ಗಾಜಿಯಾಬಾದ್: ನಾಲ್ಕು ವರ್ಷಗಳಿಂದ ಮನೆ ಮಾಲೀಕರಿಗೆ ಮೂತ್ರ ಮಿಶ್ರಣ ಮಾಡಿ ಚಪಾತಿ ತಯಾರಿಸಿ ತಿನ್ನಿಸುತ್ತಿದ್ದ ಮನೆ ಕೆಲಸದಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಂದ ಹಾಗೆ ಆಕೆ ಐಷಾರಾಮಿ ಕಟ್ಟಡ ಸಮುಚ್ಛಯದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು (Crime News : ಮಾಲೀಕರಿಗೆ ಮೂತ್ರ ಮಿಶ್ರಣ ಮಾಡಿ ಚಪಾತಿ ಮಾಡಿಕೊಡುತ್ತಿದ್ದ ಮನೆ ಕೆಲಸದಾಕೆ! ). ಆಕೆ ಹಲವು ವರ್ಷಗಳಿಂದ ಅದೇ ರೀತಿ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ರುಚಿಕರವಾದ ಚಪಾತಿಯ ಗುಟ್ಟೇನು ಎಂದು ತಿಳಿದುಕೊಳ್ಳುವುದಕ್ಕೆ ಮನೆ ಮಾಲೀಕರು ಪರಿಶೀಲನೆ ನಡೆಸಿದಾಗ ಮೂತ್ರ ಮಿಶ್ರಣ ಮಾಡಿರುವುದು ಗೊತ್ತಾಗಿದೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಪ್ರತಿ ನಿತ್ಯ ಚಪಾತಿಗಾಗಿ ಹಿಟ್ಟು ತಯಾರಿಸುವಾಗ ಮೂತ್ರವನ್ನು ಬೆರೆಸಿದ್ದಾಳೆ ಎಂದು ಆಕೆಯ ಉದ್ಯೋಗದಾತರಿಂದ ದೂರು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಕೆಲಸದಾಕೆಯನ್ನು ರೀನಾ ಎಂದು ಗುರುತಿಸಲಾಗಿದೆ. ಅಕ್ಟೋಬರ್ 15 ರಂದು ಆಕೆಯನ್ನು ಬಂಧಿಸಲಾಗಿದೆ ಎಂದು ಎಸಿಪಿ ಲಿಪಿ ನಾಗಯಾಚ್ ತಿಳಿಸಿದ್ದಾರೆ.
“ಅಕ್ಟೋಬರ್ 14 ರಂದು ತಮ್ಮ ಫ್ಲ್ಯಾಟ್‌ನಲ್ಲಿ ಮನೆಕೆಲಸದ ರೀನಾ ಎಂಬುವರು ಹಿಟ್ಟು ತಯಾರಿಸಲು ಮೂತ್ರವನ್ನು ಬೆರೆಸಿದ್ದಾರೆ ಎಂದು ಲಿಖಿತ ದೂರು ದಾಖಲಿಸಿದ್ದರು. ಸಂಬಂಧಿತ ಸೆಕ್ಷೆನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ. ಅಕ್ಟೋಬರ್ 15 ರಂದು ಜಿಎಚ್ -7 ಸೊಸೈಟಿಯಿಂದ ಅವಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ರೊಟ್ಟಿ ಮಾಡುವಾಗ ಉಗುಳು ಮಿಶ್ರಣ
ಇತ್ತೀಚೆಗೆ, ಸಹರಾನ್ಪುರ ಜಿಲ್ಲೆಯ ಉಪಾಹಾರ ಗೃಹದಲ್ಲಿ ಯುವಕನೊಬ್ಬ ಬ್ರೆಡ್ ತಯಾರಿಸುವಾಗ ಉಗುಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರೆಸ್ಟೋರೆಂಟ್ ಮಾಲೀಕನನ್ನು ಬಂಧಿಸಲಾಗಿದೆ. ಅಪ್ರಾಪ್ತ ಉದ್ಯೋಗಿಯನ್ನು ಸಹ ಬಂಧಿಸಲಾಗಿದೆ.
ಆಹಾರದಲ್ಲಿ ಉಗುಳಿದರೆ 10 ವರ್ಷ ಕಠಿಣ ಜೈಲು ಶಿಕ್ಷೆ; ಸುಗ್ರಿವಾಜ್ಞೆ ತರಲು ಯೋಗಿ ಸರ್ಕಾರ ಮಾಸ್ಟರ್ ಪ್ಲ್ಯಾನ್
ಲಕ್ನೋ: ತಿನ್ನುವ ಆಹಾರದಲ್ಲಿ ಕೆಲವು ಕಿಡಿಗೇಡಿಗಳು ಉಗುಳಿ(Spitting in food) ಅದನ್ನು ಕೊಳಕು ಮಾಡುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಉತ್ತರಪ್ರದೇಶ ಸರ್ಕಾರ ಮುಂದಾಗಿದೆ. ಈ ರೀತಿ ಹೀನ ಕೃತ್ಯ ಎಸಗುವವರಿಗೆ 10 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಡುವಂತಹ ಕಾನೂನು ತರಲು ಯೋಗಿ ಆದಿತ್ಯನಾಥ್(Yogi Adityanath) ನೇತೃತ್ವದ ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: Hoax Bomb Threats : ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಿದ್ದು ಅಪ್ರಾಪ್ತ ವಯಸ್ಸಿನ ಬಾಲಕ!
ಆಹಾರ ಪದಾರ್ಥಗಳನ್ನು ಕಲುಷಿತಗೊಳಿಸುವ ಕೃತ್ಯಕ್ಕೆ ಅತಿ ಕಠಿಣ ಕಾನೂನು ಕ್ರಮ ಜರುಗಿಸಲು ಉತ್ತರಪ್ರದೇಶ ಸರ್ಕಾರ ಶೀಘ್ರದಲ್ಲೇ ಸುಗ್ರಿವಾಜ್ಞೆ ಜಾರಿಗೊಳಿಸಲಿದೆ. ಆಮೂಲಕ ಈ ಕೃತ್ಯ ಎಸಗುವವರಿಗೆ ಹತ್ತುವರ್ಷಗಳ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಮುಂದಾಗಿದೆ. ಸಾಮಾನ್ಯವಾಗಿ ಇಂತಹ ಶಿಕ್ಷೆಯನ್ನು ಕೊಲೆ ಅತ್ಯಾಚಾರ ಪ್ರಕರಣಗಳಲ್ಲಿ ಮಾತ್ರ ನೀಡಲಾಗುತ್ತದೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಉತ್ತರಪ್ರದೇಶದಲ್ಲಿ ತಲೆದೋರಿರುವ ವಾಯುಮಾಲಿನ್ಯ ಸಮಸ್ಯೆ ಮತ್ತು ಆಹಾರಗಳಲ್ಲಿ ಉಗುಳುವುದು, ಮೂತ್ರ ವಿಸರ್ಜಿಸುವ ಕೃತ್ಯದ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ವಿಚಾರಗಳಿಗೆ ಸಂಬಂಧಿಸಿದಂತೆ ಕಾನೂನು ಜಾರಿಗೊಳಿಸಲು ಯೋಗಿ ಸರ್ಕಾರ ಸುಗ್ರಿವಾಜ್ಞೆ ತರುವ ಬಗ್ಗೆ ಪ್ರಸ್ತಾಪ ಮಾಡಿದೆ. ಹೊಸ ಸುಗ್ರೀವಾಜ್ಞೆಗಳು ಮಾನವ ಆಹಾರವನ್ನು ಕಲುಷಿತಗೊಳಿಸುವುದು ಮತ್ತು ಉಗುಳುವ ಕೃತ್ಯಕ್ಕೆ ಸುಮಾರು 10 ವರ್ಷಗಳ ಶಿಕ್ಷೆ ವಿಧಿಸುವ ಬಗ್ಗೆ ಇದೆ. ಮಾನವ ತ್ಯಾಜ್ಯ ಮತ್ತು ಕೊಳಕು ಪದಾರ್ಥಗಳೊಂದಿಗೆ ಆಹಾರವನ್ನು ಕಲುಷಿತಗೊಳಿಸುವುದು ಘೋರ ಅಪರಾಧವಾಗಿದೆ ಮತ್ತು ನಾವು ಶೀಘ್ರದಲ್ಲೇ ಬಲವಾದ ಕಾನೂನನ್ನು ತರುತ್ತೇವೆ” ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸರ್ಕಾರದ ಹೇಳಿಕೆಯಲ್ಲಿ ತಿಳಿಸಿದ್ದಾರೆ.