನ ಪತ್ನಿ ಮತ್ತು ಮಗಳನ್ನು ನಿರ್ದಯವಾಗಿ ಹತ್ಯೆಗೈದಿರುವ ಘಟನೆ ಛತ್ತೀಸ್ಗಢದಲ್ಲಿ(Chhattisgarh Horror) ನಡೆದಿದೆ. ಸೂರಜ್ಪುರ ಜಿಲ್ಲೆಯಲ್ಲಿ ಈ ಭೀಕರ ಘಟನೆ ನಡೆದಿದ್ದು, ಪೊಲೀಸ್ ಹೆಡ್ ಕಾನ್ಸ್ಟೇಬಲ್ ತಾಲಿಬ್ ಶೇಖ್ ಅವರ ಪತ್ನಿ ಮತ್ತು ಮಗಳನ್ನು ಕುಖ್ಯಾತ ಪಾತಕಿ ಕುಲದೀಪ್ ಸಾಹು ಕೊಲೆಗೈದಿದ್ದಾನೆ. ಭೀಕರ ಕೊಲೆ ಬಳಿಕ ಮೃತದೇಹವನ್ನು ಅರೆಬೆತ್ತಲೆ ಮಾಡಿ ಎಸೆದು ವಿಕೃತಿ ಮೆರೆದಿದ್ದಾನೆ.
ಆರೋಪಿಗಳು ಕಾನ್ಸ್ಟೆಬಲ್ ನಿವಾಸಕ್ಕೆ ನುಗ್ಗಿ, ಅವರ ಪತ್ನಿ ಮತ್ತು ಮಗಳನ್ನು ಕತ್ತಿಯಿಂದ ಸೀಳಿ ಬರ್ಬರವಾಗಿ ಹತ್ಯೆಗೈದಿದ್ದು, ಐದು ಕಿಲೋಮೀಟರ್ ದೂರದಲ್ಲಿರುವ ಕಾಲುವೆ ಬಳಿ ಶವಗಳನ್ನು ಎಸೆದಿದ್ದಾರೆ. ಇನ್ನು ಈ ಘೋರ ಕೃತ್ಯ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
ಘಟನೆ ಹಿನ್ನೆಲೆ
ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಪೊಲೀಸ್ ಕಾನ್ಸ್ಟೇಬಲ್ ಘನಶ್ಯಾಮ್ ಸೋನ್ವಾನಿ ಮತ್ತು ಸಾಹು ನಡುವೆ ಭಾರೀ ಗಲಾಟೆಯಾಗಿತ್ತು. ಈ ವೇಳೆ ಸಾಹು ಕುದಿಯುವ ಎಣ್ಣೆಯನ್ನು ಘನಶ್ಯಾಮ್ ಮೇಲೆ ಎರಚಿ ಪರಾರಿಯಾಗಿದ್ದ. ಇತ್ತ ಗಂಭೀರವಾಗಿ ಗಾಯಗೊಂಡಿದ್ದ ಘನಶ್ಯಾಮ್ ಅವರನ್ನು ಕಾನ್ಸ್ಟೆಬಲ್ನನ್ನು ಚಿಕಿತ್ಸೆಗಾಗಿ ಅಂಬಿಕಾಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿತ್ತು. ಆ ರಾತ್ರಿಯ ನಂತರ, ಪೊಲೀಸರು ಸಾಹುಗಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಈ ಕಾರ್ಯಾಚರಣೆ ವೇಳೆ ಹೆಡ್ ಕಾನ್ಸ್ಟೇಬಲ್ ತಾಲಿಬ್ ಶೇಖ್ ಸಕ್ರಿಯವಾಗಿ ಪಾಲ್ಗೊಂಡಿದ್ದ. ಕಾರ್ಯಾಚರಣೆ ವೇಳೆ ಶೇಖ್ ಮೇಲೆ ಸಾಹು ಕತ್ತಿಯಿಂದ ಅಟ್ಯಾಕ್ ಮಾಡಿದ್ದ.
ಈ ಘರ್ಷಣೆಯ ನಂತರ, ಸಾಹು ನೇರವಾಗಿ ಶೇಖ್ ಅವರ ನಿವಾಸಕ್ಕೆ ನುಗ್ಗಿದ್ದಾನೆ ಅಲ್ಲಿ ಆತ ಶೇಖ್ ಅವರ ಪತ್ನಿ ಮೆಹು ಫೈಜ್ ಮತ್ತು 16 ವರ್ಷದ ಮಗಳು ಅಲಿಯಾ ಶೇಖ್ ಅವರನ್ನು ಕತ್ತು ಸೀಳಿ ಬರ್ಬರವಾಗಿ ಕೊಂದಿದ್ದಾನೆ. ರಾತ್ರಿ ಗಸ್ತಿನಿಂದ ಮನೆಗೆ ಹಿಂದಿರುಗಿದ ಶೇಖ್, ರಕ್ತಸಿಕ್ತ ದೃಶ್ಯವನ್ನು ಕಂಡು ಆಘಾತಕ್ಕೀಡಾಗಿದ್ದಾನೆ. ಮತ್ತು ಅವರ ಕುಟುಂಬವು ಕಾಣೆಯಾಗಿರುವುದು ಕಂಡು ಆತಂಕಕ್ಕೀಡಾಘಿ ಶೋಧ ಕಾರ್ಯ ನಡೆಸಿದ್ದಾರೆ. ಮರುದಿನ ಬೆಳಿಗ್ಗೆ, ಎರಡೂ ಶವಗಳು ತಮ್ಮ ನಿವಾಸದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಜೂರ್-ಪೀಡಾ ರಸ್ತೆಯ ಹೊಲದ ಬಳಿ ಅರೆ-ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿವೆ. . ತಲೆಮರೆಸಿಕೊಂಡಿರುವ ಸಾಹುಗಾಗಿ ಅಧಿಕಾರಿಗಳು ವ್ಯಾಪಕ ಶೋಧ ನಡೆಸಿದ್ದಾರೆ.
ಈ ಕ್ರೂರ ಘಟನೆ ಸ್ಥಳೀಯರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಾಹು ಮನೆ ಮತ್ತು ಗೋದಾಮಿನ ಹೊರಗೆ ಜನಸಮೂಹ ವಾಹನಗಳಿಗೆ ಬೆಂಕಿ ಹಚ್ಚಿತು. ಪ್ರತಿಭಟನಾಕಾರರು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಅವರ ಮೇಲೂ ಹಲ್ಲೆ ನಡೆಸಿದರು ಮತ್ತು ನಗರದಲ್ಲಿ ಬಂದ್ ಗೆ ಕರೆ ನೀಡಿದ್ದಾರೆ. ನಂತರ ಸೂರಜ್ಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಪೊಲೀಸರು ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Ratan Tata: ರತನ್ ಟಾಟಾ ಬಗ್ಗೆ ನೆಚ್ಚಿನ ಗೆಳೆಯ ಶಾಂತನು ಹೇಳಿದ್ದೇನು? ಭಾರೀ ವೈರಲ್ ಆಗ್ತಿದೆ ಇನ್ಸ್ಟಾ ಪೋಸ್ಟ್