Tuesday, 26th November 2024

IND vs NZ 2nd Test: ಕಿವೀಸ್‌ ಟೆಸ್ಟ್‌ನಿಂದ ರಿಷಭ್‌ ಪಂತ್‌ ಔಟ್‌?

ಮುಂಬಯಿ: ನ್ಯೂಜಿಲ್ಯಾಂಡ್‌(IND vs NZ 2nd Test) ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಮೊಣಕಾಲಿಗೆ ಚೆಂಡು ಬಡಿದು ಗಾಯಗೊಂಡಿದ್ದ ರಿಷಭ್‌ ಪಂತ್‌(Rishabh Pant) ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಉಳಿದಿರುವ ಎರಡು ಟೆಸ್ಟ್‌ ಪಂದ್ಯಗಳಿಂದ ಕೈಬಿಡಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ.

ನ್ಯೂಜಿಲೆಂಡ್‌ನ (NewZealand) ಮೊದಲ ಇನ್ನಿಂಗ್ಸ್‌ ಬ್ಯಾಟಿಂಗ್‌ ವೇಳೆ ರವೀಂದ್ರ ಜಡೇಜಾ(Ravindra Jadeja) ಬೌಲ್ ಮಾಡಿದ ಚೆಂಡು ಸ್ಪಿನ್ ಆಗಿ ನೇರವಾಗಿ ಶಸ್ತ್ರಚಿಕಿತ್ಸೆ ಆಗಿದ್ದ ಮೊಣಕಾಲಿನ ಚಿಪ್ಪಿಗೆ ಬಡಿದಿತ್ತು. ತೀವ್ರ ನೋವಿನಿಂದ ನರಳಾಡಿದ್ದ ಪಂತ್‌ ಬಳಿಕ ವೈದಕೀಯ ಸಿಬ್ಬಂದಿ ನೆರವಿನಿಂದ ಮೈದಾನ ತೊರೆದಿದ್ದರು. ಚೆಣಡು ಬಡಿದ ರಭಸಕ್ಕೆ ಕಾಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಈ ನೋವಿನ ಮಧ್ಯೆಯೂ ಪಂತ್‌ ಕಾಲಿಗೆ ಬ್ಯಾಡೆಂಜ್‌ ಸುತ್ತಿಕೊಂಡು ಬ್ಯಾಟಿಂಗ್‌ ನಡೆಸಿದ್ದರು. ಆದರೆ ಮುಂದಿನ ಪಂದ್ಯದಲ್ಲಿ ಅವರನ್ನು ಆಡಿಸದಿರಲು ಬಿಸಿಸಿಐ ಮತ್ತು ತಂಡದ ಮ್ಯಾನೆಜ್‌ಮೆಂಟ್‌ ನಿರ್ಧಾರ ಕೈಗೊಂಡಿರುವುದಾಗಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಆಸ್ಟ್ರೇಲಿಯಾ ವಿರುದ್ಧದ ವರ್ಷಾಂತ್ಯದಲ್ಲಿ ನಡೆಯುವ 5ಪಂದ್ಯಗಳ ಸರಣಿಯ ಹಿನ್ನಲೆ ಮುನ್ನೆಚ್ಚರಿಕಾ ಕ್ರಮವಾಗಿ ಪಂತ್‌ಗೆ ವಿಶ್ರಾಂತಿ ನೀಡಲು ತೀರ್ಮಾನಿಸಲಾಗಿದೆ. ಪಂತ್‌ ಅನುಪಸ್ಥಿತಿಯಲ್ಲಿ ಧ್ರುವ್‌ ಜುರೇಲ್‌ ಮುಂದಿನ ಟೆಸ್ಟ್‌ನಲ್ಲಿ ಕೀಪಿಂಗ್‌ ನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಇದನ್ನೂ ಓದಿ IND vs NZ: ರೋಹಿತ್‌ ನಿರ್ಧಾರ ಪ್ರಶ್ನಿಸಿದ ಮಂಜ್ರೇಕರ್

ಪಂತ್‌ ಕೂಡ ಟ್ವಿಟರ್‌ ಎಕ್ಸ್‌ನಲ್ಲಿ ಪೋಸ್ಟ್‌ ಒಂದನ್ನು ಮಾಡಿದ್ದು, ಇದನ್ನು ನೋಡುವಾಗ ಅವರು ಮುಂದಿನ ಪಂದ್ಯಕ್ಕೆ ವಿಶ್ರಾಂತಿ ಪಡೆಯುವುದು ಖಚಿತ ಎನುವಂತಿದೆ. “ಈ ಆಟವು ನಿಮ್ಮ ಮಿತಿಗಳನ್ನು ಪರೀಕ್ಷಿಸುತ್ತದೆ, ನಿಮ್ಮನ್ನು ಕೆಡವುತ್ತದೆ, ನಿಮ್ಮನ್ನು ಮೇಲಕ್ಕೆತ್ತಿ ಮತ್ತೆ ಹಿಂದಕ್ಕೆ ಎಸೆಯುತ್ತದೆ. ಆದರೆ ಇದನ್ನು ಪ್ರೀತಿಸುವವರು ಪ್ರತಿ ಬಾರಿಯೂ ಬಲಶಾಲಿಯಾಗುತ್ತಾರೆ” ಎಂದು ಪಂತ್ ಬರೆದುಕೊಂಡಿದ್ದಾರೆ. ನಾಯಕ ರೋಹಿತ್‌ ಶರ್ಮಾ ಕೂಡ ದ್ವಿತೀಯ ಟೆಸ್ಟ್‌ಗೂ ಮುನ್ನ ಪಂತ್‌ಗೆ ಹೆಚ್ಚಿನ ವಿಶ್ರಾಂತಿ ಅಗತ್ಯ ಎಂದು ಹೇಳಿದ್ದರು.

ಆಸ್ಟ್ರೇಲಿಯಾ ವಿರುದ್ಧ ಮೂರು ವರ್ಷಗಳ ಹಿಂದೆ ಗಬ್ಬಾ ಮೈದಾನದಲ್ಲಿ ಪಂತ್‌ ಆಡಿದ್ದ ಇನಿಂಗ್ಸ್ ಯಾರೂ ಮರೆಯಲು ಸಾಧ್ಯವಿಲ್ಲ. ಭಾರತಕ್ಕೆ ಗೆಲುವು ಅಸಾಧ್ಯ ಎಂದೇ ಪರಿಗಣಿಸಿದ್ದ ಪಂದ್ಯದಲ್ಲಿ ಪಂತ್‌ ಏಕಾಂಗಿಯಾಗಿ ಬಿರುಸಿನ ಶೈಲಿಯಲ್ಲಿ ಬ್ಯಾಟ್‌ ಬೀಸುತ್ತ ಸಾಗಿ ಕಾಂಗರೂಗಳಿಗೆ ಸೋಲಿನ ರುಚಿ ತೋರಿಸಿದ್ದರು. 32 ವರ್ಷಗಳಿಂದ ಬ್ರಿಸ್ಬೇನ್‌ನಲ್ಲಿ ಸೋಲನ್ನೇ ಕಾಣದ ಆಸ್ಟ್ರೇಲಿಯಾ ಈ ಅನಿರೀಕ್ಷಿತ ಆಘಾತಕ್ಕೆ ತತ್ತರಿಸಿ ಬಿಕ್ಕಳಿಸಿತ್ತು.!. ಈ ಬಾರಿಯೂ ಆಸೀಸ್‌ ಸರಣಿಯಲ್ಲಿ ಪಂತ್‌ ಪಾತ್ರ ಬಹುಮುಖ್ಯ. ಇದೇ ಕಾರಣಕ್ಕೆ ಅವರಿಗೆ ಕಿವೀಸ್‌ ವಿರುದ್ಧದ ಉಳಿದ ಟೆಸ್ಟ್‌ಗೆ ರೆಸ್ಟ್‌ ನೀಡುವ ಸಾಧ್ಯತೆ ಅಧಿಕ.