Sunday, 15th December 2024

Vastu Tips: ಪೂರ್ವಜರ ಚಿತ್ರಗಳನ್ನು ಮನೆಯ ಈ ಸ್ಥಳಗಳಲ್ಲಿ ಇರಿಸಲೇಬೇಡಿ!

Vastu Tips

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಪೂರ್ವಜರ (Ancestral pictures) ಚಿತ್ರಗಳಿರುತ್ತವೆ. ಇದನ್ನು ವಿಶೇಷವಾಗಿ ಹಿರಿಯರಿಗೆ ಗೌರವ ಸಲ್ಲಿಸುವ ಸಲುವಾಗಿ, ಅವರ ನೆನಪಿನ ಸಲುವಾಗಿ ಜೊತೆಗೆ ಅವರ ಆಶೀರ್ವಾದ ಪಡೆಯುವ ಸಲುವಾಗಿ ಮನೆಯಲ್ಲಿ ಇರಿಸಲಾಗುತ್ತದೆ. ಆದರೆ ಈ ಚಿತ್ರಗಳನ್ನು ವಾಸ್ತು (Vastu Tips) ಪ್ರಕಾರ ಇರಿಸುವುದು ಬಹು ಮುಖ್ಯವಾಗಿದೆ.

ಪೂರ್ವಜರ ಚಿತ್ರಗಳು ಮನೆಯೊಳಗೆ ಶಕ್ತಿಯ ಹರಿವಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಹೀಗಾಗಿ ಈ ಚಿತ್ರಗಳನ್ನು ಸರಿಯಾದ ಸ್ಥಳದಲ್ಲಿ, ಸರಿಯಾದ ರೀತಿಯಲ್ಲಿ ಇರಿಸುವುದು ಬಹುಮುಖ್ಯ.

ಪೂರ್ವಜರ ಚಿತ್ರಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸುವುದರಿಂದ ಮನೆಯಲ್ಲಿ ಶಾಂತಿ, ಸಾಮರಸ್ಯ ತುಂಬುವುದು. ಹಿರಿಯರೊಂದಿಗೆ ಹೊಸ ಪೀಳಿಗೆಯನ್ನು ಜೋಡಿಸುವ ಕಾರ್ಯವನ್ನು ಇದು ಮಾಡುತ್ತದೆ. ವಾಸ್ತು ತತ್ತ್ವ ಗಳ ಪ್ರಕಾರ ಮನೆಯಲ್ಲಿ ಪೂರ್ವಜರ ಚಿತ್ರಗಳನ್ನು ಹೇಗೆ ಇರಿಸಬೇಕು ಎನ್ನುವುದನ್ನು ಈ ರೀತಿಯಾಗಿ ಹೇಳಲಾಗಿದೆ.

ನೈಋತ್ಯ ದಿಕ್ಕು

ವಾಸ್ತು ಪ್ರಕಾರ ಪೂರ್ವಜರ ಚಿತ್ರಗಳನ್ನು ಇಡಲು ನೈಋತ್ಯ ದಿಕ್ಕು ಅತ್ಯುತ್ತಮ ಸ್ಥಳವಾಗಿದೆ. ಈ ದಿಕ್ಕನ್ನು ಭೂಮಿಯ ಅಂಶದಿಂದ ನಿಯಂತ್ರಿಸಲಾಗುತ್ತದೆ. ಇದು ಸ್ಥಿರತೆಯನ್ನು ಸಂಕೇತಿಸುತ್ತದೆ. ಈ ದಿಕ್ಕಿನಲ್ಲಿ ಮೃತ ಪೂರ್ವಜರ ಚಿತ್ರಗಳನ್ನು ಇರಿಸುವುದರಿಂದ ಸಂಬಂಧಗಳು ಬಲವಾಗಿರುತ್ತದೆ. ಇದು ಶಾಂತಿಯನ್ನು ತರುತ್ತದೆ ಮತ್ತು ಮನೆಗೆ ಪೂರ್ವಜರ ನಿರಂತರ ಆಶೀರ್ವಾದವನ್ನು ಒದಗಿಸುತ್ತದೆ ಎನ್ನಲಾಗುತ್ತದೆ.

ದಕ್ಷಿಣ ದಿಕ್ಕು

ದಕ್ಷಿಣ ದಿಕ್ಕು ಭೂತಕಾಲಕ್ಕೆ ಸಂಬಂಧಿಸಿದೆ. ಹೀಗಾಗಿ ಪೂರ್ವಜರ ಚಿತ್ರಗಳನ್ನು ಇರಿಸಲು ಇದು ಸೂಕ್ತ ಸ್ಥಳವೆಂದು ಪರಿಗಣಿಸಲಾಗಿದೆ. ದಕ್ಷಿಣದ ಗೋಡೆಯಲ್ಲಿ ಮೃತರ ಚಿತ್ರಗಳನ್ನು ಇರಿಸುವುದರಿಂದ ಅವರ ಮುಖವು ಉತ್ತರದ ಕಡೆಗೆ ಇರುತ್ತದೆ. ಇದು ಸಕಾರಾತ್ಮಕತೆ ಮತ್ತು ಮುಂದಕ್ಕೆ ಚಲನೆಯ ದಿಕ್ಕು. ಈ ಜೋಡಣೆಯು ಸಮೃದ್ಧಿಯನ್ನು ತರುತ್ತದೆ ಮತ್ತು ಕುಟುಂಬವನ್ನು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತದೆ ಎನ್ನಲಾಗುತ್ತದೆ.

Vastu Tips

ಈಶಾನ್ಯ ದಿಕ್ಕು

ಮನೆಯ ಈಶಾನ್ಯ ಮೂಲೆಯನ್ನು ಆಧ್ಯಾತ್ಮಿಕತೆ ಮತ್ತು ಬೆಳವಣಿಗೆಯ ವಲಯವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕು ದೇವತೆಗಳಿಗೆ ಮೀಸಲಿಡಲಾಗಿದೆ. ಇಲ್ಲಿ ಪೂರ್ವಜರ ಚಿತ್ರಗಳನ್ನು ಇಡುವುದರಿಂದ ಈ ಜಾಗದ ಪವಿತ್ರ ಶಕ್ತಿಗೆ ತೊಂದರೆಯಾಗುತ್ತದೆ. ಇದು ಮನೆಯಲ್ಲಿ ಸಂಘರ್ಷ ಅಥವಾ ಅಶಾಂತಿಗೆ ಕಾರಣವಾಗಬಹುದು.

ಮಲಗುವ ಕೋಣೆ

ಮಲಗುವ ಕೋಣೆಗಳಲ್ಲಿ ಪೂರ್ವಜರ ಚಿತ್ರಗಳನ್ನು ಇರಿಸಬಾರದು. ಯಾಕೆಂದರೆ ಈ ಸ್ಥಳ ವಿಶ್ರಾಂತಿ ಮತ್ತು ನಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಇರುವಂಥದ್ದು. ಮಲಗುವ ಕೋಣೆಯಲ್ಲಿ ಸತ್ತವರ ಚಿತ್ರಗಳನ್ನು ಇಟ್ಟುಕೊಳ್ಳುವುದು ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಕೋಣೆಯ ಶಾಂತಿಯನ್ನು ಹಾಳು ಮಾಡುತ್ತದೆ.

ಅಡುಗೆ ಮನೆ

ಮೃತ ಪೂರ್ವಜರ ಚಿತ್ರಗಳನ್ನು ಅಡುಗೆ ಅಥವಾ ಊಟದ ಕೋಣೆಯಲ್ಲಿ ಇರಿಸಬಾರದು. ಯಾಕೆಂದರೆ ಈ ಪ್ರದೇಶಗಳು ಪೋಷಣೆ ಮತ್ತು ಜೀವ ನೀಡುವ ಶಕ್ತಿಗೆ ಸಂಬಂಧಿಸಿವೆ. ಈ ಸ್ಥಳಗಳಲ್ಲಿ ಪೂರ್ವಜರ ಚಿತ್ರಗಳನ್ನು ಇಡುವುದರಿಂದ ಜೀವನದಲ್ಲಿ ಶಕ್ತಿಯ ಹರಿವಿನ ಮೇಲೆ ಪರಿಣಾಮ ಬೀರುತ್ತದೆ.

Vastu Tips

ಪ್ರಮುಖ ನಿಯಮಗಳು

ಪೂರ್ವಜರ ಚಿತ್ರಗಳನ್ನು ಅಂದವಾಗಿ ಮತ್ತು ಸ್ವಚ್ಛವಾಗಿ ಇರಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಧೂಳಿನ ಅಥವಾ ಹಾನಿಗೊಳಗಾದ ಫ್ರೇಮ್ ನಕಾರಾತ್ಮಕ ಶಕ್ತಿಗೆ ಅಹ್ವಾನ ನೀಡುತ್ತದೆ. ಇದು ನಿರ್ಲಕ್ಷ್ಯದ ಭಾವನೆಯನ್ನು ಉಂಟುಮಾಡಬಹುದು.

Vastu Tips: ಮನೆಗೆ ಸಮೃದ್ಧಿ ತರುವ ಮನಿ ಪ್ಲಾಂಟ್ ನೆಡುವಾಗ ಈ ತಪ್ಪುಗಳನ್ನು ಮಾಡಬೇಡಿ!

ಪೂರ್ವಜರ ಚಿತ್ರಗಳನ್ನು ನೆಲದ ಮೇಲೆ ಅಥವಾ ನಿರ್ಲಕ್ಷಿಸುವ ಸ್ಥಳದಲ್ಲಿ ಇರಿಸಬಾರದು.
ಪೂರ್ವಜರ ಚಿತ್ರಗಳನ್ನು ಪ್ರತ್ಯೇಕ ಸ್ಥಳದಲ್ಲಿ ಇರಿಸುವುದು ಮುಖ್ಯ. ಅವುಗಳನ್ನು ದೇವತೆಗಳ ಚಿತ್ರ ಅಥವಾ ವಿಗ್ರಹಗಳೊಂದಿಗೆ ಇಡಬಾರದು.

ಪೂರ್ವಜರ ಚಿತ್ರಗಳನ್ನು ಇರಿಸುವ ಪ್ರದೇಶವನ್ನು ಸ್ವಚ್ಛವಾಗಿರಿಸಿ. ಸಕಾರಾತ್ಮಕ ಭಾವವನ್ನು ಕಾಪಾಡಿಕೊಳ್ಳಲು ತಾಜಾ ಹೂವುಗಳಿಂದ ಅಲಂಕರಿಸಿ.