Saturday, 23rd November 2024

Vastu Tips: ಅಡುಗೆ ಮನೆಯ ಸ್ಲ್ಯಾಬ್ ಮೇಲೆ ಚಪಾತಿ, ರೊಟ್ಟಿ ಮಾಡುವುದು ಸರಿಯೇ?

Vastu Tips

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಚಪಾತಿ, ರೊಟ್ಟಿಯನ್ನು ಮಾಡಲಾಗುತ್ತದೆ. ಇದು ಕೆಲವರ ನಿತ್ಯದ ದಿನಚರಿಯ ಭಾಗವೂ ಹೌದು. ಆದರೆ ಇದರಲ್ಲೂ ವಾಸ್ತು ನಿಯಮ (Vastu Tips) ಪಾಲನೆ ಮಾಡಬೇಕು ಎನ್ನುತ್ತಾರೆ ವಾಸ್ತು ತಜ್ಞರು. ಅಡುಗೆ ಮನೆಯ ಸ್ಲ್ಯಾಬ್ ನ (Kitchen Slab) ಮೇಲೆ ಚಪಾತಿ, ರೊಟ್ಟಿ (chapati, roti) ಮಾಡುವುದನ್ನು ಹೆಚ್ಚಿನ ಮನೆಗಳಲ್ಲಿ ನಾವು ಗಮನಿಸಿರುತ್ತೇವೆ. ಇದು ಸರಿಯೇ? ಈ ಬಗ್ಗೆ ವಾಸ್ತು ತಜ್ಞರಾದ ಜ್ಯೋತಿಷ್ಯಾಚಾರ್ಯ ರಾಧಾಕಾಂತ್ ವತ್ಸ್ ಹೇಳುವುದು ಏನು?

ಕಿಚನ್ ಸ್ಲ್ಯಾಬ್ ಮೇಲೆ ಚಪಾತಿ, ರೊಟ್ಟಿ ಮಾಡಬಹುದೇ?

ಅಡುಗೆ ಮನೆಯ ಕಟ್ಟೆ ಅಂದರೆ ಸ್ಲ್ಯಾಬ್ ಮೇಲೆ ಚಪಾತಿ ಅಥವಾ ರೊಟ್ಟಿ ಮಾಡುವುದರಿಂದ ಕಿಚನ್ ಸ್ಲ್ಯಾಬ್ ನಲ್ಲಿರುವ ಸೂಕ್ಷ್ಮಜೀವಿ ಮತ್ತು ಬ್ಯಾಕ್ಟೀರಿಯಾಗಳು ರೊಟ್ಟಿ ಮೇಲೆ ಅಂಟಿಕೊಳ್ಳಬಹುದು. ಹೀಗಾಗಿ ಇದು ಆರೋಗ್ಯಕರವಲ್ಲ. ಅನೇಕರು ಸ್ಲ್ಯಾಬ್ ವಿಶಾಲವಾಗಿರುವುದರಿಂದ ಇದರ ಮೇಲೆ ರೊಟ್ಟಿ ತಟ್ಟಲು ಬಯಸುತ್ತಾರೆ. ಇದು ಸುಲಭವಾಗಿರಬಹುದು. ಆದರೆ ಅದನ್ನು ಸರಿಯಾಗಿ ನಿರ್ವಹಿಸದಿದ್ದರೆ ಆರೋಗ್ಯಕ್ಕೆ ಅಪಾಯವನ್ನು ಉಂಟು ಮಡಬಹುದು. ಹೀಗಾಗಿ ರೊಟ್ಟಿಯಿ ಮಾಡಲು ಮರದ ಹಲಗೆ ಅಥವಾ ಕ್ಲೀನ್ ಕೌಂಟರ್‌ಟಾಪ್‌ನಂತಹ ಸ್ವಚ್ಛ ಮತ್ತು ಮೀಸಲಾದ ಪ್ರದೇಶವನ್ನು ಬಳಸುವುದು ಉತ್ತಮ ಎನ್ನುತ್ತಾರೆ ರಾಧಾಕಾಂತ್ ವತ್ಸ್.

Vastu Tips

ವಾಸ್ತು ಶಾಸ್ತ್ರ ಏನು ಹೇಳುತ್ತದೆ?

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಡುಗೆ ಮನೆಯು ವಿಶೇಷ ಸ್ಥಾನವನ್ನು ಹೊಂದಿದೆ. ಅದನ್ನು ಮನೆಯ ಹೃದಯವೆಂದು ಪರಿಗಣಿಸಲಾಗುತ್ತದೆ. ಇದು ಸಕಾರಾತ್ಮಕ ಶಕ್ತಿ ಮತ್ತು ಸಾಮರಸ್ಯವನ್ನು ಉಂಟು ಮಾಡುವ ಸ್ಥಳವಾಗಿದೆ.

ಕಿಚನ್ ಸ್ಲ್ಯಾಬ್‌ನಲ್ಲಿ ರೊಟ್ಟಿಯನ್ನು ಮಾಡಬಹುದು. ಆದರೆ ಸ್ಲ್ಯಾಬ್ ಅನ್ನು ಸ್ವಚ್ಛವಾಗಿ ಮ೦ತ್ತು ಉತ್ತಮವಾಗಿ ನಿರ್ವಹಿಸುವುದು ಬಹಳ ಮುಖ್ಯ. ಅಡುಗೆ ಮನೆಯಲ್ಲಿ ಶುದ್ಧತೆ ಮತ್ತು ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಲು ಚಪಾತಿ ಅಥವಾ ರೊಟ್ಟಿ ಮಾಡುವ ಸ್ಥಳವನ್ನು ಅದಕ್ಕಾಗಿ ಮಾತ್ರ ಮೀಸಲಿಡಬೇಕು ಎನ್ನುತ್ತದೆ ವಾಸ್ತು ನಿಯಮ.

ಅಲ್ಲದೇ ಕಿಚನ್ ಸ್ಲ್ಯಾಬ್ ಅನ್ನು ಸರಿಯಾಗಿ ಇರಿಸುವುದು /ಕೂಡ ಮುಖ್ಯವಾಗಿದೆ. ನಾವು ಅಡುಗೆ ಮಾಡುವ ಪ್ರದೇಶವು ಪೂರ್ವಕ್ಕೆ ಎದುರಾಗಿರಬೇಕು, ಇದು ಅಡುಗೆಯಲ್ಲಿ ಸೂರ್ಯನ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಡುಗೆಮನೆಯ ಸ್ಲ್ಯಾಬ್ ವಾಸ್ತು ತತ್ತ್ವಗಳಿಗೆ ಸರಿಯಾಗಿ ಇಲ್ಲದೇ ಇದ್ದರೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಬಹುದು.

Vastu Tips: ಪೂರ್ವಜರ ಚಿತ್ರಗಳನ್ನು ಮನೆಯ ಈ ಸ್ಥಳಗಳಲ್ಲಿ ಇರಿಸಲೇಬೇಡಿ!

ವಾಸ್ತು ತತ್ತ್ವಗಳಿಗೆ ಬದ್ಧವಾಗಿರುವುದು ಅಡುಗೆ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಸಾಮರಸ್ಯದ ವಾತಾವರಣವನ್ನು ಸೃಷ್ಟಿಸುತ್ತದೆ.