ಟೆಲ್ ಅವಿವ್: ಕೆಲವು ದಿನಗಳ ಹಿಂದೆಯಷ್ಟೇ ಇಸ್ರೇಲ್ ಸೇನೆಯ ವೈಮಾನಿಕ ದಾಳಿಯಲ್ಲಿ ಬಲಿಯಾಗಿದ್ದ ಹಮಾಸ್ ಉಗ್ರರ ಮುಖ್ಯಸ್ಥ(Hamas chief) ಯಹ್ಯಾ ಸಿಹ್ವಾರ್(Yahya Sinwar)ನ ಮತ್ತೊಂದು ವಿಡಿಯೋವೊಂದು ವೈರಲ್ ಆಗಿದೆ. ಇದು ಕಳೆದ ವರ್ಷ ಅಕ್ಟೋಬರ್ 6ರಂದು ಅಂದರೆ ಯಹೂದಿಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮುನ್ನ ರೆಕಾರ್ಡ್ ಆಗಿರುವ ದೃಶ್ಯವಾಗಿದೆ. ಇದೀಗ ಯಹ್ಯಾ ಹತ್ಯೆಯಾದ ಕೆಲವೇ ಕೆಲವು ದಿನಗಳ ನಂತರ ಈ ವಿಡಿಯೋ ರಿಲೀಸ್ ಆಗಿದೆ.
🎥DECLASSIFIED FOOTAGE:
— LTC Nadav Shoshani (@LTC_Shoshani) October 19, 2024
Sinwar hours before the October 7 massacre: taking down his TV into his tunnel, hiding underneath his civilians, and preparing to watch his terrorists murder, kindap and rape. pic.twitter.com/wTAF9xAPLU
IDF ನ ಅಂತರರಾಷ್ಟ್ರೀಯ ವಕ್ತಾರರಾದ ಲೆಫ್ಟಿನೆಂಟ್ ಕರ್ನಲ್ ನಡಾವ್ ಶೋಶಾನಿ ಅವರ ಪ್ರಕಾರ, ಅಕ್ಟೋಬರ್ 7ರಂದು ಯಹೂದಿ ರಾಜ್ಯದಲ್ಲಿ ಹಮಾಸ್ ದಾಳಿಗಿಂತ ಕೆಲವು ಕೆಲವು ಗಂಟೆಗಳ ಮೊದಲು ಅಂದರೆ ಅಕ್ಟೋಬರ್ 6ರ ವಿಡಿಯೋ ಇದಾಗಿದೆ. ಅಕ್ಟೋಬರ್ 7 ರ ಹತ್ಯಾಕಾಂಡಕ್ಕೆ ಕೆಲವು ಗಂಟೆಗಳ ಮೊದಲು ಸಿನ್ವಾರ್ ತನ್ನ ಟಿವಿಯನ್ನು ತನ್ನ ಸುರಂಗಕ್ಕೆ ಇಳಿಸುವುದು, ಅವನ ನಾಗರಿಕರ ಕೆಳಗೆ ಅಡಗಿಕೊಳ್ಳುವುದು ಮತ್ತು ಅವನ ಭಯೋತ್ಪಾದಕರ ಹತ್ಯೆ, ಅಪಹರಣ ಮತ್ತು ಅತ್ಯಾಚಾರವನ್ನು ವೀಕ್ಷಿಸಲು ತಯಾರಿ ನಡೆಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
“Killing Sinwar is the result of a year of operational and intelligence efforts to bring him and other Hamas leaders to justice. Sinwar has been eliminated, but our mission is not over.”
— Israel Defense Forces (@IDF) October 19, 2024
Watch IDF Spokesperson RAdm. Daniel Hagari’s statement regarding the impact of eliminating… pic.twitter.com/INbLoMWBJx
ಮೂರು ನಿಮಿಷಗಳ ಈ ಕ್ಲಿಪ್ಪಿಂಗ್ಸ್‌ನಲ್ಲಿ ಸಿನ್ವಾರ್, ಮಕ್ಕಳನ್ನೂ ಒಳಗೊಂಡಂತೆ ತನ್ನ ಕುಟುಂಬದ ಸದಸ್ಯರೊಂದಿಗೆ ಒಂದು ಬಂಕರ್‌ಗೆ ಚೀಲಗಳನ್ನು ಹೊತ್ತುಕೊಂಡು ಹೋಗುತ್ತಿರುವುದು ಕೂಡ ವಿಡಿಯೋದಲ್ಲಿ ಕಂಡುಬಂದಿದೆ.
ಈ ಸುದ್ದಿಯನ್ನೂ ಓದಿ: Benjamin Netanyahu: ಯಹ್ಯಾ ಸಿನ್ವಾರ್ ಹತ್ಯೆ ಬೆನ್ನಲ್ಲೇ ನೆತಹ್ಯಾಹು ನಿವಾಸದ ಮೇಲೆ ಡ್ರೋನ್ ದಾಳಿ!