Monday, 25th November 2024

World Record: ವಿಶ್ವದಲ್ಲೇ ಅತೀ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ ಇವರು!

World Record

ಗರ್ಭದಲ್ಲಿ ಮಗುವನ್ನು ಧರಿಸುವುದು, ಬೆಳೆಸುವುದು ಬಹುದೊಡ್ಡ ಜವಾಬ್ದಾರಿಯಾಗಿದೆ. ಅದಕ್ಕಾಗಿ ಬಹಳಷ್ಟು ಪ್ರೀತಿ, ಬದ್ಧತೆ ಬೇಕಾಗುತ್ತದೆ. ಸಾಕಷ್ಟು ಸಂಪನ್ಮೂಲಗಳ ಅಗತ್ಯವಿರುತ್ತದೆ. ಹೀಗಿರುವಾಗ ಈಗಿನ ಕಾಲದಲ್ಲಿ ಒಂದೆರಡು ಮಗು ಹೆರುವುದೇ (Giving Birth) ಕಷ್ಟ. ಅಂಥದ್ದರಲ್ಲಿ ಈ ಮಹಿಳೆ (Russian Woman) ಬರೋಬ್ಬರಿ 69 ಮಕ್ಕಳಿಗೆ ಜನ್ಮ ನೀಡಿದ್ದು, ವಿಶ್ವ ದಾಖಲೆ (World Record) ಬರೆದಿದ್ದಾರೆ.

ರಷ್ಯಾದ ನಿವಾಸಿ ವಾಸಿಲಿಯೆವ್ ಎಂಬ ಮಹಿಳೆ 1725 ಮತ್ತು 1765ರ ನಡುವೆ 69 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಾಸ್ಕೋದಲ್ಲಿ ಸರ್ಕಾರಕ್ಕೆ ನೀಡಿರುವ ಸ್ಥಳೀಯ ಮಾಹಿತಿಯ ಪ್ರಕಾರ ರಷ್ಯಾದ ರೈತ ಫಿಯೋಡರ್ ವಾಸಿಲಿವ್ ಅವರ ಪತ್ನಿ ವಾಸಿಲಿಯೆವ್ ಅವರು 16 ಜೋಡಿ ಅವಳಿಗಳಿಗೆ, ಏಳು ಜೋಡಿ ತ್ರಿವಳಿಗಳಿಗೆ ಮತ್ತು ನಾಲ್ಕು ಬಾರಿ ತಲಾ ನಾಲ್ಕು ಮಕ್ಕಳಿಗೆ ಜನ್ಮ ನೀಡಿದರು. ಇವೆಲ್ಲವೂ 1725 ಮತ್ತು 1765 ನಡುವೆ ನಡೆದಿದೆ. ಒಟ್ಟು 69 ಮಕ್ಕಳು ಜನಿಸಿದ್ದಾರೆ.

ವಾಸಿಲಿಯೆವ್ ಅವರು ಒಟ್ಟು 27 ಬಾರಿ ಗರ್ಭ ಧರಿಸಿದ್ದರು. ಈ ಮಾಹಿತಿ ಅಸಂಭವವೆಂದು ಕಾಣುತ್ತಿದೆಯಾದರೂ ಹಲವಾರು ಸಮಕಾಲೀನ ದಾಖಲೆಗಳು ನಿಜವೆಂದು ಹೇಳಿವೆ. ಫಿಯೋಡರ್ ನ ಎರಡನೇ ಪತ್ನಿ ಎಂಟು ಬಾರಿ ಗರ್ಭಿಣಿಯಾಗಿದ್ದು, 18 ಮಕ್ಕಳಿಗೆ ಜನ್ಮ ನೀಡಿದ್ದಳು. ವಾಸಿಲಿಯೆವ್ ಅವರ ಇಬ್ಬರು ಹೆಂಡತಿಯರಿಗೆ ಜನಿಸಿದ 87 ಮಕ್ಕಳಲ್ಲಿ 84 ಮಂದಿ ಮಾತ್ರ ಬದುಕುಳಿದರು. ಉಳಿದ 7 ಮಕ್ಕಳು ಹುಟ್ಟಿದ ಕೆಲವೇ ದಿನಗಳಲ್ಲಿ ಸತ್ತರು ಎನ್ನಲಾಗಿದೆ.

ವಾಸಿಲಿವ್ ಅವರ ಹೆಸರನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಿಸಲಾಗಿದ್ದು, ‘ಅತ್ಯಂತ ಸಮೃದ್ಧ ತಾಯಿ’ ಎಂದು ಹೆಸರಿಸಲಾಗಿದೆ.

World Record

ಈ ಕುರಿತು ಆಶ್ಚರ್ಯ ವ್ಯಕ್ತಪಡಿಸಿರುವ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸಂತಾನೋತ್ಪತ್ತಿ ವಿಜ್ಞಾನ ಮತ್ತು ಮಹಿಳಾ ಆರೋಗ್ಯ ಸಂಶೋಧನಾ ವಿಭಾಗದ ನಿರ್ದೇಶಕ ಜೇಮ್ಸ್ ಸೆಗರ್ಸ್, ಮಹಿಳೆಯರಲ್ಲಿ ಸಾಮಾನ್ಯವಾಗಿ 15ನೇ ವಯಸ್ಸಿಗೆ ಋತುಚಕ್ರ ಪ್ರಾರಂಭವಾಗುತ್ತದೆ. ಪ್ರತಿ 28 ದಿನಗಳಿಗೊಮ್ಮೆ ಅವರ ಅಂಡಾಶಯದಲ್ಲಿ ಒಂದು ಮೊಟ್ಟೆ ಬಿಡುಗಡೆಯಾಗುತ್ತದೆ. ಋತುಬಂಧದಲ್ಲಿ ಮೊಟ್ಟೆಯ ಪೂರೈಕೆಯು ಖಾಲಿಯಾಗುವವರೆಗೂ ಈ ಅಂಡೋತ್ಪತ್ತಿ ಮುಂದುವರಿಯುತ್ತದೆ. ಇದು ಸುಮಾರು 51 ವರ್ಷಗಳ ಕಾಲ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.

Parents and Kids: ಈ ದೇಶದ ಜನ ರಸ್ತೆಬದಿಯಲ್ಲಿ ಮಕ್ಕಳನ್ನು ಮಲಗಿಸಿ ಸುತ್ತಾಡಲು ಹೋಗುತ್ತಾರೆ!

ಅಂಕಿಅಂಶಗಳ ಪ್ರಕಾರ ವಾಸಿಲಿಯೆವ್ ಅವರು ತಮ್ಮ 40 ವರ್ಷಗಳ ಅವಧಿಯಲ್ಲಿ 27 ಗರ್ಭಧಾರಣೆಗಳಿಗೆ ಸಾಕಷ್ಟು ಸಮಯ ಹೊಂದಿದ್ದರು ಎಂದು ಜೇಮ್ಸ್ ಸೆಗರ್ಸ್ ತಿಳೀಸಿದ್ದಾರೆ.ಋತುಬಂಧದ ಮೊದಲು ಮಹಿಳೆಯರ ಫಲವತ್ತತೆ ಕಡಿಮೆ ಇರುತ್ತದೆ. 45 ವರ್ಷ ಅನಂತರ ಇದು ಕುಸಿಯತೊಡಗುತ್ತದೆ. ಆರೋಗ್ಯವಂತ ಮಹಿಳೆ ಪ್ರತಿ ಚಕ್ರಕ್ಕೆ ಮಗುವನ್ನು ಹೊಂದುವ ಶೇಕಡಾವಾರು ಸಾಧ್ಯತೆ ತಿಂಗಳಿಗೆ ಶೇ. 1ರಷ್ಟಿರುತ್ತದೆ ಎಂದು ಸ್ಟ್ಯಾನ್‌ಫೋರ್ಡ್ ಸ್ಕೂಲ್ ಆಫ್ ಮೆಡಿಸಿನ್ ನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸಹ ಪ್ರಾಧ್ಯಾಪಕರಾದ ವ್ಯಾಲೆರಿ ಬೇಕರ್ ಹೇಳಿದ್ದಾರೆ.