Saturday, 23rd November 2024

Remo D’Souza: ಬರೋಬ್ಬರಿ ₹11.96 ಕೋಟಿ ವಂಚನೆ; ರೆಮೊ ಡಿಸೋಜಾ, ಪತ್ನಿ ಲಿಜೆಲ್‌ ವಿರುದ್ಧ ಕೇಸ್‌ ದಾಖಲು

Remo D'Souza

ಮುಂಬೈ: ಖ್ಯಾತ ಡಾನ್ಸರ್‌(Dancer) ಹಾಗೂ ನೃತ್ಯ ನಿರ್ದೇಶಕ ರೆಮೊ ಡಿಸೋಜಾ(Remo D’Souza) ಮತ್ತು ಅವರ ಪತ್ನಿ ಲಿಜೆಲ್ ಡಿಸೋಜಾ ಸೇರಿದಂತೆ ಐವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ನೃತ್ಯ ತಂಡಕ್ಕೆ 11 .96 ಕೋಟಿ ವಂಚನೆ ಆರೋಪದಡಿಯಲ್ಲಿ ಮಹಾರಾಷ್ಟ್ರದ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೆಮೋ, ಲಿಜೆಲ್‌ ಮತ್ತು ಇತರ ಐವರ ವಿರುದ್ಧ ನೃತ್ಯಗಾರ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಅಕ್ಟೋಬರ್ 16 ರಂದು ಮೀರಾ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇನ್ನು ರೆಮೋ ಮತ್ತು ಇತರ ನಾಲ್ವರ ವಿರುದ್ಧ ಸೆಕ್ಷನ್ 465 (ನಕಲಿ), 420 (ವಂಚನೆ) ಮತ್ತು ಭಾರತೀಯ ದಂಡ ಸಂಹಿತೆಯ ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?

ಎಫ್‌ಐಆರ್‌ನ ಪ್ರಕಾರ, ದೂರುದಾರ ಯುವತಿ ಮತ್ತು ಅವರ ತಂಡವು 2018 ಮತ್ತು ಜುಲೈ 2024 ರ ನಡುವೆ ತಮಗೆ ವಂಚನೆಯಾಗಿದೆ ಎಂದು ಆರೋಪಿಸಿದ್ದಾರೆ. ತಮ್ಮ ತಂಡವು ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಿ ನಗದು ಬಹುಮಾನವನ್ನು ಗೆದ್ದಿದ್ದರು. ರೆಮೋ ಮತ್ತು ಅವರ ತಂಡ ತಾವೇ ನಗದನ್ನು ಗೆದ್ದಿರುವಂತೆ ಬಿಂಬಿಸಿ ಪೋಸ್ ನೀಡಿ ₹11.96 ಕೋಟಿ ಬಹುಮಾನವನ್ನು ಪಡೆದು ಕೊಂಡಿದ್ದಾರೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. ಪ್ರಕರಣದ ಇತರ ಆರೋಪಿಗಳಾದ ಓಂಪ್ರಕಾಶ್ ಶಂಕರ್ ಚೌಹಾಣ್, ಫ್ರೇಮ್ ಪ್ರೊಡಕ್ಷನ್ ಕಂಪನಿ ರೋಹಿತ್ ಜಾಧವ್, ಪೊಲೀಸ್ ಸಿಬ್ಬಂದಿ ವಿನೋದ್ ರಾವುತ್ ಮತ್ತು ರಮೇಶ್ ಗುಪ್ತಾ ಅವರನ್ನು ಪೋಲೀಸರು ವಿಚಾರಣಗೊಳಪಡಿಸಿದ್ದಾರೆ.

ಇದನ್ನೂ ಓದಿ : Baahubali 3 : ಬಾಹುಬಲಿ 3ಕ್ಕೆ ಪ್ರಭಾಸ್‌, ರಾಜಮೌಳಿ ರೆಡಿ! ಸಿನಿಮಾ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ದೇಶಕ

ನೃತ್ಯ ಸಂಯೋಜನೆ ಮಾತ್ರ ಅಲ್ಲದೆ , ರೆಮೋ ಅವರು 2009 ರಿಂದ ಇಲ್ಲಿಯವರೆಗೆ ಅನೇಕ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿದ್ದಾರೆ. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್, ಜಲಕ್ ದಿಖ್ಲಾ ಜಾ, ಡ್ಯಾನ್ಸ್ ಕೆ ಸೂಪರ್‌ಸ್ಟಾರ್ಸ್, ಡ್ಯಾನ್ಸ್ ಪ್ಲಸ್, ಡ್ಯಾನ್ಸ್ ಚಾಂಪಿಯನ್ಸ್, ಭಾರತದ ಅತ್ಯುತ್ತಮ ಡ್ಯಾನ್ಸರ್, ಡಿಐಡಿ ಲಿಟಲ್ ಮಾಸ್ಟರ್, ಮತ್ತು ಡಿಐಡಿ ಸೂಪರ್ ಮಾಮ್ಸ್, ಸೇರಿಂದತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಕಾಣಿಕೊಂಡಿದ್ದಾರೆ. 2018 ಮತ್ತು 2024 ರ ನಡುವೆ, ಡ್ಯಾನ್ಸ್ ಪ್ಲಸ್ (ಸೀಸನ್ 4, 5, 6), ಭಾರತದ ಅತ್ಯುತ್ತಮ ಡ್ಯಾನ್ಸರ್, ಹಿಪ್ ಹಾಪ್ ಇಂಡಿಯಾ ಮತ್ತು ಡ್ಯಾನ್ಸ್ ಪ್ಲಸ್ ಪ್ರೊ ಅನ್ನು ಇತರರ ಜೊತೆಗೆ ಆಯೋಜಿಸಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಇನಾಯತ್ ವರ್ಮಾ ಅಭಿನಯದ ಅವರ ಚಿತ್ರ ಬಿ ಹ್ಯಾಪಿ ಚಿತ್ರತಂಡದಲ್ಲಿ ರೆಮೋ ಇದ್ದು, ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ರೆಮೋ ಮತ್ತು ಲಿಜೆಲ್ ನಿರ್ಮಿಸಿದ ಈ ಚಿತ್ರವು ಒಬ್ಬ ತಂದೆ ಮತ್ತು ಅವನ ಮಗಳ ಕಥೆಯನ್ನು ಹೇಳುತ್ತದೆ. ಚಿತ್ರದಲ್ಲಿ ನೋರಾ ಫತೇಹಿ, ನಾಸರ್, ಜಾನಿ ಲಿವರ್ ಮತ್ತು ಹರ್ಲೀನ್ ಸೇಥಿ ಕೂಡ ನಟಿಸಿದ್ದಾರೆ.