-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪಾರ್ಟಿ ಪ್ರಿಯ ಬಿಂದಾಸ್ ಹುಡುಗಿಯರನ್ನು ನಾನಾ ಬಗೆಯ ಹೇರ್ಸ್ಟೈಲ್ಗಳು (Party Hair Styles) ಆಕರ್ಷಕವಾಗಿಸುತ್ತಿವೆ. ಅವುಗಳಲ್ಲಿ 5 ಬಗೆಯವು ಅತಿ ಹೆಚ್ಚು ಚಾಲ್ತಿಯಲ್ಲಿದ್ದು, ಯುವತಿಯರನ್ನು ಸವಾರಿ ಮಾಡತೊಡಗಿವೆ. ಹೌದು, ಲಂಚ್-ಬ್ರಂಚ್-ನೈಟ್ ಪಾರ್ಟಿಗೆ ತಕ್ಕಂತೆ ಹೇರ್ಸ್ಟೈಲ್ಗಳು ಬ್ಯೂಟಿಲೋಕದಲ್ಲಿ ಡಿಕ್ಲೇರ್ ಆಗಿವೆ. ಅವುಗಳಲ್ಲಿ ಬೆಸ್ಟ್ 5 ಶೈಲಿಯ ಹೇರ್ಸ್ಟೈಲ್ಸ್ ಯುವತಿಯರನ್ನು ಸೆಳೆದಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ಬುಫೌಂಟ್ ಪೋನಿಟೇಲ್
ಬುಫೌಂಟ್ ಪೋನಿಟೇಲ್ ಅಥವಾ ಬನ್ ಹೇರ್ಸ್ಟೈಲ್ ನೋಡಲು ಆಕರ್ಷಕವಾಗಿ ಕಾಣಿಸುತ್ತದೆ. ಮಾತ್ರವಲ್ಲ, ಡ್ಯಾನ್ಸ್ ಪಾರ್ಟಿಗಳಿಗೆ ಹೇಳಿ ಮಾಡಿಸಿದ ವಿನ್ಯಾಸವಿದು. ನೋಡಲು ಪಫ್ ಹೇರ್ಸ್ಟೈಲ್ನಂತೆ ಕಂಡರೂ ಕೂದಲನ್ನು ಒಂದೆಡೆ ಹಿಡಿದಿಡುವುದರೊಂದಿಗೆ ಡ್ಯಾನ್ಸ್ ಮಾಡುವ ಹುಡುಗಿಯರಿಗೆ ಕಂಫರ್ಟಬಲ್ ಫೀಲ್ ನೀಡುತ್ತದೆ. ಸ್ಲೀಕ್ ಅಥವಾ ಚಿಕ್ಕ ಮುಖದವರಿಗೆ ಇದು ಉತ್ತಮ ಹೇರ್ಸ್ಟೈಲ್.
ವೆವ್ವಿ ಹನ್ ಹೇರ್ಸ್ಟೈಲ್
ಹನ್ ಹೇರ್ಸ್ಟೈಲ್ ಎಲ್ಲರೂ ಸುಲಭವಾಗಿ ಮಾಡಬಹುದಾದ ಕೂದಲ ವಿನ್ಯಾಸ. ಇನ್ನು, ಕೂದಲು ಸ್ಟ್ರೇಟ್ ಆಗಿದ್ದಲ್ಲಿ, ಮೊದಲು ವೆವ್ವಿಯಾಗಿಸಿ, ಈ ವಿನ್ಯಾಸ ಮಾಡಬಹುದು. ಬೇರೆಯವರ ಸಹಾಯ ಬೇಕಾಗಿಲ್ಲ! ತಲೆಯ ಮುಂಭಾಗದ ಕೂದಲನ್ನು ಲೂಸಾಗಿ ಕಟ್ಟಿ, ಉಳಿದದ್ದನ್ನು ಹಾಗೆಯೇ ಬಿಟ್ಟಾಗ ಹನ್ ವೆವ್ವಿ ಕೂದಲು ಚೆನ್ನಾಗಿ ಕಾಣಿಸುತ್ತದೆ. ಅಗಲವಾದ ಮುಖದವರಿಗೆ ಇದು ಬೆಸ್ಟ್ ಹೇರ್ಸ್ಟೈಲ್.
ಫ್ಯಾನ್ಸಿ ಬ್ರೈಡ್ ಹೇರ್ಸ್ಟೈಲ್
ಜಡೆಯಂತಹ ಈ ಹೇರ್ಸ್ಟೈಲ್ನಲ್ಲಿ ನಾನಾ ವಿಧವಾಗಿ ಕೂದಲ ವಿನ್ಯಾಸ ಮಾಡಬಹುದು. ಉದಾಹರಣೆಗೆ., ಹುಡುಗಿಯರ ಇಮ್ಯಾಜಿನೇಷನ್ಗೆ ತಕ್ಕಂತೆ ಮುಂಭಾಗದಿಂದ ಜಡೆ ಹೆಣೆದು ಹಿಂಭಾಗದಲ್ಲಿ ಫ್ರೀ ಬಿಡುವುದು, ಇಲ್ಲವೇ ಸೈಡ್ನಲ್ಲಿ ಉಲ್ಟಾ ಜಡೆ ಹೆಣೆದು ಟೈ ಮಾಡುವುದು. ಇಂತಹ ಹೇರ್ಸ್ಟೈಲ್ಸ್ ಉದ್ದ ಹಾಗೂ ಅಗಲ ಮುಖದವರಿಗೆ ಹೊಂದುತ್ತವೆ.
ವೆರೈಟಿ ಬನ್ ಹೇರ್ಸ್ಟೈಲ್
ಬನ್ ಹೇರ್ಸ್ಟೈಲ್ ಅಂದರೆ ತುರುಬು. ಅದನ್ನು ವಿಧ ವಿಧವಾಗಿ ಕಟ್ಟುವುದು ಒಂದು ಕಲೆ. ಹಣೆಯ ಮೇಲ್ಭಾಗ ಡಿಫರೆಂಟ್ ಹೇರ್ಸ್ಟೈಲ್ ಮಾಡಿ ಹಿಂಭಾಗ ಲೂಸಾಗಿ ತುರುಬನ್ನು ಹಾಕುವುದು, ಇಲ್ಲವೇ ಮೆಸ್ಸಿ ಬನ್, ಅಪ್ಡೂ ಬನ್ ಹೇರ್ಸ್ಟೈಲ್, ಫ್ಯಾನ್ಸಿ ಬನ್.. ಹೀಗೆ ನಾನಾ ಬಗೆಯಲ್ಲಿ ವಿನ್ಯಾಸ ಮಾಡಬಹುದು. ದುಂಡು ಮುಖದವರಿಗೆ ಬೆಸ್ಟ್ ಕೂದಲ ವಿನ್ಯಾಸವಿದು.
ಈ ಸುದ್ದಿಯನ್ನೂ ಓದಿ | Comedy kiladigalu Premier League: ಅ.19,20 ರಂದು ʼಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ʼ ನ ಗ್ರ್ಯಾಂಡ್ ಫಿನಾಲೆ
ಕರ್ಲ್ಸ್ ಗ್ಯಾಲೋರ್
ಈ ಕೆಟಗರಿಯಲ್ಲಿ ಕಂಪ್ಲೀಟ್ ಗುಂಗುರು ಕೂದಲಿನ ವಿನ್ಯಾಸ ಸೇರಿರುತ್ತದೆ. ತಾತ್ಕಾಲಿಕವಾಗಿ ಮಾಡುವ ಕರ್ಲ್ ಕೂದಲನ್ನು ಹಾಗೆಯೇ ಒಂದು ಸೈಡ್ ಪಿನ್ ಮಾಡಿ ಬಿಡಬಹುದು. ನ್ಯಾಚುರಲ್ ಕರ್ಲ್ ಇರುವವರು ಮೆಸ್ಸಿ ಹೈ ಪೋನಿಟೇಲ್ ಅಥವಾ ಹಾಫ್ ಪೋನಿಟೇಲ್ ವಿನ್ಯಾಸ ಮಾಡಬಹುದು. ಎಲ್ಲಾ ಬಗೆಯ ಮುಖದವರಿಗೂ ಕರ್ಲ್ ವಿನ್ಯಾಸ ಚೆನ್ನಾಗಿ ಕಾಣಿಸುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)