ಪಾನಿಪುರಿ (Panipuri) ಪ್ರಿಯರೇ ನಿಮಗೊಂದು ಆಘಾತ ನೀಡುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಜಾರ್ಖಂಡ್ನ (Jharkhand) ಇಬ್ಬರು ವ್ಯಕ್ತಿಗಳು ಪಾನಿಪುರಿಯನ್ನು ಕಾಲುಗಳಿಂದ ತುಳಿದು ತಯಾರಿಸುತ್ತಿದ್ದದ್ದು ಮಾತ್ರವಲ್ಲ ಅದರ ರುಚಿ ಹೆಚ್ಚಿಸಲು ಹಾರ್ಪಿಕ್ ಟಾಯ್ಲೆಟ್ ಕ್ಲೀನರ್ ಮತ್ತು ಯೂರಿಯಾ ಗೊಬ್ಬರದಂತಹ ಹಾನಿಕಾರಕ ವಸ್ತುಗಳನ್ನು ಬಳಸುತ್ತಿರುವ ವಿಡಿಯೋ ಎಕ್ಸ್ ನಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋ ವೈರಲ್ ಆದ ಬಳಿಕ ಆರೋಪಿಗಳಿಬ್ಬರನ್ನು ಸ್ಥಳೀಯ ಅಧಿಕಾರಿಗಳು ಬಂಧಿಸಿದ್ದಾರೆ.
ಗರ್ವಾ ಜಿಲ್ಲೆಯ ಮಜಿಯಾವ್ ಬಜಾರ್ ಪ್ರದೇಶದಲ್ಲಿ ಆರೋಪಿಗಳಿಬ್ಬರು ಕಾಲಿನಿಂದ ಹಿಟ್ಟನ್ನು ಬೆರೆಸುತ್ತಿರುವುದು ಕೆಮರಾದಲ್ಲಿ ಸೆರೆಯಾಗಿದೆ. ಇದರ ಜೊತೆಗೆ ಪಾನಿಪುರಿಯ ರುಚಿ ಹೆಚ್ಚಿಸಲು ಹಾರ್ಪಿಕ್, ಯೂರಿಯಾದಂತಹ ರಾಸಾಯನಿಕಗಳನ್ನು ಬಳಸಿರುವುದಾಗಿ ಅವರು ಹೇಳಿದ್ದಾರೆ.
સ્વાદ વધારવા માટે ગોલગપ્પાના લોટમાં પગ ભેળતા વિડિઓ વાયરલ#golgappe #panipuri #uttarpradesh #viralvideos #trendingreels #ptnnews pic.twitter.com/I9n0auKHMG
— PTN News (@Ptnnewsofficial) October 17, 2024
ಆರೋಪಿಗಳನ್ನು ಅಂಶು ಮತ್ತು ರಾಘವೇಂದ್ರ ಎಂದು ಗುರುತಿಸಲಾಗಿದೆ. ಇದರ ವಿಡಿಯೋವನ್ನು ಸ್ಥಳೀಯರಾದ ಅರವಿಂದ್ ಯಾದವ್ ಎಂಬವರು ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಂಶು ಮತ್ತು ರಾಘವೇಂದ್ರ ಇಬ್ಬರು ಉತ್ತರ ಪ್ರದೇಶದ ಝಾನ್ಸಿಯ ಸೇಸಾ ಗ್ರಾಮದವರು. ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಯಾದವ್ ತಿಳಿಸಿದ್ದಾರೆ.
ಸ್ಥಳದಲ್ಲಿ ಆಲಂ (ಫಿಟ್ಕಾರಿ) ಅನ್ನು ಹೋಲುವ ಬಿಳಿ ರಾಸಾಯನಿಕವೊಂದು ಪತ್ತೆಯಾಗಿದ್ದು, ಅದನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಗರ್ವಾದಲ್ಲಿರುವ ಸ್ಥಳೀಯ ಕಿರಾಣಿ ಅಂಗಡಿಯಿಂದ ಅದನ್ನು ಖರೀದಿಸಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಆಕಾಶ್ ಕುಮಾರ್ ತಿಳಿಸಿದ್ದಾರೆ.
ಆರೋಪಿಗಳ ಪೋಷಕರಿಗೂ ಸಮನ್ಸ್ ನೀಡಲಾಗಿದೆ. ಪ್ರಯೋಗಾಲಯದ ಫಲಿತಾಂಶಗಳು ವಸ್ತುವು ಹಾನಿಕಾರಕ ಎಂದು ದೃಢಪಡಿಸಿದರೆ ಆರೋಪಿಗಳು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಆಕಾಶ್ ಕುಮಾರ್ ಹೇಳಿದ್ದಾರೆ.