ಸರ್ವರ್ ದೋಷ
ರೇಷನ್ ಪಡೆಯಲು ಪರದಾಟ
ಕೆಎಸ್ಡಿಸಿ ಸರ್ವರ್ಗೆ ಸ್ಥಳಾಂತರ
ವೀರೇಶ ಎಸ್ ಕೆಂಭಾವಿ, ಯಾದಗಿರಿ
ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರಕ್ಕೆ(ಕೆಎಸ್ಡಿಸಿ) ಸರ್ವರ್ ವರ್ಗಾವಣೆ
ಯಿಂದಾಗಿ ತೊಡುಕು ಉಂಟಾಗಿ ದಸರಾ ಒಳಗಾಗಿ ಸಿಗಬೇಕಾದ ಅಕ್ಟೋಬರ್ ಮಾಹೆಯ ಪಡಿತರ ಧಾನ್ಯ
ದೀಪಾವಳಿ ಬರುವರೆಗೂ ಸಿಗುವ ಲಕ್ಷಣ ಗೋಚರಿಸುತ್ತಿಲ್ಲ. ಕಳೆದ ಮೂರು ನಾಲ್ಕು ದಿನಗಳಿಂದ ಹಿಂದೆ
ಎನ್ಐಸಿ ಸರ್ವರ್ನಿಂದ ಕೆಎಸ್ಡಿಸಿ ಸರ್ವರ್ಗೆ ದತ್ತಾಂಶ ಬದಲಾವಣೆ ಮಾಡುವ ಕಾರ್ಯ ಆರಂಭವಾಗಿರುವ ಹಿನ್ನೆಲೆಯಲ್ಲಿ ಸರ್ವರ್ ಸಮಸ್ಯೆ ಕಾಡುತ್ತಿದೆ. ಇದರ ಪರಿಣಾಮದಿಂದಾಗಿ ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆ
ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅಕ್ಟೋಬರ್ ಪಡಿತರ ವಿತರಣೆಯಲ್ಲಿ ತೊಂದರೆ ಉಂಟಾಗಿದೆ.
ನ್ಯಾಯಬೆಲೆ ಅಂಗಡಿಗಳ ಮುಂದೆ ಪಡಿತರ ಪಡೆಯಲು ಫಲಾನುಭವಿಗಳು ತಮ್ಮ ದಿನನಿತ್ಯದ
ಕಾರ್ಯಚಟುವಟಿಕೆ ಬದಿಗಿಟ್ಟು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತರೂ ಸಹಿತ ಸದ್ಯ ಚಾಲ್ತಿಯಲ್ಲಿರುವ
ಹೊಸ ಸರ್ವರ್ನಲ್ಲಿ ದತ್ತಾಂಶ ಲಭ್ಯವಿಲ್ಲದ ಕಾರಣ ಅವರಲ್ಲಿ ಕೆಲವರು ಬರಿಗೈಯಲ್ಲಿ ಮನೆಗೆ ತೆರಳಿದರೆ
ಇನ್ನು ಕೆಲವರು ಸರ್ವರ್ ವೈಫಲ್ಯದಿಂದ ಪಡಿತರ ಸಿಗದೆ ಹಿಡಿಶಾಪ ಹಾಕುತ್ತಾ ಬಂದ ದಾರಿಗೆ ಸುಂಕವಿಲ್ಲ
ಎಂಬಂತೆ ವಾಪಸ್ ಆಗುತ್ತಿದ್ದಾರೆ.
ಹಬ್ಬಗಳ ತಿಂಗಳಾಗಿರುವ ಅಕ್ಟೋಬರ್ ನಲ್ಲಿ ಪಡಿತರ ಧ್ಯಾನ ಸಿಗದೆ ಕೆಲ ಬಡ ಕುಟುಂಬಗಳ ಹಬ್ಬ ಆಚರಣೆಗೆ
ತಡೆಯಾಗಿದೆ. ದಸರಾ ಒಳಗಾಗಿ ಮನೆಯಲ್ಲಿರಬೇಕಾದ ರೇಷನ್ ದೀಪಾವಳಿ ಸನಿಹ ಬಂದರೂ ಸಿಗುತ್ತಿಲ್ಲ ಎಂದು
ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಕುರಿತು ಆಹಾರ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾರೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅಡಿಯಲ್ಲಿ ಪಡಿತರ ವಿತರಣೆ ಶೀಘ್ರದಲ್ಲೇ ಸಹಜ ಸ್ಥಿತಿಗೆ ಬರಲಿದೆ. ರಾಜ್ಯಾದ್ಯಂತ ಸರ್ವರ್ ದೋಷವಿದ್ದು, ಪಡಿತರ ಚೀಟಿದಾರರು ಭಯಪಡುವ ಅಗತ್ಯ ಇಲ್ಲ. ಸಮಸ್ಯೆಯನ್ನು ಸರಿಪಡಿಸುವುದಾಗಿ ಅಭಯಹಸ್ತ ನೀಡಿದ್ದಾರೆ.
ಸರ್ವರ್ ದೋಷಕ್ಕೆ ಕಾರಣವೇನು..?
ರಾಷ್ಟ್ರೀಯ ಮಾಹಿತಿ ಕೇಂದ್ರದ ಸರ್ವರ್ನಲ್ಲಿ ಸೃಷ್ಟಿಯಾದ ಹಲವು ಸಮಸ್ಯೆಗಳಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹೊಸ ಸರ್ವರ್ ಅನ್ನು ಕರ್ನಾಟಕ ಸ್ಟೇಟ್ ಡೇಟಾ ಸೆಂಟರ್(ಕೆಎಸ್ ಡಿಸಿ) ಗೆ ಸ್ಥಳಾಂತರ ಮಾಡಿದೆ. ಇದರಿಂದಾಗಿ ಫಲಾನುಭವಿಗಳ ಡೇಟಾ ರಿಕವರಿ ಮತ್ತು ಸರ್ವರ್ ನಿಧಾನಗತಿಯಲ್ಲಿ ಆಪರೇಟ್ ಆಗುತ್ತಿದ್ದು, ಹೀಗಾಗಿ ಪಡಿತರ ವಿತರಣೆಗೆ ವಿಳಂಬವಾಗುತ್ತಿದೆ.
*
ಸರ್ವರ್ ಸಮಸ್ಯೆ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ ಎದುರಾಗಿದೆ. ಎರಡು ಮೂರು ದಿನಗಳ
ಒಳಗೆ ಸಮಸ್ಯೆಗೆ ಪರಿಹಾರ ಸಿಗಲಿದ್ದು, ಪಡಿತರ ಚೀಟಿದಾರರು ಭಯಪಡುವ ಅಗತ್ಯ ಇಲ್ಲ.
-ಅನೀಲಕುಮಾರ ಢವಳಗಿ
ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ
ಸರಬರಾಜು ಇಲಾಖೆ, ಯಾದಗಿರಿ