Thursday, 12th December 2024

Comedy kiladigalu Premier League: ಅ.19,20 ರಂದು ʼಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ʼ ನ ಗ್ರ್ಯಾಂಡ್ ಫಿನಾಲೆ

Comedy kiladigalu Premier League

ಬೆಂಗಳೂರು: ಜೀ಼ ಕನ್ನಡ ವಾಹಿನಿಯ ʼಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ʼ (Comedy kiladigalu Premier League) ಕಾರ್ಯಕ್ರಮಕ್ಕೆ ಈಗ ಫಿನಾಲೆಯ ಸಂಭ್ರಮ. ಕಳೆದ 25 ವಾರಗಳ ಕಾಲ ನಗೆ ಹಂಚಿರುವ ಈ ಶೋನಲ್ಲಿ ಆನಂದ್ ಸನ್ ರೈಸಸ್, ರಾಯಲ್ ಚಂಗಪ್ಪ ಬುಲ್ಡೋಜರ್ಸ್, ಅಕುಲ್ ಟೈಟನ್ಸ್, ಅನು ವಾರಿಯರ್ಸ್ ಮತ್ತು ಕುರಿ ಸೂಪರ್ ಕಿಂಗ್ಸ್ ಎಂಬ ಐದು ತಂಡಗಳಿದ್ದು, ವಿಜೇತರು ಯಾರಾಗ್ತಾರೆ ಎಂಬ ಕುತೂಹಲಕ್ಕೆ ಇದೇ ಶನಿವಾರ (ಅ.19) ಮತ್ತು ಭಾನುವಾರ (ಅ.20) ರಾತ್ರಿ 9 ಗಂಟೆಗೆ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಕಾಮಿಡಿ ಖಿಲಾಡಿಗಳು ಪ್ರೀಮಿಯರ್ ಲೀಗ್’ನ ಗ್ರ್ಯಾಂಡ್‌ ಫಿನಾಲೆಯಲ್ಲಿ ಉತ್ತರ ಸಿಗಲಿದೆ.

ನವರಸ ನಾಯಕ ಜಗ್ಗೇಶ್, ಅನುಶ್ರೀ, ಕುರಿ ಪ್ರತಾಪ್, ಅಕುಲ್ ಬಾಲಾಜಿ, ಮಾಸ್ಟರ್ ಆನಂದ್ ಮತ್ತು ಶ್ವೇತಾ ಚಂಗಪ್ಪ ಸಮ್ಮುಖದಲ್ಲಿ ಈ ಫಿನಾಲೆ ನಡೆಯಲಿದ್ದು, ಖ್ಯಾತ ನಿರೂಪಕಿ ಚೈತ್ರಾ ವಾಸುದೇವನ್ ಕಾರ್ಯಕ್ರಮದ ನಿರೂಪಣಾ ಜವಾಬ್ದಾರಿಯನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಕನ್ನಡದ ಜೂನಿಯರ್ ಅಮಿತಾಭ್ ಬಚ್ಚನ್ ವಿಶೇಷ ಅತಿಥಿಯಾಗಿ ಬಂದಿದ್ದು ತಾನು ಅಣ್ಣಾವ್ರ ದೊಡ್ಡ ಅಭಿಮಾನಿ ಎಂದು ಅಪ್ಪಾಜಿ ಹಾಡಿಗೆ ಹಾಡಿ ಕುಣಿದು ಫಿನಾಲೆಗೆ ಮತ್ತಷ್ಟು ರಂಗನ್ನು ತಂದಿದ್ದಾರೆ.

ಈ ಸುದ್ದಿಯನ್ನೂ ಓದಿ | Chikkaballapur News: ನ.24 ರಂದು ಆದಿಕವಿ, ವಾಗ್ದೇವಿ ಪುರಸ್ಕಾರ ಪ್ರದಾನ ಸಮಾರಂಭ

ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಯಿಂದ 11 ಗಂಟೆಯವರೆಗೆ ಜೀ಼ ಕನ್ನಡದ ‘ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್’ ಅದ್ದೂರಿ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ವಿನ್ನರ್ ಪಟ್ಟ ಯಾರ ಮುಡಿಗೇರಲಿದೆ ಎಂಬುದು ಕುತೂಹಲ ಮೂಡಿಸಿದೆ.