Wednesday, 23rd October 2024

Actor Bala: ಮಲಯಾಳಂ ನಟ ಬಾಲಾ ಮನೆಗೆ ಮಧ್ಯರಾತ್ರಿ ನುಗ್ಗಲು ಯತ್ನಿಸಿದ ಮಹಿಳೆ; ನಟ ಕೊಟ್ಟ ಉತ್ತರವೇನು?

Actor Bala

ತಿರುವನಂತಪುರಂ: ಮಾಜಿ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸ್‍ ಬಂಧನಕ್ಕೊಳಗಾದ ನಂತರ ಜಾಮೀನು ಪಡೆದು ಹೊರಬಂದ ಮಲಯಾಳಂ ನಟ ಬಾಲಾ(Actor Bala) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ತನ್ನ ಮನೆಗೆ ನುಗ್ಗಲು ಪ್ರಯತ್ನಿಸಿದ್ದಾಳೆ ಎಂದು ನಟ ತಮ್ಮ  ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದರೆ ಯಾರೋ ತಮ್ಮನ್ನು ಸಮಸ್ಯೆಯಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಟ ಆರೋಪಿಸಿದ್ದಾರೆ.

ತಮ್ಮ ಫೇಸ್‍ಬುಕ್ ವಿಡಿಯೊದಲ್ಲಿ ಮಾತನಾಡಿದ ನಟ, ಮಹಿಳೆ ತಮ್ಮ ಮನೆಗೆ ಬಂದಿರುವುದು ಸಮಸ್ಯೆ ಸೃಷ್ಟಿ ಮಾಡಲು. ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ಈ ಎಲ್ಲ ಘಟನೆಗಳನ್ನು ಎದುರಿಸುತ್ತಿದ್ದೇನೆ. ಆದರೂ, ನಾನು ನನ್ನ ಮಾತನ್ನು ಉಳಿಸಿಕೊಳ್ಳುತ್ತಿದ್ದೇನೆ.” ಎಂದು ಹೇಳಿಕೊಂಡಿದ್ದಾರೆ.

ವರದಿಯ ಪ್ರಕಾರ, ನಟ ತಮ್ಮ ಫೇಸ್‍ಬುಕ್‍ ಪೇಜ್‍ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮುಂಜಾನೆ 3 ಗಂಟೆಯ ಸುಮಾರಿಗೆ ಒಬ್ಬ ಪುರುಷ ಮತ್ತು ಮಗುವನ್ನು ಎತ್ತಿಕೊಂಡ ಮಹಿಳೆ ನಟನ ಮನೆಯ ಕಾಲಿಂಗ್ ಬೆಲ್ ಒತ್ತಿ ಮನೆಗೆ ನುಗ್ಗಲು ಪ್ರಯತ್ನಿಸುತ್ತಿರುವುದು ಸೆರೆಯಾಗಿದೆ.  ಇದನ್ನು ನೋಡಿದ ನಟ ಯಾರೋ  ಅವರನ್ನು ಬಲೆಗೆ ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.  

ಇದನ್ನೂ ಓದಿ: ವಿದ್ಯಾರ್ಥಿನಿಯೊಂದಿಗೆ ಕಾರಿನಲ್ಲೇ ಚಕ್ಕಂದವಾಡಿದ ಬಾಬಾ! ವಿಡಿಯೊ ನೋಡಿ ಜನಾಕ್ರೋಶ

ನಟ ಬಾಲಾ ಅವರ ಮಾಜಿ ಪತ್ನಿ ಅಮೃತಾ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮನ್ನು ಮತ್ತು ತಮ್ಮ ಮಗಳನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ನಟನ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ಬಾಲಾ ನಾವಿಬ್ಬರು ದೂರವಾದ ಮೇಲೂ ಮಗಳಿಗೆ ಕಿರುಕುಳ ನೀಡಿದ್ದ ಎಂದು ತಿಳಿಸಿದ್ದಾರೆ. ಹಾಗಾಗಿ ಪೊಲೀಸರು ಬಾಲಾ ಅವರನ್ನು ಅವರ ಮನೆಯಿಂದ ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದರು. ಸ್ಥಳೀಯ ನ್ಯಾಯಾಲಯವು ಬಂಧಿಸಿದ ಕೆಲವೇ ಗಂಟೆಗಳ ನಂತರ ನಟನಿಗೆ ಷರತ್ತುಬದ್ಧ ಜಾಮೀನು ನೀಡಿತ್ತು.