ಮುಂಬೈ: ರಿಲಯನ್ಸ್ ಬ್ರಾಂಡ್ ಯುಕೆ (ಆರ್‌ಬಿಎಲ್ ಯುಕೆ) ಜತೆಗೆ ಜಂಟಿ ಉದ್ಯಮಕ್ಕೆ ಮದರ್ ಕೇರ್ ಮುಂದಾಗಿದೆ. ಈ ಮೂಲಕವಾಗಿ ದಕ್ಷಿಣ ಏಷ್ಯಾದ ತನ್ನ ಕಾರ್ಯತಂತ್ರದಲ್ಲಿ ಬದಲಾವಣೆಗೆ ಮುಂದಾಗಿದೆ. ಈ ಹೊಸ ಉದ್ಯಮದಲ್ಲಿ ರಿಲಯನ್ಸ್ (Reliance) ಶೇಕಡಾ 51ರಷ್ಟು ಪಾಲು ಹೊಂದಿದ್ದರೆ, ಮದರ್ ಕೇರ್ ಪಾಲು ಶೇಕಡಾ 49ರಷ್ಟು ಇರುತ್ತದೆ. ಈ ಹೊಸ ಉದ್ಯಮದ ಮೂಲಕ ಭಾರತ, ನೇಪಾಳ. ಶ್ರೀಲಂಕಾ, ಭೂತಾನ್ ಹಾಗೂ ಬಾಂಗ್ಲಾದೇಶ ವ್ಯವಹಾರಗಳನ್ನು ನೋಡಿಕೊಳ್ಳಲಾಗುತ್ತದೆ.
ಆರ್‌ಬಿಎಲ್ ಯುಕೆ ಹದಿನಾರು ಮಿಲಿಯನ್ ಯುರೋ, ಅಂದರೆ 145,82,24,000 ರೂಪಾಯಿ, ಅಂದರೆ ಈ ದಿನದ ಲೆಕ್ಕಕ್ಕೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ನೂರಾ ನಲವತ್ತಾರು ಕೋಟಿಯಷ್ಟಾಗುತ್ತದೆ.
ಈ ಸುದ್ದಿಯನ್ನೂ ಓದಿ | Comedy kiladigalu Premier League: ಅ.19,20 ರಂದು ʼಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ʼ ನ ಗ್ರ್ಯಾಂಡ್ ಫಿನಾಲೆ
“ಮದರ್ ಕೇರ್ ಎಂಬುದು ವರ್ಷಗಳಿಂದ ಭಾರತದಲ್ಲಿ ಪೋಷಕರಿಗೆ ನಂಬಿಕಸ್ತ ಹೆಸರು. ಈ ಜಂಟಿ ಉದ್ಯಮವು ನಮ್ಮ ಪಾಲುದಾರಿಕೆಯಲ್ಲಿ ಹೊಸ ಅಧ್ಯಾಯವನ್ನು ತೆರೆಯಲಿದೆ” ಎಂದು ರಿಲಯನ್ಸ್ ಬ್ರ್ಯಾಂಡ್ಸ್ ಕಾರ್ಯನಿರ್ವಾಹಕ ನಿರ್ದೇಶಕ ದರ್ಶನ್ ಮೆಹ್ತಾ ಹೇಳಿದ್ದಾರೆ.
ಮೊದಲಿಗೆ 2018ನೇ ಇಸವಿಯಲ್ಲಿ ಯು.ಕೆ. ಮೂಲದ ಮದರ್ ಕೇರ್ ಬ್ರ್ಯಾಂಡ್ ಅನ್ನು ಭಾರತೀಯ ಮಾರುಕಟ್ಟೆಗೆ ರಿಲಯನ್ಸ್ ಬ್ರ್ಯಾಂಡ್ಸ್ ಹಕ್ಕುಗಳನ್ನು ಸ್ವಾಧೀನ ಮಾಡಿಕೊಂಡಿತ್ತು. ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಹೊರತುಪಡಿಸಿ, ಇಪ್ಪತ್ತೈದು ನಗರಗಳಲ್ಲಿ ಎಂಬತ್ತೇಳು ಮಳಿಗೆಗಳನ್ನು ರಿಲಯನ್ಸ್ ಬ್ರ್ಯಾಂಡ್ಸ್ ನಡೆಸುತ್ತಿದೆ.
“ರಿಲಯನ್ಸ್ ಜತೆಗೆ ಇನ್ನೂ ನಿಕಟವಾಗಿ ಕೆಲಸ ಮಾಡುವ ಈ ಬಾಂಧವ್ಯದೊಂದಿಗೆ ಈ ಒಪ್ಪಂದವು ದಕ್ಷಿಣ ಏಷ್ಯಾದಲ್ಲಿ ನಮ್ಮ ಕಾರ್ಯಾಚರಣೆಯನ್ನು ಇನ್ನಷ್ಟು ಬಲಗೊಳಿಸಿದೆ. ನಮ್ಮ ಜತೆಗೆ ಈಗಾಗಲೇ ಫ್ರಾಂಚೈಸಿ ಭಾಗೀದಾರ ಕೂಡ ಆಗಿರುವ, ಮದರ್ ಕೇರ್ ಬ್ರ್ಯಾಂಡ್ ಸಾಮರ್ಥ್ಯವನ್ನು ಸ್ಪಷ್ಟವಾಗಿ ತಿಳಿದಿರುವಂಥ ರಿಲಯನ್ಸ್ ಜತೆಗೆ ಇದು ಸಾಧ್ಯವಾಗುತ್ತಿದೆ” ಎಂದು ಮದರ್ ಕೇರ್ ಮುಖ್ಯಸ್ಥರಾದ ಕ್ಲೈವ್ ವ್ಹೀಲಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Star Saree Fashion: ಹೊಸ ಜಮಾನಾದ ಹುಡುಗಿಯರ ಗಮನ ಸೆಳೆದಿದೆ ನಟಿ ತೃಪ್ತಿ ದಿಮ್ರಿಯ 1.65 ಲಕ್ಷ ರೂ. ಮೌಲ್ಯದ ಸೀರೆ!
ರಿಲಯನ್ಸ್ ಬ್ರ್ಯಾಂಡ್ಸ್ ಎಂಬುದು ರಿಲಯನ್ಸ್ ರೀಟೇಲ್ ವೆಂಚರ್ಸ್ ಅಂಗಸಂಸ್ಥೆಯಾಗಿದೆ. 2017ರಲ್ಲಿ ಇದು ಕಾರ್ಯಾರಂಭ ಮಾಡಿತು. ಫ್ಯಾಷನ್ ಹಾಗೂ ಲೈಫ್ ಸ್ಟೈಲ್ ವಿಭಾಗದಲ್ಲಿ ಲಕ್ಷುರಿಯಿಂದ ಪ್ರೀಮಿಯಂ ಸೆಗ್ಮೆಂಟ್ ತನಕ ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್‌ಗಳನ್ನು ಹುಟ್ಟುಹಾಕಬೇಕು ಮತ್ತು ಕಟ್ಟಬೇಕು ಎಂಬ ಗುರಿಯೊಂದಿಗೆ ಇದನ್ನು ಆರಂಭಿಸಲಾಗಿದೆ.