Saturday, 23rd November 2024

MK Satlin : ತಮಿಳುನಾಡಲ್ಲಿ ಸಿಎಂ, ರಾಜ್ಯಪಾಲರ ನಡುವೆ ನಾಡಗೀತೆ ಸಮರ; ಆರೋಪ, ಪ್ರತ್ಯಾರೋಪ

MK Stalin

ಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Satlin) ಮತ್ತು ರಾಜ್ಯಪಾಲ ಆರ್.ಎನ್.ರವಿ ನಡುವೆ ರಾಷ್ಟ್ರಗೀತೆ ಹಾಡುವ ವಿಚಾರವಾಗಿ ವಾಕ್ಸಮರ ಭುಗಿಲೆದ್ದಿದೆ. ಪ್ರಕಾರ, ಚೆನ್ನೈನ ದೂರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಹಿಂದಿ ಮಾಸದ ಸಮಾರೋಪ ಸಮಾರಂಭ ಡಿಡಿ ಚೆನ್ನೈನಲ್ಲಿ ಪ್ರಸಾರವಾಗಿತ್ತು. ಗಾಯಕರು ಚೆನ್ನೈನ ಗೀತೆಯನ್ನು ಹಾಡಿದಾಗ “ತೆಕ್ಕನಮುಮ್ ಆದಿಲ್ ಸಿರಂತ ದ್ರಾವಿಡ ನಾಲ್ ತಿರು ನಾಡುಮ್” (ತೆಕ್ಕನಂ ಮತ್ತು ಅದರಲ್ಲಿ ಅತ್ಯುತ್ತಮ ದ್ರಾವಿಡ ದೇಶ) ಎಂಬ ವಾಕ್ಯವನ್ನು ಬಿಟ್ಟಿದ್ದರು. ಇದಕ್ಕೆ ಕೆಂಡಾಮಂಡಲವಾಗಿರುವ ಸಿಎಂ ಸ್ಟಾಲಿನ್‌, ರಾಜ್ಯಪಾಲ ರವಿ ಅವರನ್ನು ಆರ್ಯ ಎಂದು ಕರೆದಿದ್ದಾರೆ. ಹೀಗಾಗಿ ಆರೋಪ, ಪ್ರತ್ಯಾರೋಪಗಳು ಜೋರಾಗಿವೆ.

ರಾಜ್ಯಪಾಲರು ದೇಶ, ತಮಿಳುನಾಡು ಮತ್ತು ಅದರ ಜನರ ಏಕತೆಯನ್ನು ಅವಮಾನಿಸಿದ್ದಾರೆ ಎಂದು ಸ್ಟಾಲಿನ್ ಆರೋಪಿಸಿದರು. ರವಿ ಅವರನ್ನು ಕೇಂದ್ರ ಸರ್ಕಾರ ವಾಪಸ್ ಕರೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸ್ಟಾಲಿನ್‌ ಒತ್ತಾಯಿಸಿದರು. ಕಾನೂನು ಪಾಲಿಸದ ಮತ್ತು ತನ್ನ ಇಚ್ಛೆಯಂತೆ ವರ್ತಿಸುವ ವ್ಯಕ್ತಿಯು ಆ ಹುದ್ದೆಯನ್ನು ಅಲಂಕರಿಸಲು ಅರ್ಹನಲ್ಲ. ರವಿ ರಾಜ್ಯಪಾಲರೇ ಅಥವಾ ‘ಆರ್ಯರೇ’ ಎಂದು ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪ್ರತಿಪಕ್ಷ ಎಐಎಎಂಡಿಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಕೂಡ ರಾಜ್ಯ ಪಾಲರ ಕ್ರಮವನ್ನು ವಿರೋಧಿಸಿದ್ದಾರೆ.

ಜನಾಂಗೀಯ ನಿಂದನೆ: ತಮಿಳುನಾಡು ರಾಜ್ಯಪಾಲರ ಆರೋಪ

ಸ್ಟಾಲಿನ್ ಅವರ ಪ್ರತಿಕ್ರಿಯೆಯನ್ನು “ವಿಷಾದನೀಯ” ಎಂದು ಕರೆದ ರಾಜ್ಯಪಾಲರು, ಅವರು ಜನಾಂಗೀಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಸ್ಟಾಲಿನ್ ಅವರು ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ತಮ್ಮ ವಿರುದ್ಧದ ಆರೋಪವು ದುರದೃಷ್ಟವಶಾತ್ ಕಳಪೆ ಮಟ್ಟದ್ದು. ಮುಖ್ಯಮಂತ್ರಿಯ ಉನ್ನತ ಸಾಂವಿಧಾನಿಕ ಹುದ್ದೆಯ ಘನತೆ ಕಡಿಮೆ ಮಾಡುತ್ತದೆ ಎಂದು ರಾಜ್ಯಪಾಲರು ಹೇಳಿದರು.

ಇದನ್ನೂ ಓದಿ: Vladimir Putin : ಉಕ್ರೇನ್ ಜತೆಗಿನ ಸಂಘರ್ಷ ಕೊನೆಗೊಳಿಸಲು ಮೋದಿಯ ಪ್ರಯತ್ನವನ್ನು ಶ್ಲಾಘಿಸಿದ ರಷ್ಯಾ ಪ್ರಧಾನಿ ಪುಟಿನ್‌

ಕ್ಷಮೆಯಾಚಿಸಿದ ದೂರದರ್ಶನ ಕೇಂದ್ರ

ವಿವಾದ ಉಲ್ಬಣಗೊಳ್ಳುತ್ತಿದ್ದಂತೆ, ಚೆನ್ನೈನ ದೂರದರ್ಶನ ಕೇಂದ್ರವು ಕ್ಷಮೆಯಾಚಿಸಿದೆ. ಇದನ್ನು “ಕಣ್ತಪ್ಪು” ಎಂದು ಕರೆದಿದೆ. ಗಾಯಕರಿಗೆ ತಮಿಳು ಅಥವಾ ನಾಡಗೀತೆಗೆ ಅಗೌರವ ತೋರಿಸುವ ಉದ್ದೇಶವಿಲ್ಲ ಎಂದು ಹೇಳಿದೆ.